(ಸಾಂದರ್ಭಿಕ ಚಿತ್ರ ಬಳಸಿಕೊಳ್ಳಲಾಗಿದೆ)
ಎಚ್ಚರ ಬಲು ಎಚ್ಚರ
ಬಸವ ಸೇನೆ ಬರುತಲಿಹುದು
ಕ್ರಾಂತಿ ಕಹಳೆ ಊದುತ.
ಶತಮಾನದಿ ಕೊಳ್ಳೆ ಹೊಡೆದಿರಿ
ಅಪ್ಪ ಬಸವನ ಹೆಸರಲಿ .
ಧರ್ಮ ತತ್ವ ಹಾಳುಗೆಡುವಿ
ಲಿಂಗ ನೀತಿ ಅಳಿಸಿ ನಿಂತಿರಿ.
ಮೂಢ ಶೈವರೇ ಎಚ್ಚರ .
ವಚನ ಮರೆಸಿ ವೇದ ಪಠಿಸಿ
ಶರಣ ಪ್ರಜ್ಞೆ ಮಣ್ಣು ಮಾಡಿ
ಸುಲಿಗೆ ಮಾಡಿದ ಕಳ್ಳರೆ
ಲಿಂಗ ಜಂಗಮಕೆ ವಿಷ ಉಣಿಸಿ
ಶರಣ ನುಡಿಯ ಕತ್ತು ಹಿಚುಕಿ
ಹೆಗಲ ಮೇಲೆ ಮೆರೆವ ದುರುಳರೆ
ಬಸವ ದ್ರೋಹಿಗಳೇ ಎಚ್ಚರ
ಎಚ್ಚರ ಬಲು ಎಚ್ಚರ .
ಸಾಕು ಮಾಡಿ ಶೋಷಣೆ
ಅರ್ಥವಿಲ್ಲದ ವೈಭವ
ಯೋಧರೆದ್ದು ಗುದ್ದುವರು.
ಇದೋ ದಿಟ್ಟ ಗಣಾಚಾರ ನಡೆ .
ಕಲ್ಲು ಕಂಚಲಿ ದೇವ ಮಾಡಿ
ಮುಗ್ಧ ಭಕ್ತರ ಮೂಢ ಮಾಡಿ
ದರ್ಪ ದಳ್ಳುರಿ ವೇಷಧಾರಿಗಳೆ
ಬಸವ ಚಾಟಿ ಬೀಸುವ .
ಬನ್ನಿ ಬನ್ನಿ ಬಸವ ಭಕ್ತರೇ
ಒಂದಾಗ ಬನ್ನಿ
ಶರಣ ಸಂಸ್ಕೃತಿ ಸಾಯುತಿದೆ .
ಮಠ ಆಶ್ರಮ ಬಿಟ್ಟು ಬನ್ನಿ .
ಹೊತ್ತು ನಡೆದಿರಿ ಮೈಲಿ ದೂರ
ವ್ಯರ್ಥವಾಯಿತು ಬದುಕು ಸಾರ .
ತಪ್ಪು ದಾರಿ ತೋರುವವಗೆ
ಕೋಲ ರುಚಿಯ ತೋರ ಬನ್ನಿ .
–ಡಾ.ಶಶಿಕಾಂತ.ಪಟ್ಟಣ -ಪುಣೆ