e-ಸುದ್ದಿ, ಮಸ್ಕಿ
ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಆರ್ಥಿಕವಾಗಿ ಮುಂದೆ ಬಂದಾಗ ಮಾತ್ರ ಯೋಜನೆಯ ಉದ್ದೇಶ ಸಾರ್ಥಕ ವಾವಾಗುತ್ತದೆ ಎಂದು ತಾಪಂ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪೂರು ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿರುವ ತಾಪಂ ಕಚೇರಿಯಲ್ಲಿ ಗ್ರಾಪಂ 14ನೇ ಹಣಕಾಸು ಯೋಜನೆಯಲ್ಲಿ 29 ವಿಕಲಚೇತನ ಪಲಾನುಭವಿಗಳಿಗೆ ಶನಿವಾರ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.
ವಿಕಲ ಚೇತನರಿಗಾಗಿ ಸರ್ಕಾರ ವಿವಿಧ ಯೋಜನಗಳಿಗಲ್ಲಿ ಮೀಸಲಾತಿಯನ್ನು ಕಲ್ಪಿಸಿದೆ. ಅದರ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿಂದ ಯೊಜನೆಗಳು ಸರಿಯಾಗಿ ತಲುಪುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ತಾಪಂ ಇಒ ಬಾಬು ರಾಠೋಡ್, ತಾಪಂ ಸದಸ್ಯರಾದ ಗವಿಸಿದ್ಧಪ್ಪ ಸಾಹುಕಾರ, ಮಲ್ಲೇಶಗೌಡ ಮಟ್ಟೂರ್, ರಾಮಣ್ಣ ಉದ್ಬಾಳ್, ಸಿಬ್ಭಂದಿ ಗಂಗಾಧರ ಸೇರಿದಂತೆ ತಾಲುಕಿನ ವಿವಿಧ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.