e-ಸುದ್ದಿ ಮಸ್ಕಿ
ಪಟ್ಟಣದ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಸಿಂಧನೂರಿನಲ್ಲಿರುವ ಕಾರುಣ್ಯ ವೃದ್ಧಾಶ್ರಮ ಮತ್ತು ಆಶಾಕಿರಣ ಅನಾಥಾಶ್ರಮದಲ್ಲಿ ಇರುವವರಿಗೆ ಚಳಿಯಿಂದ ರಕ್ಷಿಸಿಕೊಳ್ಳಲು ಹೊದಿಕೆ, ಹಣ್ಣು ಹಂಪಲುಗಳನ್ನು ಭಾನುವಾರ ವಿತರಿಸಿದರು.
ಇತ್ತೀಚಿಗೆ ಚಳಿ ಪ್ರಮಾಣ ಹೆಚ್ಚಾಗುತ್ತಿರುವದನ್ನು ಗಮನಿಸಿದ ಲಯನ್ಸ್ ಪದಾಧಿಕಾರಿಗಳು ಅನಾಥರಿಗೆ, ಅಂಗವಿಕಲರಿಗೆ, ವೃದ್ದರಿಗೆ ಹೊದಿಕೆಗಳನ್ನು ವಿತರಿಸುವದರ ಜತೆಗೆ ಆಹಾರ ಸಮಾಗ್ರಿಗಳನ್ನು ವಿತರಿಸಿದರು.
ಸಿಂಧನೂರಿನ ಕಾರುಣ್ಯ ವೃದ್ಧಾಶ್ರಮದಲ್ಲಿ ವೃದ್ದರಿಗೆ ಆಶಾಕಿರಣ ಅನಾಥಾಶ್ರಮದಲ್ಲಿ ಮಕ್ಕಳಿಗೆ ಬೆಡ್ ಶೀಟ್, ಬ್ರೆಡ್, ಹಣ್ಣು ವಿತರಿಸಿದರು.
ಡಿಸ್ಟ್ರಕ್ಟ್ ಗೌರ್ನರ್ ಲಾ ಗೀರೀಶ, ಮಸ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮಾಕಾಂತಪ್ಪ ಸಂಗನಾಳ, ದಂತ ವೈದ್ಯ ಮಲ್ಲಿಕಾರ್ಜುನ, ಬಸವಲಿಂಗ ಶಟ್ಟಿ, ಡಾ.ಮಲ್ಲಿಕಾರ್ಜುನ ಇತ್ಲಿ, ಶಿವರಾಜ, ಬಸಪ್ಪ ಬ್ಯಾಳಿ, ಶಿವಪ್ಪ ಕಾರಟಗಿ ಇದ್ದರು.
ಮಸ್ಕಿಯ ಲಯನ್ಸ್ ಕ್ಲಬ್ ಗೆ ಭೇಟಿ ನೀಡಿದ ಡಿಸ್ಟ್ರಕ್ಟ್ ಗೌರ್ನರ್ ಲಾ ಗೀರೀಶ ಲಯನ್ ಶಾಲೆಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಲಯನ್ಸ್ ಕ್ಲಬ್‍ನ ಸಂಸ್ಥಾಪಕ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ, ವೀರೇಶ ಹಿರೇಮಠ, ಕಸ್ತೂರಿ ಇತ್ಲಿ, ರಾಜೇಶ್ವರಿ ಹಿರೇಮಠ ಹಾಗೂ ಇತರರು ಇದ್ದರು.