ಸುಂಕದ ಬಂಕಣ್ಣನವರ ವಚನದಲ್ಲಿ ಬಸವಣ್ಣ
ಬಸವಣ್ಣನವರ ಸಮಕಾಲೀನರಾದ
ಶರಣ ಸುಂಕದ ಬಂಕಣ್ಣನವರು
ಹೆಸರೇ ಹೇಳುವಂತೆ
ಆಗಿನ ಕಾಲದಲ್ಲಿ ಚಾಲ್ತಿಯಲ್ಲಿದ್ದ
ಸುಂಕ- ತೆರಿಗೆ ಸಂದಾಯಕಾರರಾಗಿ ಕಾಯಕ ಮಾಡುತ್ತಿದ್ದರು.
ಅವರ ಜನ್ಮಸ್ಥಳ ಐಕ್ಯಸ್ಥಳಗಳ ಬಗ್ಗೆ ಕೆಲಗೊಂದಲಗಳಿದ್ದರೂ
ಮಲ್ಲಟ. ಸಿರವಾರ ತೂಲೂಕ. ರಾಯಚೂರು ಜಿಲ್ಲೆಯಲ್ಲಿ ಅವರದ್ದೆ ಎಂದು ಕರೆಯುವ ಒಂದು ಸಮಾದಿ ಇದೆ.
ಅವರ ಜನ್ಮಸ್ಥಳವೂ ಇದೆ ಆಗಿರಬಹುದೆಂಬ ಅಭಿಪ್ರಾಯವೂ ಕೆಲವರಲ್ಲಿದೆ.
ಅವರು ಕಾಲಾನಂತರದಲ್ಲಿ ಕಲ್ಯಾಣಕ್ಕೆ ತೆರಳಿದರು.
ಅಲ್ಲಿ ತೆರಿಗೆ ಸಂದಾಯಕಾರರಾಗಿ ಕಾಯಕ ಮಾಡುತ್ತಾ.. ಬಸವಣ್ಣನವರ ಹತ್ತಿರದ
ಆಪ್ತ ಶರಣರೂ ಕೂಡ ಆದ ಶರಣ ಬಂಕಣ್ಣನವರು,
ಬಸವಣ್ಣನವರನ್ನು ಅತ್ಯಂತ ಹತ್ತಿರದಿಂದ ಬಲ್ಲವರು,
ಅವರ ವ್ಯಕ್ತಿತ್ವ ಜೀವನ ಶೈಲಿಯಿಂದ ಪ್ರಭಾವಿತರಾದ ಶರಣ ಸುಂಕದ ಬಂಕಣ್ಣನವರು ನಿತ್ಯ ಕಾಯಕದೊಂದಿಗೆ
ಹಲವಾರು ವಚನಗಳು ರಚಿಸಿದ್ದಾರೆ ಇದುವರೆಗೆ ಅವರ ೧೦೮ ವಚನಗಳು ಮಾತ್ರ ಲಭ್ಯವಿವೆ,
ಅದರಲ್ಲಿ ಒಂದು ವಚನದಲ್ಲಿ ಅಣ್ಣಬಸವಣ್ಣನವರನ್ನು ಗುರುಮೂರ್ತಿ ಇಷ್ಟಲಿಂಗವೆಂದು ಸ್ತುತಿಸಿದ್ದಾರೆ ಶರಣ ಬಂಕಣ್ಣನವರು,.
ಬಸವಣ್ಣನೆ ಗುರುಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ.
ಚೆನ್ನಬಸವಣ್ಣನೆ ಲಿಂಗಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ.
ಸಿದ್ಧರಾಮಯ್ಯನೆ ಜಂಗಮಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದನಯ್ಯಾ.
ಮರುಳಶಂಕರದೇವರೆ ಪ್ರಸಾದಮೂರ್ತಿಯಾಗಿ ಎನ್ನ ಕರಸ್ಥಲಕ್ಕೆ ಬಂದರಯ್ಯಾ.
ಪ್ರಭುದೇವರೆ ಜ್ಞಾನಮೂರ್ತಿಯಾಗಿ ಎನ್ನ ಹೃದಯಸ್ಥಲಕ್ಕೆ ಬಂದರಯ್ಯಾ.
ಇವರು ಮುಖ್ಯವಾದ ಏಳ್ನೂರೆಪ್ಪತ್ತಮರಗಣಂಗಳು
ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು, ಸರ್ವತೋಮುಖವಾಗಿ.
ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ,
ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ.
ಹರಹರಾ, ಶಿವಶಿವಾ ಮಹಾದೇವಾ ಮಹಾದೇವಾ,
ತ್ರಿಕಾಲದಲ್ಲಿಯೂ ನಿಮ್ಮ ಶರಣರ ಶ್ರೀಪಾದವ ನೆನೆವುತಿರ್ದೆನಯ್ಯಾ,ವೀರಬಂಕೇಶ್ವರ
ಎಂದು,.
ಸನ್ನಡತೆ ಸದ್ಭಾವ ಸದಾಚಾರಗಳ ಸದುವಿನಯವೇ ಸಾಕಾರ ಮೂರ್ತಿಗೊಂಡು ಎನ್ನ ಕರಸ್ಥಲಕ್ಕೆ ಬಂದ ಅರಿವಿನ ಕುರುಹೆ
ಗುರು ಬಸವಣ್ಣನೆಂದು ಸ್ತುತಿಸಿದ್ದಾರೆ ,..
