e-ಸುದ್ದಿ, ಮಸ್ಕಿ
ಪಟ್ಟಣದ ಯುವ ಬ್ರಿಗೇಡ್ ತಂಡದ ಯುವಕರು ಇತ್ತೀಚಿಗೆ ಶುಕ್ರವಾರ ಅಮ್ಮ ನಮನ ಕಾರ್ಯಕ್ರಮ ನಡೆಸುವ ಮೂಲಕ ತಾಯಂದಿರಗೆ ಪಾದಪೂಜೆ ಮಾಡಿ, ನಮನ ಸಲ್ಲಿಸಿ ಅವರ ಕೈಯಿಂದ ಕೈತುತ್ತು ಉಂಡು ಸಂತಸ ಪಟ್ಟರು.
ನಿವೇದಿತಾ ಪ್ರತಿಷ್ಠಾನದಿಂದ ಆಚರಿಸುವ ಅಮ್ಮ ನಮನ ಕಾರ್ಯಕ್ರಮವನ್ನು ಯುವ ಬ್ರಿಗೇಡ್‍ನ ಯುವಕರು ಜೈ ಭಗತ್ ಸಿಂಗ್ ಉಚಿತ ತರಬೇತಿ ಕೇಂದ್ರದಲ್ಲಿ ಆಚರಿಸಿದರು.
ಸುಮಾರು 200 ವಿದ್ಯಾರ್ಥಿಗಳು, ಮತ್ತು ಯುವ ಬ್ರಿಗೇಡ್‍ನ ಯುವಕರು ತಮ್ಮ ತಾಯಂದಿರ ಪಾದಗಳನ್ನು ತೊಳೆದು ವಿಭುತಿ, ಕುಂಕುಮ, ಪತ್ರಿ ಧರಿಸಿ ಪಾದಪೂಜೆ ಮಾಡಿದರು. ತಾಯಂದಿರು ತಮ್ಮ ಮಕ್ಕಳಿಗೆ ಆಶಿವರ್ದಿಸಿದರು.
ನಂತರ ಮಕ್ಕಳಿಗೆ ಮತ್ತು ಯುವಕರಿಗೆ ತಾಯಂದಿರು ಕೈತುತ್ತು ನೀಡಿ ಉಣಿಸಿ ಖುಷಿ ಪಟ್ಟರು. ಅಲ್ಲದೆ ಕರೊನಾ ಹೊರಾಟದಲ್ಲಿ ಭಾಗವಹಿಸಿದ್ದ ಕರೊನಾ ವಾರಿಯರ್ಸ ಗೆ ಸತ್ಕರಿಸಿದರು.
ಯುವ ಬ್ರಿಗ್ರೇಡ್ ಸಂಚಾಲಕ ಮಂಜುನಾಥ ಚೆನ್ನಳ್ಳಿ, ಅಮರೇಶ ಹರಸೂರು, ಲಕ್ಷ್ಮಣ ಮಡಿವಾಳ, ದೇವರಾಜ ಬಳಗಾನೂರು, ರವಿಕುಮಾರ ಹುನುಕುಂಟಿ, ಸಮಂತ ಮಾನ್ವಿ, ಯಮನೂರು ಕನ್ನಾರಿ, ಅಮರೇಶ ನಾಗಲಿಕರ್, ಸಂಗಯ್ಯ ಹಿರೇಮಠ, ಮಲ್ಲಿಕಾರ್ಜುನ ನಾಗರಬೆಂಚಿ, ಶಿವಕುಮಾರ ಶಾಸ್ತ್ರೀಮಠ, ಶರಣು ಕಂದಗಲ್ ಹಾಗೂ ಇತರರು ಭಾಗವಹಿಸಿದ್ದರು.