327 ಸ್ಥಾನಗಳ ಭವಿಷ್ಯ ನಾಳೆ, ಗೆಲುವಿಗಾಗಿ ಅಭ್ಯರ್ಥಿಗಳು ದೇವರ ಮೊರೆ!

 

e-ಸುದ್ದಿ, ಮಸ್ಕಿ

ಡಿ.27 ಭಾನುವಾರದಂದು ನಡೆದ ಎರಡನೇ ಹಂತದ ಗ್ರಾಮ ಪಂಚಾಯತಿಯ ಚುನಾವಣೆಯಲ್ಲಿ ಮಸ್ಕಿ ತಾಲೂಕಿನ 17 ಗ್ರಾಪಂಗಳಲ್ಲಿ ಸುಗಮವಾಗಿ ಮತದಾನ ಮುಗಿದಿದ್ದು, 327 ಸ್ಥಾನಗಳಿಗೆ 666 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರ ಭವಿಷ್ಯ ನಾಳೆ ನಿರ್ಧಾರವಾಗಿಲಿದೆ.
ಪಟ್ಟಣದ ದೇವಾನಾಂಪ್ರೀಯ ಅಶೋಕ ಸರ್ಕಾರಿ ಪದವಿ ಕಾಲೇಜಿನಲ್ಲಿ ಚುನಾವಣೆಯ ಮತ ಎಣಿಕೆಗಳನ್ನು ಮಾಡಲಾಗುತ್ತದೆ. ಗ್ರಾಪಂ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಮತ ಎಣಿಕೆಗಾಗಿ ತಾಲೂಕು ಆಡಳಿತದಿಂದ 10 ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಮತ ಎಣಿಕೆ ಮಾಡುವುದಕ್ಕಾಗಿ 8 ಕೌಂಟರ್‍ಗಳನ್ನು ತೆರದಿದ್ದು,. ಎಣಿಕೆ ಕಾರ್ಯಕ್ಕಾಗಿ 165 ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. 17 ಗ್ರಾಪಂನ 327 ಸ್ಥಾನಗಳಿಗೆ 3 ಸುತ್ತಿನ ಎಣಿಕೆ ಬೆಳಿಗ್ಗೆ 8 ಗಂಟಯಿಂದ ನಡೆಯಲಿದೆ ಎಂದು ತಹಸೀಲ್ದಾರ ಬಲರಾಮ ಕಟ್ಟಿಮನಿ ತಿಳಿಸಿದರು.

ಗೆಲುವಿಗಾಗಿ ದೇವರ ಮೊರೆ: ಗ್ರಾಪಂ ಚುನಾವಣೆಯಲ್ಲಿ 327 ಸ್ಥಾನಗಳಿಗೆ 666 ಅಭ್ಯರ್ಥಿಗಳು ಚುನಾವಣೆಯನ್ನು ಎದುರಿಸಿದ್ದಾರೆ. ಅಭ್ಯರ್ಥಿಗಳು ಚುನಾವಣೆಯ ಸಮಯದಲ್ಲಿ ಮತದಾರರಿಗೆ ಆಸೆ ಆಮೀಷಗಳನ್ನು ಒಡ್ಡಿದ್ದರೂ ಸಹ ಮತದಾರನ ಒಲವು ಯಾರ ಕಡೆ ಎಂದು ಯಾರಿಗೂ ತಿಳಿದಿಲ್ಲ. ಹೇಗಾದರೂ ಮಾಡಿ ಗೆಲ್ಲಬೇಕೆಂದು ಹಠಕ್ಕೆ ಬಿದ್ದಿರುವ ಅಭ್ಯರ್ಥಿಗಳು ತಾವು ನಂಬಿದೆ ದೇವರ ಮೊರೆ ಹೋಗಿ, ಚುನಾವಣೆಯಲ್ಲಿ ಗೆಲುವಿಗಾಗಿ ಹರಕೆ ಹೊತ್ತು ಬರುತ್ತಿದ್ದಾರೆ.
ತಾಲೂಕಿನಿಂದ ವಿವಿಧ ಬಾಗಗಳಿದ ಆಗಮಿಸುವ ವಾಹನಗಳಿಗೆ ಹಾಗೂ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರಿಗೆ ಬೇಕಾದ ಸೂಕ್ತ ಪಾರ್ಕಿಗ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ ಸುಮಾರು 60 ಜನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಪಿಎಸ್‍ಐ ಸಣ್ಣ ಈರೇಶ ತಿಳಿದ್ದಾರೆ.

 

Don`t copy text!