ಬಸವಣ್ಣ: ನಿರ್ವಹಣಾ ವಿಜ್ಞಾನದ ಗುರು ವಚನ ಸಾಹಿತ್ಯದಲ್ಲಿ ನಿರ್ವಹಣಾ ವಿಜ್ಞಾನ – ಒಂದು ಅಧ್ಯಯನ
ಕರ್ತನಟ್ಟಿದಡೆ ಮರ್ತ್ಯದಲ್ಲಿ | ಮಹಾಮನೆಯ ಕಟ್ಟಿದೆ || ಸತ್ಯಶರಣರಿಗೆ ತೊತ್ತು ಭೃತ್ಯನಾಗಿ | ಸವೆದು ಬದುಕಿದೆನು || ಕರ್ತನ ಬೆಸೆದು | ಮತ್ತೆ ಬರಲೆಂದಟ್ಟಿದಡೆ || ಕೂಡಲಸಂಗಮದೇವರ ನಿರೂಪಕ್ಕೆ | ಮಹಾಪ್ರಸಾದವೆಂದೆನು || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-103 / ವಚನ ಸಂಖ್ಯೆ-1133)
ದ್ವೇಷ ಅಸೂಯೆಗಳನ್ನು ಮನಸ್ಸಿನಲ್ಲಿ ಹೊತ್ತು ತಿರುಗುವುದರಿಂದ ಸಾಮಾಜಿಕ ನ್ಯಾಯ ಕ್ರಾಂತಿಗಳನ್ನು ಸಾಧಿಸಲು ಆಗುವುದಿಲ್ಲ ಎಂಬುದನ್ನು ಬಸವಣ್ಣವರು ಕಂಡುಕೊಂಡಿದ್ದರು. ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಬಸವಣ್ಣನವರು ಮಾಡಿದ ಅಗಾಧ ಕೆಲಸದಲ್ಲಿ ಒಂದನೇಯದ್ದು ಎಲ್ಲರನ್ನೂ ಸರಿಸಮನಾಗಿ ಕಂಡಿದ್ದು, ಎರಡನೇಯದ್ದು ಇಡೀ ಸಮಾಜವನ್ನೇ ತಮ್ಮ ಮನೆಯಾಗಿಸಿಕೊಂಡಿದ್ದು. ಎಲ್ಲರೂ ಸೇರಿ ಬಸವಣ್ಣನವರನ್ನು ಸಾಕಿ ಸಲುಹಿದರು ಎನ್ನುವುದು. ಎಲ್ಲರನ್ನೂ ತಮ್ಮೊಡನೆ ಸೇರಿಸಿಕೊಂಡು ಮುಂದುವರೆಯದಿದ್ದರೆ ಕಲ್ಯಾಣ ಕ್ರಾಂತಿ ಸಾಧ್ಯವಾಗುತ್ತಿರಲಿಲ್ಲ. ಇದು ನಿರ್ವಹಣಾ ವಿಜ್ಞಾನ (Management Science) ದ ಮೂಲಮಂತ್ರ. ಎಲ್ಲರನ್ನೂ ಜೊತೆಗೆ ಸೇರಿಸಿಕೊಂಡು ಹೋಗುವದೇ ಪ್ರಪ್ರಥಮ ಸೂತ್ರ. “Inclusiveness” is the Philosophy of Management. ಹಾಗಾದರೆ ನಿರ್ವಹಣಾ ವಿಜ್ಞಾನ (Management Science) ಅಂದರೇನು? ಎನ್ನುವ ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ. ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ ವಿಶ್ವವಿದ್ಯಾಲಯದಲ್ಲಿ “Global Management & Behavioural Science” ನ ಪ್ರಾಧ್ಯಾಪಕರಾಗಿದ್ದವರು ಲೇಖಕ “ಹೈನ್ಸ್ ವೀರಿಚ್” (Heinz Weihrich). ಇವರು 60 ಕ್ಕೂ ಹೆಚ್ಚು ಪುಸ್ತಕಗಳನ್ನೂ ಮತ್ತು 100 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಅವರ “Management: A Global Perspective” ಮತ್ತು “Essentials of Management” ಬಹಳ ಚರ್ಚೆಗೊಳಗಾದ ಪುಸ್ತಕಗಳು.
