e-ಸುದ್ದಿ, ಮಸ್ಕಿ
ತಾಲೂಕಿನ ಊಟಕನೂರು ಗ್ರಾಮದ ಮರಿಬಸವಲಿಂಗತಾತನ ಜಾತ್ರ ಮಹೋತ್ಸವ ಸರಳವಾಗಿ ನಡೆಯಲಿದೆ ಎಂದು ಶ್ರೀಮಠದ ಪೀಠಾಧಿಪತಿ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.
ಕರೊನಾ ಹಿನ್ನಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಕಡಿತ ಮಾಡಿದ್ದು ಜ.18 ಸೋಮವಾರದಿಂದ ಫೆ.5 ಶುಕ್ರವಾರದ ವರೆಗೆ ನಡೆಯಲಿದೆ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಡಾ.ಮಹಾಂತಸ್ವಾಮೀಜಿ ಮುದಗಲ್ ಕಲ್ಯಾಣ ಆಶ್ರಮ ತಿಮ್ಮಾಪೂರು ಪ್ರವಚನ ನಡೆಸುವರು. ಶಂಕ್ರಯ್ಯಸ್ವಾಮಿ ಗುರುಮಠ ಬಾಗಲಕೋಟೆ, ಬಸವರಾಜ ಹೊನ್ನಿಗನೂರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಪ್ರತಿದಿನ ಬೆಳಿಗ್ಗೆ ಬಸವಲಿಂಗ ತಾತನವರ ಗದ್ದುಗೆಗೆ ವಿಶೇಷ ಪೂಜೆ ಅಲಂಕಾರ ಕಾರ್ಯಕ್ರಮಗಳು ನಡೆಯಲಿವೆ. ಫೆ.5 ರಂದು ಶುಕ್ರವಾರ ಪಲ್ಲಕ್ಕಿ ಮೆರವಣಿಗೆ, ರಥೋತ್ಸವ ಜರುಗಲಿದೆ ಎಂದು ಸ್ವಾಮೀಜಿ ಪ್ರಕಟಣೆಯಲ್ಲಿ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.