ಮದ್ಯ ತೊರೆದು ಸ್ವಾವಲಂಬಿ ಜೀವನ ನಡೆಸುವ
ಶರಣಪ್ಪ ತೋಟದ
ಕಳೆದ ನಾಲ್ಕು ವರುಷಗಳ ಹಿಂದೆ ಕುಷ್ಟಗಿ ನಗರದಲ್ಲಿ ನಡೆದ ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ನಡೆಯುವ ಮದ್ಯವರ್ಜನ ಶಿಬಿರದಲ್ಲಿ ಮದ್ಯ ವ್ಯಸನಿ ಯಾಗಿ ಭಾಗವಹಿಸಿ ಸಂಪೂರ್ಣವಾಗಿ ಮದ್ಯವನ್ನು ತ್ಯಜಿಸಿ ಈಗ ಸ್ವಾವಲಂಬಿ ಜೀವನ ನಡೆಸುತ್ತಿರುವ ಶರಣಪ್ಪ ತೋಟದ ಇತರರಿಗೆ ಮಾದರಿಯಾಗಿದ್ದಾರೆ
ಕಳೆದ ೨೫ ವರುಷಗಳಿಂದ ಮದ್ಯದ ಚಟಕ್ಕೆ ಬಿದ್ದು ಲಿಕ್ಕರ್ ಫ್ಯಾಕ್ಟರಿ ಯಲ್ಲಿ ಕೆಲಸಕ್ಕೆ ಸೇರಿದಾಗಿನಿಂದ ಕುಡಿತದ ಅಮಲಿಗೆ ಜೀವ ತತ್ತರಿಸಿ ಹೋಗಿ ಮೂರುಜನ ಹೆಣ್ಣುಮಕ್ಕಳು ಒಬ್ವ ಮಗನನ್ನು ಸಂಭಾಳಿಸಿಕೊಂಡು ಬಂದ ಶರಣಪ್ಪನವರ ಪತ್ನಿ ಈಗ ನಿಟ್ಟಿಸಿರು ಬಿಡುವಂತಾಗಿದೆ
ಸದ್ಯ ಮದುವೆ ಮುಂಜಿ ಸಮಾರಂಭದಲ್ಲಿ ಅಡುಗೆ ಬಾಣಸಿಗನಾಗಿ ಕಾರ್ಯನಿರ್ವಸಿತ್ತಾರೆ ಉಳಿದ ದಿನಗಳಲ್ಲಿ ದಾಳಿಂಬೆ ಪ್ಯಾಕೇಜ್ ಮಾಡುವ ಕೆಲಸದಿಂದ ಸುಖೀ ಜೀವನವನ್ನು ನಡೆಸುವ ಶರಣಪ್ಪ ತೋಟದ ಮುಂಜುನಾಥ ಸಂಘದ ಮದ್ಯ ವ್ಯರ್ಜನ ಶಿಬಿರದ ಸದಾ ಉಪಕಾರ ಸ್ಮರಣೆಯನ್ನು ಮಾಡುವ ಇವರು
ಸದ್ಯ ಕೊಪ್ಪಳ ಠಾಣೆಯಲ್ಲಿ ಸಿಪಿಆಯ್ ಆಗಿರುವ ಮಾನ್ಯ ವಿಶ್ವನಾಥ ಹಿರೇಗೌಡರ ಅವರ ಮಾರ್ಗದರ್ಶನ ,ಜೊತೆಗೆ ಯೋಜನಾಧಿಕಾರಿಗಳಾದ ವಿನಾಯಕ ನಾಯ್ಕ , ಶಿಬಿರಾಧಿಕಾರಿಗಳು , ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದವರಿಗೂ ಕೃತಜ್ಞತೆಯನ್ನು ಹೇಳಲು ಮರೆಯಲಿಲ್ಲ ಶರಣಪ್ಪ ತೋಟದ.
-ನಟರಾಜ್ ಸೋನಾರ್,ಕುಷ್ಟಗಿ