ಹಾಗೆಯೇ ಮತ್ತೊಬ್ಬ ಶ್ರೇಷ್ಟ ಲೇಖಕ ಮತ್ತು ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ “Business Management” ನ ಪ್ರಾಧ್ಯಾಪಕರಾಗಿದ್ದವರು ಲೇಖಕ “ಹೆರಾಲ್ಡ್ ಕೂಂಟ್ಜ್” (Herold Koontz). ಇವರು ಸಿರಿಲ್ ಓಡೊನೆಲ್ (Cyril Odonil) ಅವರ ಜೊತೆಗೂಡಿ ಬರೆದ ಪುಸ್ತಕ “Principles of Management” ಇಂದಿಗೂ Bible of Management ಎಂದೇ ಪ್ರಖ್ಯಾತವಾಗಿದೆ.
According to Harold Koontz & Heinz Weihrich, “Management is an art of getting things done through and with the people in formally organized groups. It is an art of creating an environment in which people can perform and individuals and can co-operate towards attainment of group goals”. Management is the process of reaching organizational goals by working with and through people and other organizational resources.
Management is the process of reaching organizational goals or defined objectives by working with and through people and other organizational resources.
Management consists of the interlocking functions of creating corporate policy and organizing, planning, controlling and directing an organization’s resources in order to achieve the objectives of that policy.
Management has the following 3 characteristics: • It is a process or series of continuous and related activities. • It involves and concentrates on reaching organizational goals. • These goals are achieved through people and other organizational resources.
ಯಾವುದೇ ಸಂಸ್ಥೆಯ ಅಥವಾ ಸಂಘಟನೆಯ ಅಥವಾ ಸಮೂಹದ ನೌಕರರಿಂದ ಮತ್ತು ಅಲ್ಲಿರುವ ಮೂಲಭೂತ ಸೌಕರ್ಯ ಮತ್ತು ಸೇವೆಗಳನ್ನು ಬಳಸಿಕೊಂಡು ನಿರ್ಧಾರಿತ ಗುರಿಗಳು ಅಥವಾ ನಿರ್ದಿಷ್ಠ ಉದ್ದೇಶಗಳನ್ನು ಸಾಕಾರಗೊಳಿಸಲು ನಡೆಸುವ ಪ್ರಕ್ರಿಯೆ. “ನಿರ್ವಹಣಾ ವಿಜ್ಞಾನ (Management Science)” ಸಂಸ್ಥೆಯ ನಿರ್ವಹಣೆಯ ನೀತಿಗಳು, ಯೋಜನೆಗಳು, ನಿಯಂತ್ರಣಗಳು ಮತ್ತು ನಿರ್ದಿಷ್ಟ ದಿಸೆಯಲ್ಲಿ ಕಾರ್ಯ ಪ್ರವೃತ್ತವಾಗುವ ಲಕ್ಷ್ಯಗಳು ಒಂದಕ್ಕೊಂದು ಹೆಣೆದುಕೊಂಡಿವೆ.
