ಶ್ರೇಷ್ಠ ಗಜಲ್ ಗಾರುಡಿಗ ಮಿರ್ಜ ಗಾಲಿಬ್

ವಿಶ್ವ ಕಂಡ ಶ್ರೇಷ್ಠ ಗಜಲ್ ಗಾರುಡಿಗ ಮಿರ್ಜ ಗಾಲಿಬ್ ಜನುಮದಿನ….

ದ್ವೇಷ ಕಾರುವವರಿಗೆ ಪ್ರೀತಿಯಂದರೆ ಏನೆಂದು ಹೇಗೆ ಹೇಳಲಿ ಗಾಲಿಬ್
ರಕ್ತದ ರುಚಿ ಊಂಡವರಿಗೆ ಮದಿರೆಯ ಹೇಗೆ ಕುಡಿಸಲಿ ಗಾಲಿಬ್

ನೋವ ಸಂಭ್ರಮಿಸುವ ಮನಸುಗಳಿಗೆ ಒಳ್ಳೆಯ ಬುದ್ಧಿ ಕೊಡು
ಮೊಗ್ಗು ಹೊಸಕಿ ಹಾಕುವವರಿಗೆ ಅರಳುವುದನ್ನ ಹೇಗೆ ಕಲಿಸಲಿ ಗಾಲಿಬ್

ಮಾರಾಟಕ್ಕಿಡಲಾಗಿದೆ ಒಂದೊಂದು ಬಟ್ಟೆಗಳಿಗೆ ಧರ್ಮದ ಬಣ್ಣ ಬಳಿದು
ದಯವೇ ಧರ್ಮದ ಮೂಲವೆಂದು ಹೇಗೆ ತಿಳಿಸಲಿ ಗಾಲಿಬ್

ಬರೀ ಬಣ್ಣ ಬಣ್ಣದ ಮೇಲೆ ಯಾಕಿಷ್ಟು ದ್ವೇಷ ಇವರಿಗೆ
ಕೇಸರಿ ಬಿಳಿ ಹಸಿರಿದ್ದರೆ ಭಾರತವೆಂದು ಹೇಗೆ ಮನಗಾಣಿಸಲಿ ಗಾಲಿಬ್

“ಅಭಿ”ಗೆ ಅಲ್ಲಮನ ಮದ್ದಳೆ ಶರೀಫನ ಏಕತಾರಿ ಇರಲಿ ಬದುಕಿಗೆ
ಕತ್ತಲು ತುಂಬಿದ ಮನಗಳಲ್ಲಿ ಬೆಳಕು ಹೇಗೆ ಬಿತ್ತಲಿ ಗಾಲಿಬ್

✍️ಅಭಿಷೇಕ್ ಬಳೆ ಮಸರಕಲ್

Don`t copy text!