ಭಾರತೀಯ ಮಹಿಳೆಯರ ಸಾಧನೆ ಜಗಕೆ ಮಾದರಿ
e- ಸುದ್ದಿ ಬೈಲಹೊಂಗಲ
ಭಾರತ ದೇಶ ಅನರ್ಗ್ಯ ಸ್ತ್ರೀಯರತ್ನಗಳನ್ನು ಜಗತ್ತಿಗೆ ನೀಡಿದೆ. 12ನೇ ಶತಮಾನದ ಶರಣೀಯರಾದಿಯಾಗಿ ಸಾವಿತ್ರಿಬಾಯಿ ಪುಲೆ ದೇಶದ ಪ್ರಥಮ ಶಿಕ್ಷಕಿ, ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರ್ ಚೆನ್ನಮ್ಮ, ಪ್ರಥಮ ಕನ್ನಡ ಕವಿತ್ರಿ ಅಕ್ಕಮಹಾದೇವಿ, ಪ್ರಥಮ ಮಹಿಳಾ ಜಗದ್ಗುರುಡಾ.ಮಾತೆ ಮಹಾದೇವಿ, ಬಾಹ್ಯಾಕಾಶದ ಸಾಧಕಿ ಸುನಿತಾ ವಿಲಿಯಂ, ಕಲ್ಪನಾ ಅನೇಕ ಮಹಿಳಾ ಸಾಧಕೀಯರ ಆತ್ಮಸ್ಥೈರ್ಯ ಧೈರ್ಯ ಇವತ್ತಿನ ಮಹಿಳೆಯರಿಗೆ ಸ್ಪೂರ್ತಿಯಾಗಿದೆ. ಅನೇಕ ಅಡ್ಡಿ ಆತಂಕ ಎಡರು ತೊಡರು ತವಕ ತಲ್ಲಣಗಳನ್ನು ಮೆಟ್ಟಿ ಗುರಿ ತಲುಪುತ್ತಿರುವ ಮಹಿಳೆಯರಿಗೆ ಶಿಕ್ಷಣವೇ ಸ್ಪೂರ್ತಿ ಎಂದು ಸೌದತ್ತಿ ತಾಲೂಕಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಅನ್ನಪೂರ್ಣಾ ಲಂಬೂನ್ನವರ್ ವಿಶ್ವ ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು.
ಸ್ಥಳೀಯ ಪ್ರತ್ರಿಬಸವೇಶ್ವರ ಅನುಭವ ಮಂಟಪದಲ್ಲಿ ಪತ್ರಿ ಬಸವನಗರ ಅಭಿವೃದ್ಧಿ ಸಂಘ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ಹಿರಿಯ ನಾಗರಿಕರ ವೇದಿಕೆ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಜಾಗತಿಕ ಲಿಂಗಾಯತ ಮಹಾಸಭಾಗಳ ಆಶ್ರಯದಲ್ಲಿ ಹಮ್ಮಿಕೊಂಡಿರುವ ವಿಶ್ವ ಮಹಿಳಾ ದಿನಾಚರಣೆ ಕುರಿತು ಅವರು ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಸುವರ್ಣ ಬಿಜಗುಪ್ಪಿ ವಹಿಸಿದ್ದರು. ಸಂಘದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಪ್ರಸ್ತಾವಿಕ ನುಡಿದರು. ರಾಜೇಶ್ವರಿ ಬಾಳಿ ವಚನ ಚಿಂತನೆಗೈದರು ಶೋಭಾ ಸಿದ್ದನಗೌಡರ ಕಾರ್ಯಕ್ರಮ ಉದ್ಘಾಟಿಸಿದರು. ಮರ್ಚೆಂಟ್ ಬ್ಯಾಂಕ್ ನಿರ್ದೇಶಕಿ ಕಮಲಾ ಗಡತನವರನ್ನು ಸನ್ಮಾನಿಸಲಾಯಿತು.
ತಾಲೂಕಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂತೋಷ್ ಕೊಳವಿ ಜಾಗತಿಕ ಲಿಂಗಾಯಿತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷ ರಾಜೇಶ್ವರಿ ದ್ಯಾಮನಗೌಡರ, ಹಿರಿಯ ನಾಗರಿಕ ವೇದಿಕೆಯ ಸದಸ್ಯ ಅನ್ನಪೂರ್ಣ ಕನೋಜ ಕದಳಿ ಮಹಿಳಾ ವೇದಿಕೆ ಪ್ರಧಾನ ಕಾರ್ಯದರ್ಶಿ ಗೌರಮ್ಮ ಕರ್ಕಿ ಅಶೋಕ್ ಸಾಲಿ ಕಲಾವತಿ ಕಡಕೋಳ ಕಮಲವ್ವ ಕಾಡನ್ನವರ್ ಗಿರಿಜಕ್ಕ ಪಾಟೀಲ್ ವೀರಭದ್ರಪ್ಪ ಕಾಪಸೆ ಮಹದೇವ್ ಕರಡಿಗುದ್ದಿ ಮೃತ್ಯುಂಜಯ ಗಡತನ್ನವರ್ ದುಂಡಯ್ಯ ಕುಲಕರ್ಣಿ ಮುಕ್ತಾಯಕ್ಕ ಅಜಗಣ್ಣ ಬಳಗದ ಸದಸ್ಯರು ಉಪಸ್ಥಿತರಿದ್ದರು
ಸುಹಾಸಿನಿ ಶಿಳಿ ಸ್ವಾಗತಿಸಿದರು ಗೀತಾ ಅರಳಿಕಟ್ಟಿ ಪರಿಚಯಿಸಿದರು ಅನುರಾಧ ಕರಡಿಗುದ್ದಿ ವಂದಿಸಿದರು.