ಕವಿತೆ
ಶಾಲೆ ಸುಗ್ಗಿ, ಬನ್ನಿ ಹಿಗ್ಗಿ
ಸ್ನೇಹಿತರೆ ಹೇಳುವೆ ಕೇಳಿ
ಇನ್ನಿಲ್ಲ ಕರೋನಾ ಹಾವಳಿ
ಭಯವ ತೊರೆದು ಹೆಜ್ಜೆ ಹಾಕಿ
ಹಿಗ್ಗಿಲೆ ಶಾಲೆಗೆ ಮರಳಿ.
ಕಳೆಯಿತು ಕಲಿಯುಗ ಹೆಮ್ಮಾರಿ
ಕರೋನಾ ಬರೀ ಪ್ರಚಾರಿ
ಕರೋನಾ ಅಲ್ಲ ಕಾಲನೇ ಬಂದರು
ಕೂರಬೇಕಿಲ್ಲ ನಾವು ಹೆದರಿ.
ಪಾಲಕರ ಪರವಾನಗಿ ಪಡೆದು
ಬೆರೆತು ಒಂದಾಗಿ ನಡೆದು
ವಿದ್ಯಾಗಮನ ಅಡಿಯಲ್ಲಿ ಕಲಿತು
ಪಾಸಾಗೋಣ ಪರೀಕ್ಷೆ ಬರೆದು.
ಸಾಗಲಿ ಕಲಿಕೆ ನಿರಂತರ
ಯಾವುದಕ್ಕೂ ನಮ್ಮೊಳಗಿರಲಿ ಅಂತರ
ಶಿಸ್ತು ಸ್ವಚ್ಛತೆ ಕಾಲಕ್ಕಿದ್ದರೆ
ಜೀವಕ್ಕಿಲ್ಲ ಯಾವ ಹಾನಿಕರ.
ಮೊಗದಿ ಇರಲಿ ಮಾಸ್ಕು
ಜೇಬಲ್ಲೊಂದು ಸ್ಯಾನಿಟೈಜರ್ ಪಿಕ್ಸು
ಇದುವೇ ನಮ್ಮಯ ಯಶಸ್ಸು
ತೆಗೆಯೋಣ ಒಳ್ಳೆಯ ಮಾರ್ಕ್ಸು
ಲವಲವಿಕೆಯಿಂದಲೇ ಸೇರೋಣ
ಲಸಿಕೆ ಬಂದರೆ ಹಾಕಿಸೋಣ
ಧೈರ್ಯದಿಂದ ಲೇ ಮುನ್ನುಗ್ಗಿ
ಕರೋನಾ ಕಾಣದಂತೆ ಓಡಿಸೋಣ.
✍🏻 ಮಹೇಂದ್ರ ಕುರ್ಡಿ