ಒಮ್ಮೆ ಒಮ್ಮೆ ಮಾತ್ರ 

ಒಮ್ಮೆ ಒಮ್ಮೆ ಮಾತ್ರ 

ಗೆಳೆಯರೇ
ಒಮ್ಮೆ ಒಮ್ಮೆ ಮಾತ್ರ ನೀವು
ಫೇಸ್ ಬುಕ್ ವ್ಹಾಟ್ಸ್ ಅಪ್
ಟ್ವಿಟ್ಟರ್ ಮೆಸ್ಸೆಂಜರ್ ಮೇಲ
ಮೊಬೈಲ್ ಬಿಟ್ಟು ಹೊರ ಬನ್ನಿ
ಕೊರೆಯುವ ಚಳಿಗೆ
ಮುದುಡಿದ ಕಂದಮ್ಮಗಳಿಗೆ
ಕಂಬಳಿ ಹೊದಿಸಬನ್ನಿ .
ಸುರಿವ ಮಳೆ ಬೆಂಕಿ ಬಿಸಿಲಿಗೆ
ಕೊಡೆಯಾಗ ಬನ್ನಿ .
ಹಸಿದು ಬಳಲಿದ ಹೊಟ್ಟೆಗೆ
ಅನ್ನ ಹಾಕ ಬನ್ನಿ .
ಸೂರಿಲ್ಲದೆ ಕಂಗೆಟ್ಟ
ಅಲೆಮಾರಿ ಬದುಕಿಗೆ
ಚತ್ತು ಚಾವಣಿಯಾಗ ಬನ್ನಿ.
ಬಂಧುಗಳೇ.
ಅಳುವವರ ಕಣ್ಣೀರು
ಒರೆಸುವ ಬಟ್ಟೆಯಾಗ ಬನ್ನಿ
ಸಮರ ಸರಸವ ಬಿಟ್ಟು.
ಪರಿವರ್ತನೆಗೆ ಗಟ್ಟಿಯಾಗ ಬನ್ನಿ .
ಶತಕಗಳೆ ಕಳೆದಿವೆ .
ಬೆಳಕು ಕಾಣದ ಬಾಳು .
ಬಡತನ ಬವಣೆ ಗೋಳು .
ಜಾತಿ ಸಿರಿ ಕಿತ್ತೆಸೆವ .
ಕ್ರಾಂತಿ ಕಿಡಿ ಹಚ್ಚೋಣ .
ಶಾಂತಿ ಸಮತೆಯ ಉಳಿಸೋಣ
ಮನುಜ ಪಥಕೆ ನಾವು
ಹೆಜ್ಜೆ ಹಾಕೋಣ .
ಒಮ್ಮೆ ಒಮ್ಮೆ ಮಾತ್ರ ನೀವು
ಫೇಸ್ ಬುಕ್ ವ್ಹಾಟ್ಸ್ ಅಪ್
ಟ್ವಿಟ್ಟರ್ ಮೆಸ್ಸೆಂಜರ್ ಮೇಲ
ಮೊಬೈಲ್ ಬಿಟ್ಟು ಹೊರ ಬನ್ನಿ

ಡಾ.ಶಶಿಕಾಂತ,ಪಟ್ಟಣ.-ಪೂನಾ

Don`t copy text!