ಶಾಲ ಕಾಲೇಜು ಆರಂಭಕ್ಕೆ ದಿನಗಣನೆ, ಕರೊನಾ ಟೆಸ್ಟ್ ಗೆ ಮುಂದಾದ ವಿದ್ಯಾರ್ಥಿಗಳು

e-ಸುದ್ದಿ, ಮಸ್ಕಿ
ಅಂತು ಇಂತು ಸರ್ಕಾರ ಜ. 1 ರಿಂದ ಹೊಸ ವರ್ಷದಲ್ಲಿ 10 ಮತ್ತು 12 ತರಗತಿಗಳ ಶಾಲೆ ಮತ್ತು ಕಾಲೇಜುಗಳನ್ನು ಆರಂಭಿಸಲು ಹಸಿರು ನಿಶಾನೆ ತೊರಿಸಿರುವದರಿಂದ ಪಾಲಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ವಿದ್ಯಾರ್ಥಿಗಳು ಕರೊನಾಾ ಟೆಸ್ಟ್ ಗೆ ‌ಮುಂದಾಗಿದ್ದಾರೆ.

ಕಳೆದ 7 ತಿಂಗಳಿನಿಂದ ಶಾಲೆ ಕಾಲೇಜುಗಳು ಮುಚ್ಚಿದ್ದರಿಂದ ಪಾಲಕರಿಗೆ ಮಕ್ಕಳನ್ನು ಹಿಡಿದಿಟ್ಟುಕೊಳ್ಳಲು ಕಷ್ಟವಾಗಿದ್ದು ಶಾಲೆ ಆರಂಭವಾಗುದನ್ನು ಕಾಯುತ್ತಿದ್ದರು. ಕೆಲವರು ಕರೊನಾ ಭಯದಿಂದ ಶಾಲೆ ಆರಂಭ ಮಾಡವುದು ಬೇಡ ಎಂದರೆ ಕೆಲವರು ಶಾಲೆ ಆರಂಭವಾಗಲಿ ಎಂದು ಕಾಯುತ್ತಿದ್ದರು.
ಈಗ ಸರ್ಕಾರ ಜ.1 ರಿಂದ 10 ಮತ್ತು 12ನೇ ತರಗತಿಯನ್ನು ಆರಂಭಿಸಿ ಜ.15 ರ ನಂತರ 6-9ರವರೆಗೆ ಶಾಲೆ ಆರಂಭಿಸಲು ಸಿದ್ದವಾಗಿದೆ.
ಶಾಲೆಗೆ ತೆರಳು ವಿದ್ಯಾರ್ಥಿಗಳು ಸಿದ್ದವಾಗಿದ್ದು ಪಟ್ಟಣದ ಸರ್ಕಾರಿ ಆಸ್ಪತೆಯಲ್ಲಿ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಮದ್ಯಹ್ನ 12 ಗಂಟೆಯವರೆಗೆ ಲ್ಯಾಬ್ ಟೆಕ್ನಿಷಿಯನ್‍ಗಳು ವಿದ್ಯಾರ್ಥಿಗಳ ಹೆಸರುಗಳನ್ನು ನೊಂದಣಿ ಮಾಡಿಕೊಂಡು ನಂತರ ಕರೊನಾ ಟೆಸ್ಟ್ಗೆ ಮುಂದಾಗುತ್ತಿದ್ದಾರೆ.
ಇದುವರೆಗೆ ಪ್ರತಿದಿನ 50 ರಿಂದ 60 ವಿದ್ಯಾರ್ಥಿಗಳು ಕರೊನಾ ಟೆಸ್ಟ್ಗೆ ಒಳಗಾಗುತ್ತಿದ್ದರು. ಈಗ ಶಾಲೆ ಆರಂಭದ ದಿನ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಲ್ಯಾಬ್ ಟೆಕ್ನಿಷಿಯನ್ ತಿಮ್ಮನಗೌಡ ತಿಳಿಸಿದರು.
ಇದುವರೆಗೆ ಅಂದಾಜು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 400 ಕ್ಕೂ ಹೆಚ್ಚು ಸಾರ್ವಜನಿಕರು ಕರೊನಾ ಟೆಸ್ಟ್‍ಗೆ ಒಳಗಾಗಿದ್ದಾರೆ. ಪ್ರತಿದಿನ ಮಾದರಿ ದ್ರವ ತೆಗೆದುಕೊಂಡು ಜಿಲ್ಲಾ ಕೇಂದ್ರಕ್ಕೆ ಕಳಿಸಲಾಗುತ್ತದೆ. 4-5 ದಿನಗಳ ನಂತರ ಪರೀಕ್ಷಾ ವರದಿ ವಿದ್ಯಾರ್ಥಿಗಳ ಪಾಲಕರು ಮೊಬೈಲ್‍ಗೆ ಬರುತ್ತದೆ. ಅದನ್ನು ಡೌನ್‍ಲೊಡ್ ಮಾಡಿಕೊಂಡು ಶಾಲೆಯ ಮುಖ್ಯಸ್ಥರಿಗೆ ಕೊಡಬೇಕು ಎಂದು ತಿಮ್ಮನಗೌಡ ತಿಳಿಸಿದರು.
ಇನ್ನುಮುಂದೆ ಕರೊನಾ ಪರೀಕ್ಷೆಗಾಗಿ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುವ ಸಾಧ್ಯತೆ ಇದ್ದು ಬಂದವರಿಗೆಲ್ಲ ಪರೀಕ್ಷೆ ಮಾಡಲು ಲ್ಯಾಬ್ ಟೇಕ್ನಿಷಿಯನ್‍ಗಳಾದ ತಿಮ್ಮನಗೌಡ, ಶಿವಾರಜ, ಸ್ಟಾಫ್ ನರ್ಸ ಅಮರೇಶ, ಡಿ.ಗ್ರೂಪ್ ನೌಕರ ಸಂಜೀವ ನೇಮಕವಾಗಿದ್ದು ಪರೀಕ್ಷೆ ಮಾಡಲಾಗುವದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಾಗರಾಜ ಚೌಶಟ್ಟಿ ತಿಳಿಸಿದರು.

Don`t copy text!