ಬಸವ ಭೂಮಿ

ಬಸವ ಭೂಮಿ

ಬಸವಣ್ಣ ನಿಮ್ಮ ಆಸೆಯ
ಕಲ್ಯಾಣ ರಾಜ್ಯ ಹೇಗಿತ್ತು
ನಿಜವಾದ ಘಣರಾಜ್ಯವೆ
ಸಮಾನತೆಯ ಸಾಮ್ರಾಜ್ಯವೆ ||

ಆಧ್ಯಾತ್ಮಿಕ ಅಂತಃಪುರವೆ
ಅರಿವಿನ ಅನುಭಾವವೆ
ಸಾರ್ವಕಾಲಿಕ ಸತ್ಯವೆ
ಎನ ಬಣ್ಣಿಸಲಿ ಕಲ್ಯಾಣವ ||

ಆಸೆ ಪಾಶ ಅಳಿದವರು
ರೋಷ ತೋರೆದವರು
ಇಂದಿಂಗೆ ನಾಳಿಂಗೆಂದು
ಎನ್ನನ್ನು ಸಂಗ್ರಹಿಸದವರು ||

ಸತ್ಯ ಶುದ್ಧ ಕಾಯಕದವರು
ಕಾಯಕದಲ್ಲಿ ನಿರತರಾದಾಗ
ಗುರು ಲಿಂಗ ಜಂಗಮದ
ಹಂಗು ಹರಿದವರು. ||

ಅಂಗದ ಮೇಲೆ ಲಿಂಗವಿದ್ದವರನ್ನು
ಸಂಗಯ್ಯನೆಂದವರು
ಲಿಂಗವಂತರ ಭೃತ್ಯರಾದವರು
ಸದಾಚಾರಿ, ಶಿವಾಚಾರಿಗಳು. ||

ಸಂಗನ ಶರಣರ ಬರವೆಮಗೆ
ಪ್ರಾಣ ಜೀವಾಳ ವೆಂದವರು
ಪರಧನ ಪರಸ್ತ್ರೀಯರಿಗೆ
ಎಂದೂ ಅಳುಪದವರು ||

ಮತ್ತೊಂದು ದೈವಕ್ಕೆರಗದೆ
ಷಟ್ಥ್ಸಲ ಸಾಧಿಸಿದವರು
ಶರಣ ಸತಿ ಲಿಂಗಪತಿ
ಭಾವ ಬಲಿದವರು ||

ದಯವೆ ಧರ್ಮದ ಮೂಲ
ಎಂದು ಜಗಕೆ ಸಾರಿದವರು
ನಿತ್ಯ ದಾಸೋಹ ಗೈದು
ಕಾಯಕಕ್ಕೆ ದೈವತ್ವ ತಂದವರು||

ಭವ ಗೆದ್ದು ಭ್ರಾಂತಿ ತೊರೆದು
ಬ್ರಹ್ಮ ಬೀಜ ಬಿತ್ತಿದವರು
ಮದ್ದಳೆ ಬಾರಿಸದರೇನು
ಮಾಯೆಯಾ ಗೆಲಿದವರು ||

ಜಗದಗಲ ವಿಸ್ತರಿಪ ಪರಶಿವನ
ಕರಸ್ಥಲಕ್ಕೆ ತಂದವರು.
ಅಂತರಂಗ ಬಹಿರಂಗ
ಶುದ್ಧವಾಗಿ ನಿಂದವರು. ||

ಪರಿಶುದ್ಧತೆಯ ಪ್ರತೀಕ ನೀವು
ಎನೆಂದು ಬಣ್ಣಿಸಲಿ ಬಸವಾ
ನಿಮ್ಮ ಶರಣ ಸಂಕುಲವಾ
ವಾಂಙ್ಮನಕ್ಕೆ ನಿಲುಕದವರು ||

ವಚನದಿ ಅಜರಾಮರರು
ಕೂಡಲ ಸಂಗನ ಕೂಡಿದವರು
ನಿತ್ಯ ಮುಕ್ತ ಶರಣರು
ನಾಡ ಬೆಳಗುವವರು. ||

ಸವಿತಾ ಎಮ್ ಮಾಟೂರು, ಇಲಕಲ್ಲ

Don`t copy text!