ಬೆಂಗಳೂರಿನಲ್ಲಿ ತಾಂತ್ರಿಕ ತಜ್ಞರ ಸಮಿತಿ ಸಭೆ ವಿಫಲ ಹೊರ ನಡೆದ 5 ಎ ಕಾಲುವೆ ಹೊರಾಟಗಾರರು

 

e-ಸುದ್ದಿ, ಮಸ್ಕಿ

ನಾರಾಯಣಪುರ ಬಲದಂಡೆ ಕಾಲುವೆ ಯೋಜನೆ ವ್ಯಾಪ್ತಿಯ 5 ಎ ಕಾಲುವೆ ಅನುಷ್ಠಾನ ಜಾರಿಗೆ ಕುರಿತು ಬೆಂಗಳೂರಿನ ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೆಶಕರ ಕಚೇರಿಯಲ್ಲಿ ಶನಿವಾರ ನಡೆದ ಸಭೆ ವಿಫಲವಾಗಿದ್ದು 5 ಎ ಕಾಲುವೆ ಹೋರಾಟ ಸಮಿತಿಯ ಮುಖಂಡರು ಸಭೆಯಿಂದ ಹೊರ ನಡೆದ ಘಟನೆ ನಡೆದಿದೆ.
ಸಭೆಯಲ್ಲಿ ಕ್ಯಾಪ್ಟ್‍ನ್ ರಾಜಾರಾವ್ ಮಾತನಾಡಿ 5ಎ ಕಾಲುವೆ ಸಾಧುವಲ್ಲ. ಮಸ್ಕಿ, ಲಿಂಗಸುಗೂರು ಮತ್ತು ಮಾನ್ವಿ ತಾಲೂಕಿನ ಹಳ್ಳಿಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಂದವಾಡಗಿ ಏತ ನೀರಾವರಿ ಯೋಜನೆಯ ಎರಡನೇ ಹಂತದಲ್ಲಿ ಹನಿ ನೀರಾವರಿ ಕಲ್ಪಿಸಲಾಗವದು ಎಂದು ಸಭೆಯಲ್ಲಿ ವಿಷಯ ಮಂಡಿಸಿದ್ದಾರೆ.
ಇದಕ್ಕೊಪ್ಪದ 5 ಎ ಕಾಲುವೆ ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪೂರ ಮಾತನಾಡಿ ನಂದವಾಡಗಿ ಏತ ನೀರಾವರಿ ಬಗ್ಗೆ ಚರ್ಚೆ ಬೇಡ. ನಮಗೆ 5 ಎ ಕಾಲುವೆ ಯೋಜನೆ ಜಾರಿ ಗೊಳಿಸಿ ಎಂದು ಪಟ್ಟು ಹಿಡಿದರು.
ಹನಿ ನೀರಾವರಿ ಯೋಜನೆ ರೈತರಿಗೆ ವರದಾನವಾಗಿದ್ದು ಮಹಾರಷ್ಟ್ರದಲ್ಲಿ ಯಶಸ್ವಿಯಾದ ಬಗ್ಗೆ ನಿಯೋಗ ತೆಗೆದುಕೊಂಡು ಹೋಗಿ ನೋಡಿ ಬರುವ ಪ್ರಸ್ತಾಪವನ್ನು ಅಧಿಕಾರಿಗಳು ರೈತ ಹೊರಾಟಗಾರರ ಮುಂದಿಟ್ಟಾಗ ನಿರಾಕರಿಸಿದ ಹೋರಾಟಗಾರರು ಕರ್ನಾಟಕದಲ್ಲಿ ಮರೋಳ ಏತ ನೀರಾವರಿ ಯೋಜನೆ ವಿಫಲವಾಗಿದ್ದ ಬಗ್ಗೆ ವಾದ ಮಂಡಿಸಿ ಸಭೆಯಿಂದ ಹೊರ ನಡೆದಿದ್ದಾರೆ.
ನಿವೃತ್ತ ಮುಖ್ಯ ಅಭಿಯಂತರ ಬಸವರಾಜ ಕೋಟಿ, ಕೃಷ್ಣ ಜಲ ಭಾಗ್ಯ ನಿಗಮದ ಎಸ್.ರಂಗರಾವ್, ಹೋರಾಟ ಸಮಿತಿಯ ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪೂರ, ನಾಗರಡ್ಡೆಪ್ಪ ದೇವರಮನಿ, ಹನುಮಂತಪ್ಪ ಚುಕ್ಕನಹಟ್ಟಿ ಸಭೆಯಲ್ಲಿ ಭಾಗವಹಿಸಿದ್ದರು.
ಸರ್ಕಾರದ ರಚಿಸಿದ ಸಮಿತಿಯ ಇಬ್ಬರು ಸದಸ್ಯರಾದ ನಿವೃತ್ತ ಮುಖ್ಯ ಅಭಿಯಂತರ ಸಿ.ಅನಂತರಾಮು ಮತ್ತು ನಿವೃತ್ತ ಮುಖ್ಯ ಅಭಿಯಂತರ ಕ್ಯಾಪ್ಟನ್ ಆರ್.ದೋಟಿಹಾಳ ಗೈರು ಆಗಿದ್ದರು.

Don`t copy text!