ಪರಿಶ್ರಮ, ಪ್ರಾಮಾಣಿಕತೆಯೇ ಯಶಸ್ಸಿನ ಮೆಟ್ಟಿಲು
ಬೆಳಗಾವಿಯಿಂದ ಮಸ್ಕಿವರೆಗೆ ಸೀರೆ ವ್ಯಾಪಾರದ ಯಶೋಗಾಥೆ;
ಕೈಮಗ್ಗದ ನೇಕಾರರಿಗೆ ಮಾರುಕಟ್ಟೆ ಕಲ್ಪಿಸಿದ ಎಸ್.ಎಸ್. ಮುರುಡಿ ಸೀರೆ ಹೋಲ್ಸೇಲ್ ಮತ್ತು ರಿಟೇಲ್ ಡಿಪೋ
e- ಸುದ್ದಿ ಮಸ್ಕಿ
ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಸಂಕಲ್ಪವಿದ್ದರೆ ವ್ಯಾಪಾರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂಬುದಕ್ಕೆ ಶಿವರಾಜ ಸಂಗಪ್ಪ ಮುರುಡಿ ಅವರ ಬದುಕು ಸಾಕ್ಷಿಯಾಗಿದೆ.
ಬೆಳಗಾವಿಯಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸೀರೆ ವ್ಯಾಪಾರ ಇಂದು ಮಸ್ಕಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ವಿಸ್ತರಿಸಿರುವುದು ಅವರ ಪರಿಶ್ರಮದ ಫಲವಾಗಿದೆ.
ಶಿವರಾಜ ಸಂಗಪ್ಪ ಮುರುಡಿ ಅವರು ಆರಂಭದಲ್ಲಿ ಬೆಳಗಾವಿಯಲ್ಲಿ ನೇಕಾರರಿಂದ ನೇರವಾಗಿ 10/10 ಸೈಜಿನ ಸೀರೆಗಳನ್ನು ಖರೀದಿಸಿ ಮಾರಾಟ ಮಾಡುವ ಮೂಲಕ ವ್ಯಾಪಾರ ಆರಂಭಿಸಿದ್ದರು. ಗ್ರಾಹಕರ ವಿಶ್ವಾಸ ಗಳಿಸುವುದರ ಜತೆಗೆ ವ್ಯಾಪಾರದಲ್ಲಿ ಹಂತ ಹಂತವಾಗಿ ಬೆಳವಣಿಗೆ ಸಾಧಿಸುತ್ತಾ ಬಂದರು. ತಮ್ಮ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಮಸ್ಕಿಗೆ ಆಗಮಿಸಿದರು.
ಮಸ್ಕಿಯ ಅಕ್ಷಯ ಮುಂದಲಮನಿ ಅವರ ಸ್ನೇಹ ಹಾಗೂ ಸಹಕಾರದಿಂದ ಪಟ್ಟಣದಲ್ಲಿ ತಮ್ಮ ಉದ್ಯಮಕ್ಕೆ ಭದ್ರ ಬುನಾದಿ ಹಾಕಿದರು.
ನೂರಕ್ಕೆ ನೂರು ಸೈಜಿನ ಬೃಹತ್ ಮಳಿಗೆ
2025ರ ನವೆಂಬರ್ 5ರಂದು ಮಸ್ಕಿಯ ವಿಜಯ ಟಾಕೀಸ್ ಕಟ್ಟಡವನ್ನು ಬಾಡಿಗೆ ಪಡೆದು 100/100 ಅಡಿ ವಿಸ್ತೀರ್ಣದ ಬೃಹತ್ ಮಾರಾಟ ಮಳಿಗೆಯಲ್ಲಿ ‘ಎಸ್.ಎಸ್. ಮುರುಡಿ ಸೀರೆ ಹೋಲ್ಸೇಲ್ ಮತ್ತು ರಿಟೇಲ್ ಡಿಪೋ’ ಆರಂಭಿಸಿದರು. ಚಲನಚಿತ್ರ ನಟಿ ಪ್ರೇಮ ಅವರು ಮಳಿಗೆಯನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಕಿರುತೆರೆ ನಟ-ನಟಿಯರಾದ ಪ್ರಿಯಾ ಸವದಿ, ಮಲ್ಲು ಬಾಗಲಕೋಟೆ, ಮಲ್ಲು ಜಮಖಂಡಿ ಹಾಗೂ ಲಾಫಿಂಗ್ ರಾಜಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇಂದು ಈ ಮಳಿಗೆ ಮಸ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಮದುವೆ ಹಾಗೂ ಶುಭ ಸಮಾರಂಭಗಳ ಬಟ್ಟೆ ಖರೀದಿಗೆ ಪ್ರಮುಖ ಜವಳಿ ಕೇಂದ್ರವಾಗಿ ಗುರುತಿಸಿಕೊಂಡಿದೆ.
ನೇಕಾರರಿಂದ ಗ್ರಾಹಕರಿಗೆ ನೇರ ಸಂಪರ್ಕ
ಕೈಮಗ್ಗದ ನೇಕಾರರು ತಯಾರಿಸಿದ ಸೀರೆಗಳನ್ನು ನೇರವಾಗಿ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ಈ ಡಿಪೋದ ಪ್ರಮುಖ ವಿಶೇಷತೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸೀರೆಗಳನ್ನು ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ.
