ಕೃಷಿ ಕಾಯ್ದೆ ರದ್ದತಿಗೆ ಒತ್ತಾಯ

 

e-ಸುದ್ದಿ, ಮಸ್ಕಿ

ರೈತರಿಗೆ ಮಾರಕವಾದ 3 ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರದ ರದ್ದು ಮಾಡುವಂತೆ ಒತ್ತಾಯಿಸಿ ಜ.26 ರಂದು ಬೆಂಗಳೂರಿನಲ್ಲಿ ರಾಜ ಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿಕಾರಿ ಸಾಂಸ್ಕøತಿಕ ವೇದಿಕೆ (ಆರ್ ಸಿ ಎಫ್) ಸಂಘಟನೆಯ ರಾಜ್ಯ ಸಮಿತಿ ಸಂಯೋಜಕ ಎಂ.ಗಂಗಾಧರ ಹೇಳಿದರು.
ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂದೆ ಶುಕ್ರವಾರ ನಡೆದ ಕಾಯ್ದೆ ವಿರೋಧಿಸಿ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.
ದೆಹಲಿಯಲ್ಲಿ 70 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ರೈತರ ಬೇಡಿಕೆಯನ್ನು ಬೆಂಬಲಿಸಿ ಸಿಆಆರ್‍ಎಫ್ ನೇತೃತ್ವದಲ್ಲಿ ಸಾವಿರಾರು ರೈತರು ಭಾಗವಹಿಸುವರು ಎಂದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಮನ್ನಪೂರು, ಕಾರ್ಯದರ್ಶಿ ಶರಣಬಸವ ಕವಿತಾಳ, ಆದಿ ನಾಗನೂರು, ರಂಗನಾಥ ಜಾಲಿಹಾಳ, ಶಿವಪುತ್ರ ತುರ್ವಿಹಾಳ, ಎಚ್.ಆರ್.ಹೊಸಮನಿ, ಯಲ್ಲಪ್ಪ ಜವಳಗೇರಾ, ಸಂತೋಷ ಹಿರೇದಿನ್ನಿ ಇದ್ದರು.

Don`t copy text!