ಬಸವ ಮಂಟಪ ಕೃತಿ ಮತ್ತು ಲೇಖಕ ರವಿ ಹಂಜ್ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಗ್ರಹ
e- ಸುದ್ದಿ ರಾಯಚೂರ
ಅಮೆರಿಕದಲ್ಲಿ ನೆಲೆಸಿರುವ, ದಾವಣಗೆರೆ ಮೂಲದ ಲೇಖಕ ರವಿ ಹಂಜ್ ಅವರು ಬರೆದಿರುವ ಸುಮಾರು 600 ಪುಟಗಳ ‘ಬಸವ ಮಂಟಪ’ ಕೃತಿಯಲ್ಲಿ ಮತ್ತು ವಿಶ್ವವಾಣಿ ಗೆ ನೀಡಿರುವ ಸಂದರ್ಶನದಲ್ಲಿ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ, ಪ್ರಾಮಾಣಿಕತೆ ಹಾಗೂ ವಚನ ಸಾಹಿತ್ಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ವಿಶ್ವಮಟ್ಟದಲ್ಲಿ ಇಡೀ ಮನುಕುಲವೇ ಅರಿತು ಶರಣಾಗಿರುವ ವಚನ ಸಾಹಿತ್ಯ ಬಸವಾದಿ ಶರಣರ ವ್ಯಕ್ತಿತ್ವಕ್ಕೆ ಕೈಗನ್ನಡಿ. ಬಸವಣ್ಣನವರ ವ್ಯಕ್ತಿತ್ವಕ್ಕೆ ವಚನಗಳೇ ಸಾಕ್ಷಿ. ವಚನ ಸಾಹಿತ್ಯ ತಿರುಚಲು ಇದು ಶಾಸ್ತ್ರ, ಪುರಾಣಗಳನ್ನು ಆಧರಿಸಿಲ್ಲ. ರವಿ ಹಂಜ್ ರವರ ನಿರಾಧಾರದ ಕೃತಿಗೆ ಕೂಡಲೇ ನಿಷೇಧ ಹೇರಬೇಕು
ವಿಶ್ವಗುರು ಬಸವಣ್ಣನ ಬಗ್ಗೆ. ಅವಹೇಳನಕಾರಿ. ಲೇಖನಗಳನ್ನು ಬರೆದ ಮತ್ತು ಪ್ರಕಟಿಸಿದ ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಶಾಂತಿ,ಸ್ವಾಸ್ಥ್ಯ, ನ್ಯಾಯ, ಸುರಕ್ಷತೆಗೆ ಭಂಗ ತರುವ ಕೃತ್ಯಗಳ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ
ಮಸ್ಕಿ ನಾಗರಾಜ ವಕೀಲರು, ಗೌರವಾಧ್ಯಕ್ಷರಾದ ಬಸ್ಸಪ್ಪ ತಿಪ್ಪಾರೆಡ್ಡಿ, ಕಾರ್ಯದರ್ಶಿ ಅಂಬಾಪತಿ ಪಾಟೀಲ ವಕೀಲರು. ಕದಳಿ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಲಲಿತಾ ಬಸನಗೌಡ ಮತ್ತು ಶರಣ ಸಾಹಿತ್ಯ ಪರಿಷತ್ತು ಕದಳಿ ವೇದಿಕೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
