ಹಟ್ಟಿ -ಬಣಜಿಗ ಕ್ಷೇಮಾಭಿವೃದ್ದಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಹಟ್ಟಿ -ಬಣಜಿಗ ಕ್ಷೇಮಾಭಿವೃದ್ದಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

 

e-ಸುದ್ದಿ ಲಿಂಗಸುಗೂರು 

ತಾಲೂಕಿನ ಹಟ್ಟಿ ಕ್ಯಾಂಪ್ ನ ಬಸವ ಸೇವಾ ಸಮಿತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಣಜಿಗ ಸಮಾಜದ ಸಭೆಯಲ್ಲಿ ಅಖಿಲ ಭಾರತ ಬಣಜಿಗ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಡಾ. ಶಿವಬಸಪ್ಪ ಹೆಸರೂರವರ ಆಯ್ಕೆಯಾದ ಪ್ರಯುಕ್ತ ಹಟ್ಟಿ ಪಟ್ಟಣದ ಬಸವ ಸೇವಾ ಸಮಿತಿ ಹಾಗೂ ಬಣಜಿಗ ಸಮಾಜದವರಿಂದ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಜರುಗಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಶಿವಬಸಪ್ಪ ಹೆಸರೂರವರು ಬಣಜಿಗ ಸಮಾಜದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಿದ್ದು ಸಮಾಜದ ಹಿರಿಯರು ಕಿರಿಯರಿಗೆ ಸಮಾಜದ ಇತಿಹಾಸ,ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಪರಿಚಯಿಸುವ ಮೂಲಕ ಸಮಾಜದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಬೇಕು, ಇಂದಿನ ಯುವ ಪೀಳಿಗೆ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಲು ಉತ್ತಮ ಮಾರ್ಗದರ್ಶನ ನೀಡುವ ಜವಾಬ್ದಾರಿ ಹಿರಿಯರ ಮೇಲಿದೆ ಎಂದು ತಿಳಿಸಿದರು.ಸಮಾಜದ ಬಂಧುಗಳು ಒಗ್ಗಟ್ಟಿನಿಂದ ಕಾರ್ಯಗಳನ್ನು ಕೈಗೊಂಡಾಗ ಸಮಾಜದ ಏಳಿಗೆ ಸಾಧ್ಯ ಎಂದರು.

ನೂತನ ಪದಾಧಿಕಾರಿಗಳ ಆಯ್ಕೆ:-
ಅಧ್ಯಕ್ಷರಾಗಿ ಚಂದ್ರಕಾಂತ್ ಶೆಟ್ಟಿ ಅರಕೇರಾ, ಕಾರ್ಯಾಧ್ಯಕ್ಷರಾಗಿ ಪ್ರಭಾಕರ ಬಂಟನೂರು, ಗೌರವಾಧ್ಯಕ್ಷರಾಗಿ ಮಲ್ಲಿಕಾರ್ಜುನ ಬುದ್ದಿನ್ನಿ, ಉಪಾಧ್ಯಕ್ಷರಾಗಿ ಸಂಗಪ್ಪ ಬೆಂಡೋಣಿ ಹಾಗೂ ಅಮರೇಶ ಕಸನದೊಡ್ಡಿ, ಪ್ರಧಾನ ಕಾರ್ಯದರ್ಶಿ ಯಾಗಿ ಅಮಿತ್ ರವಿ ಅಂಗಡಿ , ಸಹ ಕಾರ್ಯದರ್ಶಿಗಳಾಗಿ ಮಲ್ಲಿಕಾರ್ಜುನ ಅಂಗಡಿ ಮಹಾಂತೇಶ, ಖಜಾಂಚಿಯಾಗಿ ಆದಪ್ಪ ದೇವಾಪುರ, ಉಪ ಕಜಾಂಚಿಯಾಗಿ ಬೆನಕಪ್ಪ ಸಾಹುಕಾರ್ ಮದರಕಲ್, ಸಲಹೆಗಾರರಾಗಿ ವಿಜಯ ಸಾಹುಕಾರ, ಲೋಕೇಶ್ ವಾಲೇ ಹಾಗೂ ಸದಸ್ಯರಾಗಿ ಶರಣಬಸವ ಮರೆಡೆಪ್ಪ, ನಾಗರಾಜ ರಟಗಲ್, ರುದ್ರಗೌಡ ವಂದಲಿ ಹೊಸೂರು, ಸೂಗಪ್ಪ ಅಂಕುಶದೊಡ್ಡಿ, ಉದಯಕುಮಾರ ಇಟಗಿ, ಗುರುರಾಜ್ ಸದಸ್ಯರಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ವಾಲೇ ಬಾಬು,ವಿಜಯಕುಮಾರ್ ಸಾಹುಕಾರ್, ಚಂದ್ರಕಾಂತ್ ಅರಕೇರ, ಸೂಗಪ್ಪ ಗಲಗ್ ಶ್ರೀಶೈಲಪ್ಪ , ಶಿವಕುಮಾರ್ ಸಾಲಿಮನಿ ,ಗುರುಬಸವ ಎಲಿಗಾರ ಸೇರಿದಂತೆ ಇತರರಿದ್ದರು.

ಹಟ್ಟಿ ಚಿನ್ನದ ಗಣಿಯಲ್ಲಿ
ಬಸವ ಸೇವಾ ಸಮಿತಿಯ ಬಸವ ಕಲ್ಯಾಣ ಮಂಟಪದ ಕಟ್ಟಡ ಕಾಮಗಾರಿ ಕಾರಣಾಂತರಗಳಿಂದ ಅರ್ಧಕ್ಕೆ ನಿಲ್ಲಿಸಿದ್ದರಿಂದ ಸಮಿತಿಯವರು ಡಾ.ಶಿವಬಸಪ್ಪ ಹೆಸರೂರು ಅವರಿಗೆ ಪೂರ್ಣಗೊಳಿಸಲು ಮನವಿ ಮಾಡಿದರು.ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಪೂರ್ಣಗೊಳಿಸುವ ಭರವಸೆ ನೀಡಿದರು.

ವರದಿ – ವೀರೇಶ ಅಂಗಡಿ ಗೌಡರ 

Don`t copy text!