ಯೋಗದ ಫಲ
ನಮಗಾಗಿ ಯೋಗ ನಿಮಗಾಗಿ ಯೋಗ
ನಮಗಾಗಿ ಯೋಗ ನಿಮಗಾಗಿ ಯೋಗ
ಸ್ವಚ್ಚಂದ ಗಾಳಿ ಪುಪ್ಸಕ್ಕೆ ಸೇರಿ
ಇರುವಂತ ಅಲರ್ಜಿ ದೂರಾಗುವುದು
ಬರುವಂತ ಅಸ್ತಮಾ ಬರದೆ
ಹೋಗುವುದು
ಸಿಗದಂತ ನೆಮ್ಮದಿ ನಿಮ್ಮದಾಗುವುದು//
ನಾನು ಎಂಬ ಅಹಂಕಾರ ಬೆವರಾಗುವುದು
ನಮದು ಎಂಬ ಮಮಕಾರ
ವೃದ್ಧಿಯಾಗುವುದು
ಆತ್ಮದ ಸ್ಥೈರ್ಯ ಹೆಚ್ಚಾಗುವುದು
ನಮ್ಮೀ ಬಾಳು ಬೆಳಕಾಗುವುದು //
ಇದ್ದಂತ ನಿದ್ದೆ ಮಾತ್ರೆ ಇಲ್ಲದಂತಾಗುವುದು
ಇರುವಂತ ದುಗುಡಾ ದೂರಾಗುವುದು
ಸಿಗದಂತ ನೆಮ್ಮದಿ ಸಿಕ್ಕೆ ಸಿಗುವುದು
ಬರಲಾರದಾ ನಿದ್ರೆ ಬಂದೇ ಬರುವುದು//
ನಮಗಾಗಿಯೋಗ ನಿಮಗಾಗಿಯೋಗ
ನಮಗಾಗಿಯೋಗ
ಎಲ್ಲರಿಗಾಗಿ ಯೋಗ
-ರ.ಗು.ಸುತೆ
ಡಾ//ಸುಧಾ.ಚ.ಹುಲಗೂರ
ಧಾರವಾಡ