ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ವೇದಿಕೆ, ಮಸ್ಕಿ
ಪುಸ್ತಕ ಪ್ರಿಯರೇ,
ಜಗತ್‍ನ್ನು ಮನುಷ್ಯರು ಆಳುವದಿಲ್ಲ. ಬದಲಿಗೆ ಅವರ ವಿಚಾರಗಳಿಂದ ಆಳಲ್ಪಡುತ್ತದೆ. ಮನಸ್ಸಿನಲ್ಲಿ ಮೂಡುವ ವಿಚಾರಗಳ ಉತ್ಪತ್ತಿಗೆ ಜ್ಞಾನ ಮೂಲ. ಜ್ಞಾನ ದಾರ್ಶನಿಕರ ಅನುಭವದ ನುಡಿಗಳಿಂದ, ಇತಿಹಾಸದ ಘಟನೆಗಳಿಂದ ಭವಿಷ್ಯತ್ತಿನ ಚಿಂತನೆ ಮಾಡಿದ ಪರಿಣಾಮ ವಿಚಾರಗಳ ಉಗಮವಾಗುತ್ತವೆ.
ಇತಿಹಾಸದ ಘಟನೆಗಳು, ದಾರ್ಶನಿಕರ ಅನುಭವದ ನುಡಿಗಳು, ಜೀವನ ಚರಿತ್ರೆ, ಜ್ಞಾನದ ಅವತರಣಿಕೆಗಳು ಪುಸ್ತಕ ರೂಪದಲ್ಲಿವೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಶರಣರು, ಸಂತರು, ದಾಸರು, ಸಾಹಿತಿಗಳು ಆಗಿ ಹೋಗಿದ್ದಾರೆ. ಅವರ ಜ್ಞಾನದ ಖಣಿ ಅಖಂಡವಾಗಿದೆ.
ಪುಸ್ತಕ ಓದುವ ಹವ್ಯಾಸ ನಶಿಸುತ್ತದೆ ಎಂಬ ಭಾವನೆ ಮೂಡತೊಡಗಿದೆ. ಅದಕ್ಕಾಗಿ ನಾವು ನಮ್ಮ ಮಕ್ಕಳನ್ನು ಓದುವ ಹವ್ಯಾಸಕ್ಕೆ ಸಜ್ಜು ಗೊಳಿಸಬೇಕಾಗಿದೆ. ಆಗಿದ್ದಲ್ಲಿ ಉತ್ತಮ ಪುಸ್ತಕಗಳು ಎಲ್ಲಿ ಸಿಗುತ್ತವೆ ಎಂಬ ಪ್ರಶ್ನೆ ಸಹಜ.
ವಾಸ್ತವದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪುಸ್ತಕ ಪ್ರಕಾಶನ ಸಂಸ್ಥೆಗಳು ವಿರಳ. ಅದೇ ದಕ್ಷಿಣ ಕರ್ನಾಟಕ ಮತ್ತು ಮೈಸೂರು ಭಾಗದಲ್ಲಿ ಪುಸ್ತಕ ಪ್ರಕಾಶನ ಒಂದು ಉದ್ಯಮವಾಗಿ ಬೆಳೆದಿದೆ. ಅಂತದೇ ಪ್ರಯತ್ನವನ್ನು ಸಹಕಾರ ತತ್ವದ ಆಧಾರದ ಮೇಲೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.
ಸದಸ್ಯತ್ವದ ವಿವರ
ಸಂಸ್ಥೆಗೆ ಈ ಕೆಳಗೆ ನಮೂದಿಸಿದ ಹಣವನ್ನು ಠೇವಣಿ ಮಾಡಿ ಸದಸ್ಯರಾಗಬಹುದು. ಸದಸ್ಯರಾದವರಿಗೆ ಪ್ರತಿವರ್ಷ ಕನಿಷ್ಠ ಶೇ.20 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಪುಸ್ತಕಗಳನ್ನು ತಲುಪಿಸಲಾಗುವದು.
ಹೊರ ಹೋಗಲು ಅವಕಾಶವಿದೆ.
ಸದಸ್ಯರಾದವರು ಎರಡು ವರ್ಷದ ನಂತರ ಸಾಕೆನಿಸಿದರೆ ಸದಸ್ಯತ್ವವನ್ನು ಹಿಂಪಡೆಯಬಹುದು. ನೀವು ನೀಡಿದ ಹಣ ನಿಮಗೆ ಮರಳಿ ಕಳಿಸಲಾಗುತ್ತದೆ. ಸದಸ್ಯರಾದವರು ಎರಡು ವರ್ಷ ಕಡ್ಡಾಯವಾಗಿ ನಮ್ಮೊಂದಿಗೆ ಇರಬೇಕು.
ಲೇಖಕರಿಗೆ ಉತ್ತಮ ವೇದಿಕೆ
ಲೇಖಕರಿಗೆ, ಕವಿಗಳಿಗೆ, ಕತೆಗಾರರಿಗೆ ಬರಹಗಾರರಿಗೆ ಇದೊಂದು ಉತ್ತಮ ವೇದಿಕೆ. ನಿಮ್ಮ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಿಸುವ ಮತ್ತು ಓದುಗರಿಗೆ ವಿತರಿಸುವ ಹೊಣೆ ನಮ್ಮದು.
ಹಾಗಿದ್ದರೆ ಬನ್ನಿ, ನಮ್ಮೊಂದಿಗೆ ಕೈ ಜೋಡಿಸಿ
ಸದಸ್ಯತ್ವದ ವಿವರ
- 1000-00 ಸದಸ್ಯರು
- 2000-00 ಗೌರವ ಸದಸ್ಯರು
- 5000-00 ಪೋಷಕರು
- 10,000-00 ಮಹಾಪೋಷಕರು
ಸದಸ್ಯರಾಗಲು ಸಂಪರ್ಕಿಸಿ
ವೀರೇಶ ಸೌದ್ರಿ
ಸಂಚಾಲಕರು,
ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ವೇದಿಕೆ, ಮಸ್ಕಿ
ಮೊ : 9448805067