ನಮ್ಮೂರಲ್ಲಿ
ಗೆಳೆಯರೇ
ನಮೂರಲ್ಲಿ ಇದ್ದವು ಆಗ
ಗುಡಿ ಮಠ ಮಂದಿರಗಳು .
ವರ್ಷದಲ್ಲಿ ಜಾತ್ರೆ ಹಬ್ಬ ಹುಣ್ಣಿಮೆ
ಇದ್ದರು ಹಿರಿಯರು ದೊಡ್ಡವರು.
ಇರಲಿಲ್ಲ ಜಾತಿ ಧರ್ಮ ಭೇದ
ಈಗ ನಮ್ಮೋರಲ್ಲಿವೆ ಟಾಕೀಸು
ಬಾರು ಹೋಟೆಲು ಬೀಡಿ ಅಂಗಡಿ
ಗುಟ್ಕಾ ತಂಬಾಕು ಮಾವಾ ಸೇವನೆ.
ಸಂಜೆ ಮಟ್ಕಾ ಮೆರವಣಿಗೆ .
ತೂರಾಡುವವರೇ ನಾಯಕರು
ಈಗೀಗ ದೊಂಬಿ ಗಲಭೆ
ಅನ್ಯ ಕೋಮಿನ ಜಗಳ
ಕೆರೆ ಸುತ್ತ ಮಲೀನಗೊಂಡಿದೆ
ಹಾಲು ದೇಗುಲಗಳಲ್ಲಿ
ಇಸ್ಪೀಟು ಆಟ ಜೂಜು ಕುಡಿತ
ಆಗ ಖಾದಿ ಬಟ್ಟೆ ಗಾಂಧಿ ಟೋಪಿ
ಈಗ ನೈಲಾನ ಸಿಲ್ಕು ದಾಳಿ
ಓಣಿಗೊಂದು ವಿಡಿಯೋ ಅಂಗಡಿ
ಅಶ್ಲೀಲ ಚಿತ್ರಗಳ ಹಾವಳಿ
ಊರ ತುಂಬಾ ಫ್ಲೆಕ್ಷು ಬೊರ್ಡ್ಸ್
ನಮ್ಮೂರಲ್ಲಿ ಬದುಕಿದ್ದೇವೆ
ನಾವು ಬಾಳು ಕಳೆದುಕೊಂಡು.
–ರವೀಂದ್ರ ರು ಪಟ್ಟಣ -ಮುಳಗುಂದ(ಗದಗ)