“ಒತ್ತೆಯ ಹಿಡಿದು ಮುತ್ತೊತ್ತೆಯ ಹಿಡಿಯೆಹಿ
ಡಿದೆಡೆ ಬತ್ತಲೆ ನಿಲಿಸಿ ಕೊಲ್ಲುವರಯ್ಯಾ
ವ್ರತಹೀನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈಕಿವಿ ಮೂಗ
ಕೊಯ್ವರಯ್ಯಾ ಒಲ್ಲೆನೊಲ್ಲೆ ಬಲ್ಲೆನಾಗಿ
ನಿಮ್ಮಾಣೆ ನಿರ್ಲಜ್ಜೇಶ್ವರಾ”
– ಸೂಳೆಸಂಕವ್ವ
ಸೂಳೆಸಂಕವ್ವ ವಚನಾಂಕಿತಸಮಾಜದ ಬಹಿಷ್ಕೃತ ಸಮೂಹದ ಶ್ರೇಷ್ಠ ಶರಣೆ. ಈಕೆಯ ಹೆಸರಿನಿಂದಿರುವ ವಿಶೇಷಣದಿಂದ ಇವಳು ವೇಶ್ಯಾವೃತ್ತಿ ಮಾಡುತ್ತಿದ್ದು, ಬಸವಣ್ಣನವರ ವಚನ ಚಳುವಳಿಯ ಪ್ರಭಾವದಿಂದ ತನ್ನ ವೇಶ್ಯಾವೃತ್ತಿಯನ್ನು ತೊರೆದು ಶರಣರ ಸಂಪರ್ಕಕ್ಕೆ ಬಂದು, ವಚನ ರಚನೆಗೆ ತೊಡಗಿಸಿಕೊಂಡವಳು.
ಸೂಳೆ ಸಂಕವ್ವ ಕಾಲಘಟ್ಟ ೧೧೬೦
ಅಂಕಿತನಾಮ ನಿರ್ಲಜ್ಜೇಶ್ವರಾ
ಕಾಯಕ ನಿಷ್ಠೆಸಂಪಾದಿಸಿ
ಮನುಷ್ಯ ಸಮಾಜದಲ್ಲಿ ಕೆಲಸ ಮಾಡದೆ ಜೀವಿಸುವುದು ಮಾತ್ರ ಅವಮಾನಕರ. ವೇಶ್ಯಾವೃತ್ತಿಯನ್ನು ಕೀಳಾಗಿ ಪರಿಗಣಿಸಬಾರದೆಂದು ಬಸವಣ್ಣನವರೆ ಒಂದೆಡೆ ಹೇಳಿದ್ದಾರೆ. ಪ್ರತಿ ವೃತ್ತಿಗೂ ಅದರದೇ ಆದ ಗೌರವ, ಮಾನ್ಯತೆ, ಕುರುಹುಗಳಿವೆಯೆಂದು ತನ್ನ ವೃತ್ತಿಯ ರೀತಿ-ನೀತಿಗಳನ್ನು ಯಾವ ಮುಚ್ಚು ಮರೆಯಿಲ್ಲದೆ ನಿರ್ಭಿಡೆಯಿಂದ ಹೇಳಿಕೊಂಡಿದ್ದಾಳೆ. ಅವಳ ಈ ಬಗೆಯ ದಿಟ್ಟತನದಿಂದ ಬಸವಣ್ಣನವರ ಮೆಚ್ಚುಗೆಗೂ ಪಾತ್ರಳಾಗಿದ್ದಾಳೆ. ಈಕೆಯ ಒಂದುವಚನ ಮಾತ್ರ ದೊರೆತಿದೆ. ಅದನ್ನು ಆಧ್ಯಾತ್ಮೀಕವಾಗಿ ನೋಡಿದರೆ ಅದರಲ್ಲಿ ಯಾವ ಬಗೆಯ ಅಸಹ್ಯವೂ ಬಹುಶಃ ಕಾಣಲಾರದು. ಇವಳ ವಚನಗಳಲ್ಲಿ ಆತ್ಮವಿಶ್ವಾಸ, ದಿಟ್ಟ ನಿಲುವು, ಅಚಲ ಎದೆಗಾರಿಕೆ, ಕಾಯಕ ನಿಷ್ಠೆಯಿದೆ. ಈಕೆಯ ವಚನಗಳ ಅಂಕಿತ “ನಿರ್ಲಜ್ಜೇಶ್ವರಾ