ಮಾರು ವೇಷದಿ ಬಸವ
ನಿತ್ಯ ವಚನ ಚಿಂತನೆ
ಅನುಭಾವ ಗೋಷ್ಠಿ
ಕಾಯಕ ದಾಸೋಹ
ಕಲ್ಯಾಣವೊಂದು ಪ್ರಣತಿ
ಬಸವಣ್ಣನೇ ಉಸ್ತುವಾರಿ
ಬಂದವರಿಗೆ ಪ್ರಸಾದ
ಆರೈಕೆ ಕುಶಲೋಪರಿ .
ಖಜಾನೆ ವಿತ್ತ ಮಂತ್ರಿ
ಪ್ರಧಾನಿ ದಂಡನಾಯಕ
ಪರುಷ ಕಟ್ಟೆ ಜನರ ಜಂಗುಳಿ
ಕುಂದು ಕೊರತೆ ವಿಚಾರಣೆ
ರಾತ್ರಿಯಾದರೆ ಹೊರಟ
ಬಸವಣ್ಣ ಮಾರುವೇಷದಲ್ಲಿ
ಕುದುರೆನೇರಿ ಓಣಿ ಕೇರಿಗಳಲ್ಲಿ
ಹೊದಿಸಿದ ಕಂಬಳಿ
ನಡುಗುತ ಬಿದ್ದವರಿಗೆ .
ಕಾವಲುಗಾರ ಸೇನೆ
ದಂಡಿನ ಮೇಲೆ ಕಣ್ಣು
ಅಂದೊಮ್ಮೆ ಕಳ್ಳನೊಬ್ಬ
ಭಕ್ತನ ತಲೆ ಒಡೆದು
ಕಸಿದುಕೊಂಡ ಹೊನ್ನ ವಸ್ತ್ರ
ಕಳವಳ ಮಹಾ ಮನುಜನಿಗೆ
ಅವನ ಅಪ್ಪಿ ಎತ್ತಿ ಹಿಡಿದು
ಉಪಚರಿಸಿದನು ಕರುಣಿ ಬಸವ
ಎಚ್ಚತ್ತಭಕ್ತ ಸಂತಸದ ಕಣ್ಣೀರು
ತಡ ರಾತ್ರಿಯಲಿ ತಲೆ ಸವರಿ
ಗಾಯಕ್ಕೆ ಮದ್ದು ಕೊಟ್ಟ
ನೀನು ಬಸವನಿರಬಹುದಲ್ಲವೇ ?
ಮತ್ತಾರು ಅಲ್ಲ .
ಮಾರುವೇಷದ ಬಸವ
ನಸು ನಕ್ಕು ನಡೆದ
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