ಇಲಕಲ್ ಚುಕ್ಕಿ ಪಾರಾಸ್ ಸೀರೆ, ಭೂಮಿಧಡಿ, ಇಲಕಲ್ ಗಾಯತ್ರಿ ಸೀರೆ, ನಾರಾಯಣಪೇಟೆ ಬಾರ್ಡರ್, ಗದ್ವಾಲ್ ಟೆಂಪಲ್ ಬಾರ್ಡರ್, ಕಾಂಚಿವರಂ, ಕಾಟನ್ ಹಾಗೂ ಮಧುರೈ ಕಾಟನ್ ಸೀರೆ ಸೇರಿದಂತೆ ವಿವಿಧ ವಿನ್ಯಾಸಗಳ ಸೀರೆಗಳು ಇಲ್ಲಿ ಲಭ್ಯವಿವೆ. ಗ್ರಾಹಕರ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಕನಿಷ್ಠ 200 ರೂ.ಗಳಿಂದ ಗರಿಷ್ಠ 50 ಸಾವಿರ ರೂ.ವರೆಗಿನ ಸೀರೆಗಳನ್ನು ಮಾರಾಟ ಮಾಡಲಾಗುತ್ತಿದೆ.
ಸೀರೆಗಳ ಜತೆಗೆ ಶೂಟಿಂಗ್, ಶರ್ಟಿಂಗ್, ಧೋತಿ, ಟವೆಲ್, ಬನಿಯನ್, ಟಿ-ಶರ್ಟ್, ಡ್ರೆಸ್ ಮೆಟೀರಿಯಲ್ಸ್ ಹಾಗೂ ನೈಟಿಗಳೂ ಇಲ್ಲಿ ದೊರೆಯುತ್ತವೆ. ಮದುವೆ ಹಾಗೂ ಇತರ ಶುಭ ಸಮಾರಂಭಗಳಿಗೆ ಬೇಕಾದ ವಿವಿಧ ಬಗೆಯ ವಸ್ತ್ರಗಳನ್ನು ಒಂದೇ ಸೂರಿನಡಿ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.
ವ್ಯಾಪಾರದೊಂದಿಗೆ ಉದ್ಯೋಗ ಸೃಷ್ಟಿ
ಎಸ್.ಎಸ್. ಮುರುಡಿ ಸಂಸ್ಥೆಯ ಮುಖ್ಯ ಸೀರೆ ಡಿಪೋ ಬೆಳಗಾವಿಯಲ್ಲಿದ್ದು, ಮಸ್ಕಿ ಮತ್ತು ಬೆಂಗಳೂರಿನಲ್ಲಿ ಬೃಹತ್ ಮಾರಾಟ ಮಳಿಗೆಗಳನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಗಂಗಾವತಿಯಲ್ಲಿ ಮತ್ತೊಂದು ಡಿಪೋ ಪ್ರಾರಂಭಿಸುವ ಯೋಜನೆ ಇದೆ. ಮಸ್ಕಿ ಡಿಪೋದಲ್ಲಿ ಸುಮಾರು 50 ಜನರಿಗೆ ಉದ್ಯೋಗ ಕಲ್ಪಿಸಿರುವುದು ಸಂತಸ ತಂದಿದೆ ಎಂದು ಅಕ್ಷಯ ಮುಂದಲಮನಿ ಹೇಳುತ್ತಾರೆ.
ಸಾಮಾಜಿಕ ಸೇವೆಯಲ್ಲೂ ಮುಂದು
ವ್ಯಾಪಾರದ ಜತೆಗೆ ಸಾಮಾಜಿಕ ಸೇವೆಯಲ್ಲೂ ಶಿವರಾಜ ಸಂಗಪ್ಪ ಮುರುಡಿ ಅವರು ತೊಡಗಿಸಿಕೊಂಡಿದ್ದಾರೆ. ಕೂಡಲಸಂಗಮದಲ್ಲಿ ಕಾಯಕ ಜೀವಿಗಳಿಗೆ ವಸ್ತ್ರ ವಿತರಣೆ, ಶ್ರೀಶೈಲ ಪಾದಯಾತ್ರಿಗಳಿಗೆ ಪ್ರಸಾದ ವಿತರಣೆ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆಹಾರದ ಕಿಟ್ಗಳ ವಿತರಣೆ ಹಾಗೂ ಅನಾಥರಿಗೆ ರಗ್ಗು, ಹೊದಿಕೆ ಮತ್ತು ಬಟ್ಟೆಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವ್ಯಾಪಾರವೆಂದರೆ ಕೇವಲ ಲಾಭ ಗಳಿಸುವುದಷ್ಟೇ ಅಲ್ಲ, ಸಮಾಜಕ್ಕೆ ಕೊಡುಗೆ ನೀಡುವುದೂ ಹೌದು ಎಂಬ ಮನೋಭಾವದೊಂದಿಗೆ ಮುನ್ನಡೆಯುತ್ತಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಉದ್ಯಮವನ್ನು ಗ್ರಾಹಕರ ವಿಶ್ವಾಸ, ನಿರಂತರ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಹಲವು ನಗರಗಳಿಗೆ ವಿಸ್ತರಿಸಿರುವ ಶಿವರಾಜ ಸಂಗಪ್ಪ ಮುರುಡಿ ಅವರ ಸಾಧನೆ ಯುವ ಉದ್ಯಮಿಗಳಿಗೆ ಮಾದರಿಯಾಗಿದೆ. ಕೈಮಗ್ಗದ ನೇಕಾರರಿಗೆ ಮಾರುಕಟ್ಟೆ ಒದಗಿಸುವುದರ ಜತೆಗೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ವಸ್ತ್ರಗಳನ್ನು ತಲುಪಿಸುತ್ತಿರುವ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
–ವೀರೇಶ ಸೌದ್ರಿ ಮಸ್ಕಿ
9448805067