“ನಿರ್ವಹಣಾ ವಿಜ್ಞಾನ (Management Science)” ಕ್ಕೆ 3 (ಮೂರು) ಪ್ರಮುಖ ಲಕ್ಷಣಗಳಿವೆ. • ನಿರ್ಧಾರಿತ ಗುರಿಗಳನ್ನು ತಲುಪಲು ನಿರಂತರವಾಗಿ ನಡೆಯುವ ಪ್ರಕ್ರಿಯೆಗಳು. • ಸಂಸ್ಥೆಯ ಅಥವಾ ಸಂಘಟನೆಯ ಅಥವಾ ಸಮೂಹದ ಎಲ್ಲ ಲಕ್ಷ್ಯಗಳನ್ನು ಕೇಂದ್ರೀಕರಿಸಿ ಮತ್ತು ಅಳವಡಿಸಿಕೊಂಡು ಗುರಿಯತ್ತ ಸಾಗುವುದು. • ಸಂಸ್ಥೆಯ ಅಥವಾ ಸಂಘಟನೆಯ ಅಥವಾ ಸಮೂಹದ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲರನ್ನೂ ಒಗ್ಗೂಡಿಸಿಕೊಂಡು ಗುರಿಯನ್ನು ತಲುಪುವುದು.
ಇಂಥ ಒಂದು ಪ್ರಬುದ್ಧ ಚಿಂತನೆಯ ವ್ಯಾಖ್ಯಾನವನ್ನು ಬಸವಾದಿ ಶರಣರು 12 ನೇ ಶತಮಾನದಲ್ಲಿಯೇ ಮಂಡಿಸಿದ್ದರೆಂಬುದು ಶರಣೆ ಅಕ್ಕಮ್ಮನವರ ಈ ವಚನದಿಂದ ಕಂಡು ಬರುತ್ತದೆ. ಏಳುನೂರೆಪ್ಪತ್ತು | ಅಮರಗಣಂಗಳಿಗೆಲ್ಲಕ್ಕೂ || ತಮ್ಮ ತಮ್ಮ | ಭಾವದ ಶೀಲ || ಗಂಗೆವಾಳುಕ | ಸಮಾರುದ್ರರೆಲ್ಲಕ್ಕೂ || ತಮ್ಮ ತಮ್ಮ ಮನಕ್ಕೆ | ಸಂದ ಸಂದ ನೇಮ || ಮರ್ತ್ಯಕ್ಕೆ ಬಂದ | ಪ್ರಮಥರೆಲ್ಲರೂ || ತಾವು ಬಂದುದನರಿದು ಮುಂದಿನ | ಪಯಣಕ್ಕೆ ಎಂದೆಂಬುದ ಕಂಡು || ಬಸವಣ್ಣನ ಮಣಿಹ ಎಂದಿಂಗೆ ಸೆಲೆ ಸಂದು | ನಿಂದಿಹ ವೇಳೆಯನರಿವನ್ನಕ್ಕ || ತಾವು ಕೊಂಡ | ವೃತದಲ್ಲಿ ಭಯ ಭಂಗವಿಲ್ಲದೆ || ನಿಂದಿರಬೇಕು ಆಚಾರವೇ ಪ್ರಾಣವಾದ | ರಾಮೇಶ್ವರಲಿಂಗದೊಳಗಹನ್ನಕ್ಕ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-835 / ವಚನ ಸಂಖ್ಯೆ-459)
