ಡಾ.ಸಿದ್ಧಗಂಗ ಸ್ವಾಮೀಜಿ ಭಾವಚಿತ್ರ ಮೆರವಣಿಗೆ 5 ಸಾವಿರ ಜನರಿಗೆ ಪ್ರಸಾದ ವಿತರಣೆ

 

e-ಸುದ್ದಿ, ಮಸ್ಕಿ

ಲಿಂ.ಡಾ.ಸಿದ್ಧಲಿಂಗ ಮಹಾಸ್ವಾಮೀಜಿಯವರ ಎರಡನೇ ಪುಣ್ಯತಿಥಿ ಅಂಗವಾಗಿ ಪಟ್ಟಣದ ದೈವದ ಕಟ್ಟೆ ಬಳಗದ ಗೆಳೆಯರು ಗುರುವಾರ ಸಿದ್ಧಗಂಗಾ ಶ್ರೀಗಳ ಭಾವಚಿತ್ರ ಮೆರವಣಿಗೆ ಮಾಡಿ 5 ಸಾವಿರ ಜನರಿಗೆ ಪ್ರಸಾದ ವಿತರಿಸಿದರು
ಗಚ್ಚಿನ ಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಮೆರವಣಿಗೆಗೆ ಚಾಲನೇ ನೀಡಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಬಸವನಗೌಡ ತುರ್ವಿಹಾಳ, ಮಹಾದೇವಪ್ಪಗೌಡ ಪಾಟೀಲ, ಡಾ.ಶಿವಶರಣಪ್ಪ ಇತ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ಸಿಪಿಐ ದೀಪಕ್ ಬೂಸರಡ್ಡಿ, ಪಿಎಸ್‍ಐ ಸಣ್ಣ ಈರೇಶ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಯಿತು. ಡಿ.ಕೆ ಸರ್ಕಲ್ ನ ನೂರಾರು ಯುವಕರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿ ಜನಮನ ಗಳಿಸಿದರು.

 

Don`t copy text!