ಕಡಲು
ಅಡಗಿಸಿಕೊಂಡಿಹುದು ತನ್ನ
ಒಡಲಲ್ಲಿ ಜಲಚರಗಳನ್ನು
ಮಾನವನ ಕಣ್ಣಿಗೆ ಬೀಳದಂತೆ
ಈ ಮೂಕ ಜೀವಿಗಳನ್ನು
ತೋರುವುದು ಹೊರ ಪ್ರಪಂಚಕ್ಕೆ
ಗಾಂಭೀರ್ಯತೆಯನ್ನು
ದಡದಲ್ಲಿ ಮಾತ್ರ ನಿರ್ಮಿಸುವುದು
ಸುಂದರ ಅಲೆಗಳನ್ನು
ಅಪ್ಪಿಕೊಳ್ಳುವುದು ಎಲ್ಲ
ನದಿಗಳನ್ನು
ಸಾರುವುದು ಜಗಕೆ
ಅನೇಕತೆಯಲ್ಲಿ ಏಕತೆಯನ್ನು
ರೊಚ್ಚಿಗೆದ್ದರೆ ತರುವುದು
ಸುನಾಮಿಯನ್ನು
ಅಲ್ಲೋಲಕಲ್ಲೋಲ ಮಾಡುವುದು
ಮನುಷ್ಯನ ಜೀವನವನ್ನು
ದೇವರ ಪ್ರತಿಯೊಂದು ಸೃಷ್ಟಿಯು
ಕಲಿಸುವುದು ಪಾಠವನ್ನು
ಅರ್ಥೈಸಿಕೊಂಡು ಜೀವಿಸಿದರೆ
ಕಾಣುವೆವು ಇಲ್ಲೆ
ಸ್ವರ್ಗವನ್ನು………
–– ಡಾ ನಂದಾ ಕೋಟೂರ, ಬೆಂಗಳೂರು