e-ಸುದ್ದಿ, ಮಸ್ಕಿ
ಮಸ್ಕಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾದ ನಂತರ ಇದೇ ಮೊದಲ ಬಾರಿ ಗ್ರಾ.ಪಂ.ಚುನಾವಣೆ ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆ ಜರುಗದೆ ನಡೆದಿರುವ ಹಿನ್ನಲೆಯಲ್ಲಿ ಚುನಾವಣಾ ಸಿಬ್ಬಂದಿ ಮತ್ತು ಮತದಾರರನ್ನು ತಾಲೂಕು ದಂಡಾಧಿಕಾರಿ ತಹಸೀಲ್ದಾರ ಬಲರಾಮ ಕಟ್ಟಿಮನಿ ಅಭಿನಂದಿಸಿದ್ದಾರೆ.
ಇದುವರೆಗಿನ ಚುನಾವಣೆಯನ್ನು ಹಿಂದಿನ ತಾಲೂಕು ಕೇಂದ್ರವಾದ ಲಿಂಗಸುಗೂರಿನಲ್ಲಿ ನಡೆಯುತಿತ್ತು. ಇದೇ ಮೊದಲ ಬಾರಿ ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪದವಿ ಕಾಲೇಜಿನಲ್ಲಿ ತಾಲೂಕು ಆಡಳಿತ ಸಿದ್ದತೆ ಮಾಡಿಕೊಂಡು ವiಸ್ಟರಿಂಗ್, ಡಿ ಮಸ್ಟರಿಂಗ ಕೇಂದ್ರ ಆರಂಭಿಸಿತ್ತು.
ಮಸ್ಕಿ ತಾಲೂಕಿನಲ್ಲಿ ಸಂಪೂರ್ಣವಾಗಿ ತಾಲೂಕು ಮಟ್ಟದ ಅಧಿಕಾರಿಗಳು ಲಭ್ಯ ಇಲ್ಲದಿದ್ದಾಗ್ಯೂ ತಹಸೀಲ್ದಾರ ಬಲರಾಮ ಕಟ್ಟಿಮನಿ ಇರುವ ಸಿಬ್ಬಂದಿಯನ್ನು ಬಳಿಸಿಕೊಂಡು ಶಾಂತಿಯುತವಾಗಿ ಉನಾವಣೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲವಂದು ಮತಗಟ್ಟೆಗಳಲ್ಲಿ ಹಿರಿಯರು, ವೃದ್ಧರನ್ನು ಕರೆದುಕೊಂಡು ಬರಲು ವೀಲ್ಹ ಚೇರ್ ಇರದಿರುವದು ಮತದಾರರ ಅಸಮಾದಾನಕ್ಕೆ ಕಾರಣವಾಗಿದ್ದನ್ನು ಬಿಟ್ಟರೆ ಯಾವುದೇ ಅಹಿತಕರ ಘಟನೆ ಜರುಗದಂತೆ ಚುನಾವಣೆ ನಡೆದಿದೆ.
ಸಿಪಿಐ ದೀಪಕ್ ಬೂಸರಡ್ಡಿ, ಪಿಎಸ್‍ಐ ಸಣ್ಣ ವೀರೇಶ ಶಾಂತಿ ಕಾಪಾಡುವಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಿದ್ದರು. ತಹಸೀಲ್ದಾರ ಕಚೇರಿಯ ಶಿರಸ್ತೆದಾರ ಸೈಯದ್ ಅಕ್ತರ ಸೇರಿದಂತೆ ತಾಲೂಕಿನ ಕಂದಾಯ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು, ಶಿಕ್ಷಕರು ಹೊಸ ತಾಲೂಕಿನಲ್ಲಿ ಉತ್ಸಾಹದಿಂದ ಚುನಾವಣೆ ಕರ್ತವ್ಯದಲ್ಲಿರುವದು ಕಂಡುಬಂದಿತು.
——————–
4 ಗ್ರಾ.ಪಂ. ಬಹಿಷ್ಕಾರ ಃ ಮಸ್ಕಿ ತಾಲೂಕಿನಲ್ಲಿ ಒಟ್ಟು 21 ಗ್ರಾ.ಪಂ ಗಳಿದ್ದು ಅದರಲ್ಲಿ ಪಾಮನಕಲ್ಲೂರು, ಅಮೀನಗಡ, ಅಂಕುಶದೊಡ್ಡಿ, ವಟಗಲ್ ಪಂಚಾಯತಿಯ ಗ್ರಾಮಸ್ಥರು 5 ಎ ಕಾಲುವೆ ಅನುಷ್ಠಾನಕ್ಕೆ ಒತ್ತಾಯಿಸಿ ಗ್ರಾ.ಪಂ.ಚುನಾವಣೆಯನ್ನು ಬಹಿಷ್ಕರಿಸಿದ್ದರು. ಇದರಿಂದ 4 ಗ್ರಾ.ಪಂ.ನ 77 ಸ್ಥಾನಗಳಿಗೆ ಚುನಾವಣೆ ನಡೆದಿಲ್ಲ.