ಸಂಬಂಧ
ಕರುಳ ಬಳ್ಳಿಯ ಕೂಸು
ಬಿಟ್ಟು ಹೋಗುವ ಕಾಲ ಬಂದಿದೆ.
ನಾನು ನನ್ನದು ಎಂಬ ಮಮಕಾರ
ತಾಯಿದು
ಹರೆಯ ಉಕ್ಕಿ ರೆಕ್ಕೆ ಬಲಿತು
ಹಾರುವ ಕೌತುಕ ಕರುಳಿನ ಕಂದನದು
ಹಡೆದ ತಾಯಿ ಹಾಲುಣಿಸಿ
ತುತ್ತು ನೀಡಿ ಮೈದಡವಿದ್ದು
ನಗುತ ನಗುತ ಬೆಳೆದ ಮಗು
ದಿನ ಬಿಟ್ಟು ಹೋದಿತು ಎಂದು ಅರಿವಿಲ್ಲದ ತಾಯಿ
ಹೋಗ ಹೊರಟಿಯ ಕಂದನ ನಿಲ್ಲಿಸುವ ಶಕುತಿ ತಾಯಿಗಿಲ್ಲ
ತಾಯಿಯ ಆರ್ತನಾದ ಕೇಳಿಸುತಿಲ್ಲ
ಕಂಡ ಕನಸಿಗೆ ಬೀಜ ಹಾಕಿ
ಮೊಳಕೆ ಒಡೆಸಿ ಸಸಿಯಾಗಿ
ಗಿಡವಾಗಿ ಫಲಭರಿತ ಕಲ್ಪವೃಕ್ಷಕೆ
ವಾರಸುದಾರರು ಬಂದಿದ್ದಾರೆ.
ಬೀಜ ನೆಟ್ಟಾಗ ಪಾತಿ ಮಾಡಲಿಲ್ಲ
ನೀರುಣಿಸಲಿಲ್ಲ ಬೇಲಿ ಹಾಕಲಿಲ್ಲ
ಕಾವಲು ಕಾಯಲು ಯಾರು ಇರಲಿಲ್ಲ
ಸಸಿ ಇದ್ದದ್ದು ಮರವಾಗತಲಿ
ನಾನೇ ಅದರ ವಾರಸುದಾರರು ಎಂದರು ಹಲವರು
ಇಲ್ಲ ಇಲ್ಲ ಇದರ ವಾರಸುದಾರರು ನೀವಲ್ಲ ಅಂದರ ಕೂಹಕಿಗಳು
ಹಸಿದ ಸಿಂಹಗಳು ಮುಖವಾಡ ಧರಸಿವೆ
ಗಿಡವ ಕಾಯಲು ಹಸುವ ತಂದಿವೆ ಹಸುವಿಗೇನು ಗೊತ್ತು
ಸಿಂಹಗಳು ತನ್ನ ಸುತ್ತುವರಿದಿವೆ ಎಂದು
ಬಸಿರ ರಕ್ತ ಹರಿದು ಕಂದನ ಕಿರುಚುವ ನಿನಾದದಲಿ ನೋವು ಮರೆತು ನಕ್ಕಿದ್ದು
ಕರುಳಿನ ಕಂದ ಕಳಚುವ ಸಂಕಟ ಎದುರಾಗಿದೆ.
–ಸೌವೀ