ವಿಜಯಮಹಾಂತೇಶ

ವಿಜಯಮಹಾಂತೇಶ

ಎನ್ನ ಮನ ಬಳಲಿತ್ತು ನೋಡಾ
ನಿಮ್ಮನರಿಯದೆ
ನೂರೆಂಟು ಚಿಂತೆಯಲಿ ||

ಎನ್ನ ತನು ಬಳಲಿತ್ತು ನೋಡಾ
ನಿಮ್ಮ ಪಾದ ನಂಬದೆ
ನೂರಾರು ದೈವಗಳಿಗೆರಗಿ ||

ಎನ್ನ ಭಾವ ಬಳಲಿತ್ತು ನೋಡಾ
ನಿಮ್ಮ ಇರುವನರಿಯದೆ
ಭವ ಬಂಧನದಿ ಸಿಲುಕಿ ||

ನಿಮ್ಮನರಿತ ಮೇಲೆ ಇನ್ನೆನು
ಎನ್ನ ತನು, ಮನ, ಭಾವ
ಶುದ್ಧಗೊಂಡು ನಿರಾಳವಾಯಿತ್ತು
ತವನಿಧಿ ವಿಜಯಮಹಾಂತೇಶ ||

ಸವಿತಾ ಎಮ್ ಮಾಟೂರು, ಇಲಕಲ್ಲ

Don`t copy text!