ರಸ್ತೆ ಚಳುವಳಿ ಪ್ರತಿಭಟನೆ
ದೇಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಮಸ್ಕಿ ತಾಲೂಕು ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಶನಿವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಹತ್ತಿರ ರಸ್ತಾ ರೋಕ್ ನಡೆಸಿದರು. ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ, ಕಾರ್ಯದರ್ಶೀ ಮಾರುತಿ ಜಿನ್ನಾಪೂರು, ಅಮರೇಶ ಪಾಮನಕಲ್ಲುರು, ಹುಲಗಪ್ಪ ಚಿಲ್ಕರಾಗಿ, ಬೀರಪ್ಪ, ಹನುಮಂತ ಮಸ್ಕಿ ಭಾಗವಹಿಸಿದ್ದರು.