ನಿರ್ವಹಣಾ ವಿಜ್ಞಾನ ಅಷ್ಟೇ ಅಲ್ಲದೇ ನಾವು ಈ ಕರ್ಮ ಲೋಕಕ್ಕೆ ಬಂದ ಕಾರಣವನ್ನೂ ಸಹ ಹೇಳುವ ಅನುಪಮ ಅದ್ಭುತ ವಚನವಿದು. ಶರಣೆ ಅಕ್ಕಮ್ಮನವರ ಈ ವಚನದಲ್ಲಿ “ಗಂಗೆವಾಳುಕ” ಎನ್ನುವ ಬೆಡಗಿನ ಶಬ್ದ ಪ್ರಯೋಗವಿದೆ. ಭಾರತದ ಇತಿಹಾಸದಲ್ಲಿ ಗಂಗಾನದಿಗೆ ಅತ್ಯಂತ ಪವಿತ್ರ ಸ್ಥಾನವಿದೆ. ಇದರ ತೀರದುದ್ದಕ್ಕೂ ಪರಂಪರೆ, ಸಂಸ್ಕೃತಿ, ಆರ್ಥಿಕ ಮತ್ತು ಸಾಮಾಜಿಕವಾಗಿ ಜನಜೀವನ ಮತ್ತು ನಾಗರೀಕತೆ ಬೆಸೆದುಕೊಂಡಿದೆ. ಗಂಗಾನದಿಯ ಇಕ್ಕೆಲಕ್ಕೂ ಪಸರಿಸಿರುವ ಮಣ್ಣು ಅತ್ಯಂತ ಸಾಮರ್ಥ್ಯವುಳ್ಳ, ಶಕ್ತಿಯುತ ಮತ್ತು ಫಲವತ್ತತೆಯಿಂದ ಕೂಡಿದ ಮಣ್ಣಾಗಿದೆ. ಈ ತತ್ವವನ್ನು ನಮ್ಮ ಸಮಷ್ಠಿಗೆ ಹೋಲಿಸಿದ್ದಾರೆ. ಅಂದರೆ ಮರ್ತ್ಯಕ್ಕೆ ಬಂದ ಜನರೆಲ್ಲರೂ ಹುಟ್ಟಿನಿಂದಲೇ ಸಾಮರ್ಥ್ಯವುಳ್ಳವರೂ, ಶಕ್ತಿವಂತರೂ ಮತ್ತು ಜ್ಞಾನವುಳ್ಳ ಜನರು ಎಂದು ಬಿಂಬಿಸಲಾಗಿದೆ. ಅಂದರೆ ಒಂದೇ ಕಡೆ ಸೇರಿದ ಜನ ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆಯನ್ನು ನೀಡಿದಾಗ ಒಂದು ಸಮರ್ಥ ಮತ್ತು ಬಲಶಾಲಿಯಾದ ಸಮಾಜವನ್ನು ಅಥವಾ ಸಂಘ ಸಮೂಹವನ್ನು ನಿರ್ವಹಿಸಬಹುದೆಂಬ ತತ್ವವನ್ನು ನಿರೂಪಿಸಿದ್ದಾರೆ.
ಬಸವಣ್ಣನವರು ಸಹಸ್ರಾರು ಶರಣರು ಮತ್ತು ಅವರನ್ನು ಪ್ರತಿನಿಧಿಸುವ 770 ಅಮರ ಗಣಂಗಳ ಮೂಲಕ “ಅನುಭವ ಮಂಟಪ” ವನ್ನು ಕಟ್ಟಿ ಬೆಳೆಸಿದ್ದು ಇಂತಹ ಸಮರ್ಥ ಶರಣರ ಕೊಡುಗೆಯ ಮೂಲಕ. ಒಂದು ಅದ್ಭುತ ವ್ಯಾಖ್ಯಾನಕ್ಕೆ ಎಡೆಮಾಡಿ ಕೊಡುವ ಈ ವಚನ ನಿರ್ವಹಣಾ ವಿಜ್ಞಾನ (Management Science) ಕ್ಕೆ ಮುನ್ನುಡಿ ಬರೆದಂತಿದೆ.
