#ಗಜಲ್#
======•
ಹೇಳದೆ ಬದುಕು ಮುಗಿಸಬೇಡ ಜೀವದೊಳಗೆ ಜೀವ ತತ್ತರಿಸುತ್ತದೆ.
ಹಗಲ ಕನಸಿಗೆ ಸೋಲಬೇಡ ಬಯಲೊಳಗೆ ಬಯಲು ತತ್ತರಿಸುತ್ತದೆ.
ನಾನು ನೀನು ಸುಖದ ಹಾದಿಗೆ ಹೆಜ್ಜೆ ಹಾಕಿದರೆ ನಾಳೆ ನಮಗಾಗಿ ಕಾಯುತ್ತದೆ.
ನಿರಾಸೆಯ ಮಾತು ಎಂದೂ ಆಡಬೇಡ ಮೈಯೊಳಗೆ ಮೈ ಮನಸು ತತ್ತರಿಸುತ್ತದೆ.
ಯಾರು ನಸೀಬು ಓದಿಕೊಂಡು ಬದುಕುವುದಿಲ್ಲ ಆರು ಮೂರರ ಸಂತೆ ಮುಂದೆ.
ನೀರ ಕನ್ನಡಿ ಎದುರು ಕಣ್ಣಹನಿ ತುಳಿಕಿಸಬೇಡ ನೀರೊಳಗೆ ನೀರು ತತ್ತರಿಸುತ್ತದೆ.
ಸಾವಿಗಂಜಿ ದುಃಖಿಸಿದರೆ ಹಗಲು ನೋಡುವರಾರು ಕತ್ತಲುಂಡು ಕಾಡುತ್ತದೆ.
ಧರ್ಮದ ನೆರಳಲ್ಲಿ ಇರಬೇಡ ದೇವರೊಳಗೆ ದೇವರು ತತ್ತರಿಸುತ್ತದೆ.
ಬರುವುದಾದರೆ ಬಂದುಬಿಡು ಊರ ತುಂಬ ಹಡದಿ ಹಾಸಿದ್ದಾನೆ”ಗಿರಿರಾಜ”
ಆದರೆ ಹೇಳಿದೆ ಬದುಕು ಮುಗಿಸಬೇಡ ಜೀವದೊಳಗೆ ಜೀವ ತತ್ತರಿಸುತ್ತದೆ.
* ನಸೀಬು = ಹಣೆ ಬರಹ.
* ಹಡದಿ = ಮಡಿ ಬಟ್ಟೆ.
–ಅಲ್ಲಾಗಿರಿರಾಜ, ಕನಕಗಿರಿ
ಹೇಳದೆ ಬದುಕು ಮುಗಿಸಬೇಡ ಜೀವದೊಳಗೆ ಜೀವ ತತ್ತರಿಸುತ್ತದೆ.👍