e-ಸುದ್ದಿ ಮಸ್ಕಿ
ತಾಲೂಕಿನ ಮೆದಕಿನಾಳ ಗ್ರಾಮದಲ್ಲಿ ಮಂಗಳವಾರ ಲಿಂ.ಶ್ರೀ.ಚೆನ್ನಮಲ್ಲ ಶಿವಯೋಗಿಗಳ ಜಾತ್ರ ಮಹೋತ್ವಸವನ್ನು ಸರಳವಾಗಿ ಆಚರಿಸಲಾಗುವದು ಎಂದು ಕನಕಗಿರಿ ಮತ್ತು ಮೆದಕಿನಾಳ ಸುವರ್ಣಗಿರಿ ವಿರಕ್ತಮಠದ ಪೀಠಾಧಿಪತಿ ಡಾ.ಚನ್ನಮಲ್ಲ ಮಹಾಸ್ವಾಮಿಗಳು ಹೇಳಿದರು.
ಮೆದಕಿನಾಳ ಗ್ರಾಮದ ಶ್ರೀಮಠದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ ಕರೊನಾ ಹಿನ್ನಲೆಯಲ್ಲಿ ಜಾತ್ರೆಯನ್ನು ಸರಳವಾಗಿ ಆಚರಿಸುತ್ತಿದ್ದು ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯವಾಗಿದೆ ಎಂದರು.
ಚನ್ನಮಲ್ಲ ಶಿವಯೋಗಿಗಳ ಕುರಿತು ಕನಕಗಿರಿ ಕಾರಣಿಕ ಶ್ರೀಚನ್ನಮಲ್ಲ ಶಿವಯೋಗಿ ಎಂಬ ನಾಟಕವನ್ನು ಪಂ.ರಾಜಗುರು ಗುರುಸ್ವಾಮಿ ಕಲಿಕೇರಿ ರಚಿಸಿದ್ದಾರೆ. ಕೃತಿಯನ್ನು ಮಂಗಳವಾರ ಬಿಡುಗಡೆಯಾಗಲಿದೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರೇಶ ಸೌದ್ರಿ, ಸಾಹಿತಿ ಗುಂಡುರಾವ್ ದೇಸಾಯಿ ಭಾಗವಹಿಸುವರು ಎಂದು ತಿಳಿಸಿದರು.