ಆಧುನಿಕ ಮತ್ತು ಜಾಗತಿಕ ನಿರ್ವಹಣಾ ವಿಜ್ಞಾನವು ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಂಕೀರ್ಣವಾಗುತ್ತಾ ನಡೆದಿದೆ. ಬಹುಮುಖ ಕೇಂದ್ರೀಕೃತ ಕಾರ್ಯ (Multidisciplinary functions) ಗಳನ್ನೊಳಗೊಂಡು ವಿವಿಧ ಇಲಾಖೆಗಳ ಮಧ್ಯೆ ಪರಸ್ಪರ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುವ ಸಂಕೀರ್ಣ ವ್ಯವಸ್ಥೆ (Complicated System) ಯನ್ನು ಹುಟ್ಟು ಹಾಕಿದೆ. ಪ್ರಭಾವಶಾಲಿ ಮತ್ತು ಆಧುನಿಕ ನಿರ್ವಹಣಾ ವಿಜ್ಞಾನ (Modern Scientific Management System) ಇಂದಿನ ಅವಶ್ಯಕತೆ. ಈ ನಿಟ್ಟನಲ್ಲಿ ಬಸವಣ್ಣನವರ ಸಾಮಾಜಿಕ ಸುಧಾರಣಾ ನೀತಿಗಳಾದ ಜ್ಞಾನ ಸಾಕ್ಷಾತ್ಕಾರ, ಕಾಯಕ ಸಂಸ್ಕೃತಿ, ಪ್ರಜಾತಂತ್ರ ವ್ಯವಸ್ಥೆ, ಮಾನವ ಹಕ್ಕುಗಳ ರಕ್ಷಣೆ, ಲಿಂಗ ಸಮಾನತೆ ಮತ್ತು ಸಮ ಸಮಾಜವನ್ನು ನಿರ್ಮಿಸಿದ ರೀತಿ ನೀತಿಗಳು ಅನುಕರಣೀಯ ಮತ್ತು ಇಂದಿಗೂ ಅನುಷ್ಠಾನಗೊಳಿಸಿಕೊಳ್ಳುಬೇಕಾದಂಥ ತತ್ವಗಳು (Principles).
ಇಂಥ ನಿರ್ವಹಣಾ ವಿಜ್ಞಾನಕ್ಕೆ ಆಧುನಿಕ ಸ್ಪರ್ಷವನ್ನು ನೀಡಿದವರು ಫ್ರಾನ್ಸ್ ದೇಶದವರಾದ ಹೆನ್ರಿ ಫಾಯೋಲ್. ವೃತ್ತಿಯಿಂದ ಗಣಿ ಅಭಿಯಂತರಾಗಿದ್ದ (Mining Engineer) ಹೆನ್ರಿ ಫಾಯೋಲ್ ವ್ಯಾಪಾರ ನಿರ್ವಹಣೆ (Business Management) ಮತ್ತು ನಿರ್ವಹಣಾ ವಿಜ್ಞಾನವನ್ನು (Management Science) ಆಳವಾಗಿ ಅಧ್ಯಯನ ಮಾಡಿದವರು.
ಆಧುನಿಕ ನಿರ್ವಹಣಾ ವಿಜ್ಞಾನ (Modern Scientific Management System) ಗೆ ಉತ್ಕೃಷ್ಟ ಕೊಡುಗೆ ನೀಡಿದ ಹೆನ್ರಿ ಫಾಯೋಲ್ “ಫಾಯೋಲಿಸಂ” Fayolism ಎನ್ನುವ ಸಿದ್ಧಾಂತವನ್ನು ನೀಡಿದ್ದಾರೆ. ಇದರ ಮೂಲಕ “ಆಧುನಿಕ ವ್ಯಾಪಾರ ನಿರ್ವಹಣೆ ಸಿದ್ಧಾಂತದ ಜನಕ” (Father of Modern Business Management Theory) ಎಂದೇ ಪ್ರಖ್ಯಾತರಾದರು.