ಮುಂದೆ.. ಆ ಅರಿವಿನ ಪ್ರತಿರೂಪವೇ ತಾನಾಗಿ’ ಆಚಾರ ಲಿಂಗವಾಗಿ ಎನ್ನ ಕರಸ್ಥಲಕ್ಕೆ ಬಂದ ಗುರು ಚೆನ್ನಬಸವಣ್ಣನೆಂದು ಹಾಡಿ ಸ್ತುತಿಸಿದ್ದಾರೆ,,
ಮೂರನೇ ಸಾಲಿನಲ್ಲಿ,
ಈ ಜಗದ ಯೋಗಿಯಾಗಿ
ಅನುಭಾವದ ಜಂಗಮಮೂರ್ತಿಯಾಗಿ’ ಎನ್ನ ಕರಸ್ಥಲಕ್ಕೆ ಬಂದ ಸಿದ್ಧರಾಮೇಶ್ವರರು ಎಂದು ಹಾಡಿಹೊಗಳಿದ್ದಾರೆ,,
ನಂತರದ ಸಾಲಿನಲ್ಲಿ..
ಮರುಳಶಂಕರದೇವರೆ ಪರಮಪ್ರಸಾದ ಸ್ವರೂಪವಾಗಿ ಎನ್ನ ಕರಸ್ಥಲಕ್ಕೆ ಬಂದರೆಂದು ತಿಳಿಸಿದ್ದಾರೆ,,
ಇನ್ನು ಪ್ರಭುದೇವರೆ ನಿರಾಕಾರ
ಸುಜ್ಞಾನ ಮೂರ್ತಿಯಾಗಿ ಎನ್ನೊಳಗಿನ ಹೃದಯಸ್ಥಲಕ್ಕೆ ಬಂದರೆಂದು ಕೊಂಡಾಡಿದ್ದಾರೆ..
ಇನ್ನಿವರು ಮುಖ್ಯರಾಗಿ ಏಳ್ನೂರೆಪ್ಪತ್ತು ಅಮರಗಣಂಗಳು,
ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು,
ತನುವಿನಲ್ಲಿ ನಿರ್ಮೋಹಿಯಾಗಿ’
ಬಸವಣ್ಣನನ್ನೇ ತನ್ನ ಅರಿವಿನಲ್ಲಿ
ತೋರುವ ಗುರುವೆಂದು ತಿಳಿದು,
ಮನ ನಿರಹಂಕಾರವಾಗಿ’ ಚೆನ್ನಬಸವಣ್ಣನನ್ನೇ ತನ್ನ ನಡೆ-ನುಡಿ’ ಆಚಾರದಲ್ಲಿ’ ಕಾಣುವ ಲಿಂಗವೆಂದು,
ಪ್ರಾಪಂಚಿಕ ಧನದಲ್ಲಿ ನಿರಾಪೇಕ್ಷಿಯಾಗಿ ತನ್ನ ಅನುಭಾವದಲ್ಲಿ ಕಾಣುವ ಜಂಗಮಲಿಂಗವೇ ಸಿದ್ಧರಾಮಯ್ಯನೆಂದು,
ತನ್ನ ಸಮಚಿತ್ತದ ಪ್ರಸಾದ ಸ್ವರೂಪವೇ ಮರುಳಶಂಕರದೇವರೆಂದು,
ತನ್ನೊಳಗಿನ ಸುಜ್ಞಾನದ ಸೆಲೆಯು ಅಲ್ಲಮಪ್ರಭುದೇವರೆಂದು,
ಇನ್ನು ತನ್ನ ಸರ್ವಾಂಗದಲ್ಲಿ ಬೆಳಗುವ ಮಹಾ ಚೈತನ್ಯವೇ
ಏಳ್ನೂರೆಪ್ಪತ್ತು ಅಮರಗಣಂಗಳೆಂದು ಸರ್ವತೋಮುಖವಾಗಿ.
ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ,
ಆಹಾ ಎನ್ನ ಸತ್ಯವೆ, ಆಹಾ ಎನ್ನ ನಿತ್ಯವೆ,
ಎಂದು ಹಾಡಿ ಕೊಂಡಾಡಿ
ಹರಹರಾ, ಶಿವಶಿವಾ ಮಹಾದೇವಾ ಮಹಾದೇವಾ,..
ತ್ರಿಕಾಲದಲ್ಲಿಯೂ ನಿಮ್ಮ ಶರಣರ ಶ್ರೀಪಾದವ ನೆನೆವುತಿರ್ದೆನಯ್ಯಾ, ವೀರಬಂಕೇಶ್ವರಾ.. ಎಂದು ಹೇಳುವ ಮೂಲಕ ಶರಣರ ನೆನಹೇ ಎನಗೆ
ಅಗಮ್ಯ ಅಗೋಚರ ಅಪ್ರತಿಮ’
ನಿರಾಕಾರ ಪ್ರಕೃತಿಯ ದೇವನಾದ ವೀರಬಂಕೇಶ್ವರನ ಸ್ತುತಿಯೆಂದು’ ಬಸವಾದಿ ಶರಣರನ್ನು ಮುಕ್ತಕಂಠದಿಂದ ಶ್ಲಾಘಿಸಿ ಹಾಡಿ ಕೊಂಡಾಡಿದ್ದಾರೆ,.
ಶರಣ ಸುಂಕದ ಬಂಕಣ್ಣನವರು…👏🏻👏🏻
✍-ಲೋಕೇಶ್ ಎನ್ ಮಾನ್ವಿ