e-ಸುದ್ದಿ, ಮಸ್ಕಿ
ಪಟ್ಟಣದ ಕಲ್ಲುಗುಡಿ ಚೌಡೇಶ್ವರಿಯ ರಥೋತ್ಸವ ಗುರುವಾರ ಸಂಜೆ ಸರಳವಾಗಿ ಅಚ್ಚುಕಟ್ಟಾಗಿ ನೆರವೇಋಇತು. ಬೆಳ್ಳಿಗ್ಗೆ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ, ಹೋಮ, ಹವನ ಕಾರ್ಯಕ್ರಮಗಳು ಜರುಗಿದವು.
ಸಂಜೆ 4 ಗಂಟೆಗೆ ಪಲ್ಲಕ್ಕಿ ಸೇವೆ ನಡೆದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೂರಾರು ಭಕ್ತರು ಜಯಘೋಷಣೆಗಳ ನಡುವೆ ರಥವನ್ನು ಯುವಕರು ಎಳೆದು ಪುನಿತರಾದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಅಪ್ಪಾಜಿಗೌಡ ಪಾಟೀಲ, ಷಡಕ್ಷರಪ್ಪ ಬಾಳೆಕಾಯಿ, ಅಮದಾನಪ್ಪ ಗುಂಡಳ್ಳಿ, ದೇವಾಂಗ ಸಮಾಜದ ಮುಖಂಡರಾದ ಅಮರಪ್ಪ ಕೊಪ್ಪರದ, ಶಿವಶಂಕ್ರಪ್ಪ ಹಳ್ಳಿ, ಶಂಕ್ರಪ್ಪ ಜೋಗಿನ್, ಮಂಜುನಾಥ ಬಿಜ್ಜಳ, ಅಮರಪ್ಪ ವನಕಿ ಸೆರಿದಂತೆ ಅನೇಕರು ಬಾಗವಹಿಸಿದ್ದರು.