ಮರಿಬಸವಲಿಂಗತಾತನ ಜಾತ್ರಾ ಮಹೋತ್ಸವ, ಪ್ರವಚನ ಆರಂಭ

e-ಸುದ್ದಿ, ಮಸ್ಕಿ
ತಾಲೂಕಿನ ಊಟಕನೂರು ಗ್ರಾಮದ ಮರಿಬಸವಲಿಂಗತಾತನ ಜಾತ್ರ ಮಹೋತ್ಸವ ಹಾಗೂ ಪ್ರವಚನ ಕಾರ್ಯಕ್ರಮಕ್ಕೆ ಜ.18 ಸೋಮವಾರ ತೆಕ್ಕಲಕೋಟೆಯ ಶ್ರೀವೀರಭದ್ರ ಶಿವಾಚಾರ್ಯರ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಧಾರ್ಮಿಕ ಸಭೆಗೆ ಚಾಲನೆ ನೀಡಿದರು.
ನಂತರ ಸ್ವಾಮೀಜಿ ಮಾತನಾಡಿ ಕಳೆದ ವರ್ಷ ಕರೊನಾ ಮಹಾಮರಿ ಎಲ್ಲರ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಉಂಡು ಮಾಡಿ ಜನ ಜೀವನ ಅಸ್ತವ್ಯಸ್ತ ಮಾಡಿದೆ. ಭಕ್ತರು ಕರೊನಾವನ್ನು ಅಲಕ್ಷ ಮಾಡಬೇಡಿ. ದೈವಿ ಕೃಪೆಯಿಂದ ಕರೊನಾದಿಂದ ಪಾರಾಗಿ ಸುಂದರ ಬದುಕು ಕಟ್ಟಿಕೊಳ್ಳೋಣ ಎಂದರು.
ಶ್ರೀಮಠದ ಪೀಠಾಧಿಪತಿ ಶ್ರೀಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಆಶೀವರ್ಚನ ನೀಡಿದರು. ಡಾ.ಮಹಾಂತಸ್ವಾಮೀಜಿ ಮುದಗಲ್ ಕಲ್ಯಾಣ ಆಶ್ರಮ ತಿಮ್ಮಾಪೂರು ಪ್ರವಚನ ನಡೆಸಿದರು. ನಾಗಪ್ಪ ತಾತ ಕಟ್ಟೇ ಬಸವೇಶ್ವರ ಗೌಡನಬಾವಿ ಇದ್ದರು.ಶಂಕ್ರಯ್ಯಸ್ವಾಮಿ ಗುರುಮಠ ಬಾಗಲಕೋಟೆ, ಬಸವರಾಜ ಹೊನ್ನಿಗನೂರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಬೆಳಿಗ್ಗೆ ಶ್ರೀಮಠದ ಬಸವಲಿಂಗ ತಾತನವರ ಗದ್ದುಗೆಗೆ ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು.

Don`t copy text!