ಚಿದ್ಜ್ಯೋತಿ
ಇಂದಿಗೆಂತು ನಾಳೆಗೆಂತು
ಎಂದೆಯದಿಂಗೂ ಚಿಂತಿಸದೆ
ಅಂತರ್ಜಾತಿಯ ಶುಭವಾದ್ಯವ
ಸಂಸ್ಕರಣೆಸಿದೆ ನೀ- ಬಸವಾ
ಜಂಗಮ ಲಿಂಗಮಯ ಮಾಡಿದೆ
ಕಾಯಕದಿ ಕೈಲಾಸ ಧರೆಗಿಳಿಸಿದೆ
ನನ್ನಲ್ಲಿ ಬ್ರಹ್ಮಾಂಡ ತೆರೆದು ತೋರಿದೆ
ಆಚಾರದಲಿ ಸ್ವರ್ಗವ ಮೆರೆಸಿದೆ
ಅನಾಚಾರದಲ್ಲಿ ನರಕ ತೋರಿದೆ
ಅಷ್ಟಾವರಣಕ್ಕೆ ನಾಂದಿ ಹಾಡಿದೆ
ನುಡಿಯೊಳಗಾಗಿ ನಡೆಯದಿದ್ದರೆ
ಜವನವ ತೋರದಿ ಬಸವಾ
ಬೆಳೆಸಿದೆ ಸಮತೆಯ ಸಂಸ್ಕೃತಿಯನು
ತೋರಿದೆ ಬಾಳಿಗೆ ಹೊಂಗುರಿಯನು
ಬಸವ ನೀನಾದೆ ಚಿದಜ್ಯೋತಿ
ಜ್ಞಾನದ ಜ್ಯೋತಿಯು -ಬಸವಾ
–ಸವಿತಾ ದೇಶಮುಖ್