ಸ್ಮರಣೆ
ಮಹಾತ್ಮ
ಒಬ್ಬ ವ್ಯಕ್ತಿ ತೀರಿಕೊಂಡಾಗ ವಿಶ್ವಸಂಸ್ಥೆಯು ತನ್ನೆಲ್ಲ ೫೫ ಸದಸ್ಯ ರಾಷ್ಟ್ರಗಳ ಧ್ವಜಗಳನ್ನು ಮತ್ತು ತನ್ನ ಧ್ವಜವನ್ನು ಅರ್ಧಕ್ಕೆ ಇಳಿಸಿ ಸಂತಾಪ ಸೂಚಿಸಿದ್ದು ಮಹಾತ್ಮ ಗಾಂಧೀಜಿಗೆ ಮಾತ್ರ. ಜಗತ್ತಿನ ಯಾವ ವ್ಯಕ್ತಿಗೂ ಈ ರೀತಿಯ ಗೌರವ ಇಲ್ಲಿಯವರೆಗೂ ಸಿಕ್ಕಿಲ್ಲ. ಬಹುಶಃ ಸಿಗುವುದೂ ಇಲ್ಲ. ಏಕೆಂದರೆ ಮಹಾತ್ಮನ ರೀತಿ ಶಾಂತಿ, ಅಹಿಂಸೆ, ಸತ್ಯವನ್ನು ಅನುಷ್ಠಾನಗೈದ ಇನ್ನೊಬ್ಬ ವ್ಯಕ್ತಿ ಜಗತ್ತಿನಲ್ಲಿ ಇಲ್ಲ. ಗಾಂಧಿ ಎಂದರೆ ಎಲ್ಲರನ್ನೂ ಒಳಗೊಳ್ಳುವುದು. ಗಾಂಧಿ ಎಂದರೆ ಪ್ರತ್ಯೇಕತೆಯನ್ನು ತೊಡೆಯುವುದು, ಗಾಂಧಿ ಎಂದರೆ ಒಂದು ಸಾಗರ…
–ರವಿಚಂದ್ರ ಜಂಗಣ್ಣನವರ್