ತತ್ವ ಪದ

ಮಯಾ ಮೋಹವ ಗೆದ್ದು

ಬಸವಾದಿ ಶರಣರ ನೆನೆಯೋಣ ಮನವೆ
ಬಸವ ಧರ್ಮದ ಪರಿಯ ಅರಿಯೋಣ.
ಲಿಂಗ ಪೂಜೆಯಾ ಬಿಡದೆ ಮಾಡೋಣ
ಅಂಗ ಗುಣ ಅಳಿಸಿ ಲಿಂಗಾಂಗಿಯಾಗೋಣ||

ಅರುಹು ನೀಡಿದ ಗುರುವಿನ ಕರುಣದಿ
ಪಾದವ ನೆರೆ ನಂಬಿ ಭಜಿಸೋಣ
ದಯೆಯುಳ್ಳ ಶರಣರ ದಾರಿಯೊಳು
ನಡೆಯುತ ಸತ್ಯ ಮಾರ್ಗವ ಹಿಡಿಯೋಣ||

ಬಸವಣ್ಣ ಭಕ್ತಿಗೆ ಅಲ್ಲಮ ಮುಕ್ತಿಗೆ
ಚೆನ್ನಬಸವಣ್ಣ ಜ್ಞಾನಕ್ಕೆ ನೋಡ
ಅಕ್ಕಮ್ಮ ಅರಿವಿಗೆ ಲಕ್ಕಮ್ಮ ನ್ಯಾಯಕ್ಕೆ
ಎಲ್ಲ ಶರಣರು ಸಮ ನೋಡಾ ||

ಮಯಾ ಮೋಹವ ಗೆದ್ದು
ಭವ ಸಾಗರದಿ ಮೇಲೆದ್ದು
ಕಾಯಕದಿ ದಾಸೋಹ ಗೈದವರ
ಭಕ್ತಿಯಿಂದ ಭಜಿಸೊಣ ಮನವೆ ||

ಮೂಢ ನಂಬಿಕೆ ತೊರೆದು
ಭಕ್ತಿ ಮಾರ್ಗವ ನಡೆದು
ವೈಚಾರಿಕ ಬದುಕ ನಡೆಸೋಣ
ಮುಕ್ತಿ ಪಥವ ಸೇರೋಣ ಮನವೆ
ವಿಜಯ ಮಹಾಂತನ ಕೂಡೋಣ ||


ಸವಿತಾ ಎಮ್ ಮಾಟೂರು, ಇಲಕಲ್ಲ

Don`t copy text!