ಹಸು-ಕರು

ಹಸು-ಕರು

ಎಲ್ಲಿಯೋ ಹುಟ್ಟಿದ ನಿನ್ನನ್ನು
ಕೊಂಡು ತಂದೆ ನನ್ನ ಮನೆಗೆ..
ಕಪ್ಪು ಮಿಶ್ರಿತ ಕಂದು ಬಣ್ಣದ
ಚೆಲುವೆ ಇಷ್ಟವಾದೆ ನನಗೆ…

ಒಂದಿಷ್ಟು ಹುಲ್ಲು, ಒಂದಷ್ಟು ಬೂಸಾ
ಸಾಕೆಂದು ನೋಟ ಬೀರಿದ ಬಗೆಗೇ..
ವರ್ಷ ಒಪ್ಪತ್ತು ಕಳೆದು
ನವಮಾಸ ತುಂಬಿದಾ ಘಳಿಗೆ..

ಚೊಚ್ಚಲ ಬಸುರಿ ನೀನು
ಆತಂಕವಾಗುತ್ತಿತ್ತು ನನಗೆ..
ಅಂದು ಅವಳು ಎಂದಿನಂತಿಲ್ಲ
ಚಡಪಡಿಕೆ ಬೇನೆ ಅವಳಿಗೆ…

ಮುಸ್ಸಂಜೆ ಹೊತ್ತಲ್ಲಿ ಕರುವಿಗೆ
ಜನ್ಮ ಕೊಡುವ ಬೇನೆಗೆ…
ಒಡಲ ಕುಡಿ ಹೊರ ಬಂದಾಗ
ಅಂಬಾ ಎಂದು ಕರೆದ ಕ್ಷಣಕ್ಕೇ..

ಅಂತೂ ಇಂತೂ ಸುಖದ ಪ್ರಸವ ಪ್ರೀತಿಯಿಂದ ನೀ ನೆಕ್ಕುತ್ತಿದ್ದೆ ಕರುವ
ನಿಟ್ಟುಸಿರು ಬಿಟ್ಟು,ದಿಗಂತದತ್ತ ನೋಡಿದೆ
ಸೂರ್ಯ ಮುಳುಗಿ ಶಶಿ ನಗುತ್ತಿದ್ದ…

ಗೀತಾ ಜಿ.ಎಸ್. 
ಹರಮಘಟ್ಟ ಶಿವಮೊಗ್ಗ

Don`t copy text!