ವಿರಹ
ನೀಳ ಜಡೆಯ
ನೇರ ನಿಲುವಿನ
ಹಸಿರು ಲಂಗ
ಕೆಂಪು ದಾವಣಿ
ಹಳದಿ ರವಿಕೆ
ಹಣೆ ತುಂಬಾ
ಕುಂಕುಮ ಇಟ್ಟು
ತಲೆ ತುಂಬಾ
ಮಲ್ಲಿಗೆ ಮುಡಿದು
ಚಿಗುರು ಬೆರಳಲ್ಲಿ
ಕೋಮಲ ಕೈಗಳಿಂದ
ಕಂಬವನ್ನು ಅಪ್ಪಿ
ತನ್ನ ಇನಿಯನಿಗಾಗಿ
ಕಾಯುವ ಕಾತುರವೇ.,.?
ಚಿಂತೆ ಬೇಡ ಚೆಲುವೆ
ಬಂದೇ ಬರುವನು
ಅವನು ಓಡೋಡಿ
ನಲ್ಲೆಯ ನೋಡಲು
ನೋಡಲಾರೆ ನಿನ್ನ
ಈ ದುಗುಡವ
ನಸುನಕ್ಕು ಬಿಡು ಒಮ್ಮೆ….
–ಗೀತಾ.ಜಿ.ಎಸ್
ಹರಮಘಟ್ಟ.ಶಿವಮೊಗ್ಗ