e-ಸುದ್ದಿ, ಮಸ್ಕಿ
ಪಟ್ಟಣದ 18ನೇ ವಾರ್ಡ್‍ನಲ್ಲಿ 2020-21ನೇ ಸಾಲೀನ 15ನೇ ಹಣಕಾಸು ಯೋಜನೆಯಡಿಯಲ್ಲಿ 5 ಲಕ್ಷ ರೂ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಪುರಸಭೆಗೆ ಅಧ್ಯಕ್ಷೆ ವಿಜಯಲಕ್ಷ್ಮೀ ಬಸನಗೌಡ ಪೊಲೀಸ್ ಪಾಟೀಲ್ ಶನಿವಾರ ಭೂಮಿ ಪೂಜೆ ನೇರವೇರಿಸಿದರು.
ನಂತರ ಮಾತನಾಡಿದ ಅವರು ಪಟ್ಟಣದ ಪ್ರತಿಯೊಂದು ಬಡಾವಣೆಗಳು ಅಭಿವೃದ್ಧಿ ಹೊಂದಬೇಕು ಎನ್ನುವುದು ಪುರಸಭೆಯ ಉದ್ದೇಶವಾಗಿದೆ. ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾದರೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು ಸಾರ್ವಜನಿಕರು ಕಾಮಗಾರಿಯ ಬಗ್ಗೆ ಗಮನ ಹರಿಸಬೇಕು ಎಂದರು.
ಗುತ್ತಿಗೆದಾರರು ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ನಿಗದಿತ ಅವಧಿಯೊಳಗೆ ರಸ್ತೆ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕು ಎಂದರು.
ಉಪಾಧ್ಯಕ್ಷೆ ಕವಿತಾ ಅಮರೇಶ ಮಾಟೂರು, ಬಸನಗೌಡ ಪೋಲಿಸ್ ಪಾಟೀಲ್, ಪುರಸಭೆ ಕಿರಿಯ ಎಂಜಿನಿಯರ್ ಮೀನಾಕ್ಷಿ ದೇಸಾಯಿ, ಅಶೋಕ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.