ಬಂದು ಹೋದಳು
ಬಂದು ಹೋದಳು
ನನ್ನ ಗೆಳತಿ.
ನೆಲ ಮುಗಿಲಿನ ಪ್ರೀತಿಯು .
ಮೋಡ ಮರೆಯ
ನಗೆಯ ಚೆಲ್ಲುತ
ಸ್ನೇಹದೊಲುಮೆ ಮೂರ್ತಿಯು ,
ಮುಗ್ಧ ಮನ ದಿಟ್ಟ ಶೋಧ
ಚೆಲುವು ಚಿಲುಮೆ ಬುಗ್ಗೆ
ಪ್ರತಿಭೆ ತುಂಬಿದ ಕೀರ್ತಿಯು .
ಬಾಳ ಬಟ್ಟೆ ಮೌಲ್ಯ ಹೊತ್ತಳು
ಗೆದ್ದು ನಿಂತಳು ಸಮರದಲ್ಲಿ .
ಬತ್ತಿ ಹೋಗದ ಸ್ಪೂರ್ತಿಯು
ಮೌನ ಹೆಜ್ಜೆ ದೂರ ದೃಷ್ಟಿಯು
ಮೂರು ದಶಕವು ಕಳೆದವು .
ಅವಳು ನಡೆದ ಹಾದಿಯಲ್ಲಿ .
ಮತ್ತೆ ಚಿಗುರಿತು ಮಾವು ಬೇವು
ಒಡಲೊಡೆದ ಪ್ರೇಮವು .
ಮಾತು ಮುತ್ತು ಕಾವ್ಯವಾದವು .
ನಿತ್ಯವಾದಳು ಮುಕ್ತ ಬದುಕಿಗೆ.
ಸತ್ಯವಾದಳು ಸಹನೆ ಶಾಂತಿಗೆ .
ತುಡಿತ ಮಿಡಿತ ನಾಡಿ ಬಡಿತ
ಮಾಸಿಹೋಗದ ಹೆಜ್ಜೆ ಗುರುತು
ಹೃದಯ ಕುಲುಮೆ ಭಾವವು .
ಬಂದು ಹೋದಳು
ನನ್ನ ಗೆಳತಿ.
ನೆಲ ಮುಗಿಲಿನ ಪ್ರೀತಿಯು
ಡಾ.ಶಶಿಕಾಂತ.ಪಟ್ಟಣ -ಪುಣೆ
ಗೆಳತಿ ಇಲ್ಲಿ ಒಂದು ಕಲ್ಪನೆ ನೆಪ ಮಾತ್ರ.ಅವಳನ್ನು ನೆನದು ಮಧುರ ಭಾವವನ್ನು ಬಿಚ್ಚುವ ಕವಿಯ ಪ್ರಯತ್ನಕ್ಕೆ ಓದುಗರ ಸಹ ಸ್ಪಂದನೆಯ ನಿಜವಾದ ಸ್ನೇಹ ಪ್ರೀತಿಯ ಅನಾವರಣ -ಶಶಿಕಾಂತ.