ದಸರಾ

*ದಸರಾ*

ನಮ್ಮ ದಸರಾ
ಮೈಸೂರು ಸಿಂಗಾರ
ಊರ ಸಡಗರ
ವಿದೇಶಿಯರ ಆಗರ
ಸರಕಾರದ ಆತುರ
ನಾಡದೇವಿಗೆ
ಮಂತ್ರಿಯ ನಮನ
ಜಂಬೂ ಸವಾರಿ
ಚಿನ್ನದ ಅಂಬಾರಿ
ಸಂಗೀತ ಕಚೇರಿ
ಸಾಂಸ್ಕೃತಿಕ ಹಬ್ಬ
ಕಲಾವಿದರ ದಂಡು
ನಗರ ತುಂಬಾ
ಬೆಳಕು ಶಬ್ದ
ಕಿರುಚುವ ಮೈಕಾಸುರ
ಮೋಜಿನ ಜಾತ್ರೆ
ಕುಣಿತ ಕಂಸಾಳೆ
ವೀರಗಾಸೆ
ಬನ್ನಿ ಮಂಟಪಕೆ ಯಾತ್ರೆ
ಪಂಜಿನ ಕವಾಯತು
ಮುಗಿಯಿತು
ರಂಗು ರಂಗಿನ
ಮೈಸೂರು ದಸರಾ
ಮರುದಿನ
ಗಬ್ಬೆದ್ದ ಕಸ ಕಚರಾ
ಹರುಕು ಬಟ್ಟೆ
ಚಿಂದಿ ಎತ್ತುವ
ಎಳೆಯ ಬದುಕು
ಬದಲಾಗಬೇಕಾದ
ಬಾಳು
ಕಣ್ಣು ತುಂಬಿದ
ಕನಸು
ಹುಡುಕುತ್ತಿರುವ
ಮನಸು
ಕೆಂಪು ಸೂರ್ಯನ
ನನಸು
ದಸರೆಯಲ್ಲಿ ಕಾಣಬೇಕು
ಬೆಳಕು

*ಡಾ ರೇಖಾ ಜಾಧವ ಮೈಸೂರು*

Don`t copy text!