ಹೆನ್ರಿ ಫಾಯೋಲ್ ಅವರು ನಿರ್ವಹಣಾ ವಿಜ್ಞಾನ (Management Science) ದ ಎಲ್ಲ ಮಜಲುಗಳನ್ನು ಒಳಗೊಂಡಂತೆ 5 ಮೂಲಭೂತ ಕಾರ್ಯತಂತ್ರ (Primary Functions) ಗಳು ಮತ್ತು 14 ಮೂಲಭೂತ ನಿರ್ವಣಾ ವಿಜ್ಞಾನ ತತ್ವ (Principles of Management) ಗಳೆಂಬ ನೀತಿ ಸಂಹಿತೆಗಳನ್ನು ಮಂಡಿಸಿದವರು. Ø ಮೂಲಭೂತ ಕಾರ್ಯತಂತ್ರ (Primary Functions) ಗಳು : 1. ಯೋಜನೆ (Planning) 2. ಸಂಘಟನೆ (Organizing) 3. ನಿರ್ದೇಶನ (Directing) 4. ಸಂಯೋಜನೆ (Co-ordinating) 5. ನಿಯಂತ್ರಣ (Controlling)
Ø ನಿರ್ವಣಾ ವಿಜ್ಞಾನ ತತ್ವ (Principles of Management) ಗಳು : ನಿರ್ವಣಾ ವಿಜ್ಞಾನ ತತ್ವ (Principles of Management) ಗಳಿಗೆ ತಳಹದಿಯನ್ನು ಒದಗಿಸಿಕೊಟ್ಟಂಥ ಹೆನ್ರಿ ಫಾಯೋಲ್ “General and Industrial Management (1916) ಎನ್ನುವ ಪುಸ್ತಕದಲ್ಲಿ 14 ತತ್ವಗಳನ್ನು ಪ್ರಸ್ತಾಪಿಸಿದ್ದಾನೆ. 1. ಕಾರ್ಯಗಳ ವಿಂಗಡಣೆ (Division of Work) 2. ಅಧಿಕಾರ ಮತ್ತು ಜವಾಬ್ದಾರಿ (Authority and Responsibility) 3. ಶಿಸ್ತು (Discipline) 4. ಆಜ್ಞೆಯಲ್ಲಿ ಏಕತೆ (Unity of Command) 5. ನಿರ್ದೇಶನದಲ್ಲಿ ಏಕತೆ (Unity of Direction) 6. ಸಹೋದ್ಯೋಗಿಗಳ ಹಿತಾಸಕ್ತಿಗಳು (Subordination of Individual Interest) 7. ಗೌರವ ಸಂಭಾವನೆ (Remuneration) 8. ಕೇಂದ್ರೀಕರಣದ ಸ್ವರೂಪ (The Degree of Centralization) 9. ಪ್ರಮಾಣೀಕೃತ ಮತ್ತು ಸಶಕ್ತ ನಿರ್ದೇಶನಗಳು (Scalar Chain) 10. ವ್ಯವಸ್ಥಿತ ಆಜ್ಞೆಗಳು (Order) 11. ನ್ಯಾಯ ಸಂಹಿತೆ (Equity) 12. ಸಹೋದ್ಯೋಗಿಗಳ ಸ್ಥಿರ ಅಧಿಕಾರಾವಧಿ (Stability of Tenure of Personal) 13. ಮೊದಲ ಹೆಜ್ಜೆ ಅಥವಾ ಪ್ರಾರಂಭ (Initiative) 14. ನೈತಿಕ ಆದರ್ಶ ಅಥವಾ ಸ್ಥೈರ್ಯ (Esprit de Corps-Morale)
ಹೆನ್ರಿ ಫಾಯೋಲ್ ನಿರೂಪಿಸಿದ ಒಂದೊಂದೇ ಮೂಲಭೂತ ಕಾರ್ಯತಂತ್ರ (Primary Functions) ಗಳನ್ನು ನಾವು 12 ನೇ ಶತಮಾನದಲ್ಲಿಯೇ ಪ್ರಸ್ತಾಪಿಸಿದ್ದನ್ನು ನಾವು ವಚನಗಳ ಮೂಲಕ ತುಲನಾತ್ಮಕ ಚಿಂತನೆಯನ್ನು ಮಾಡೋಣ. 1. ಯೋಜನೆ (Planning) : Planning is defined broadly as “Thought process before the action begins”. Looking beyond future in advance, how it delivers dividends including all positive and negative impacts to achieve the goals and objectives of the organization. In the nutshell logical thinking and rational decision making process.
ಯಾವುದೇ ಸಂಸ್ಥೆಯ ಅಥವಾ ಸಮೂಹದ ನಿರ್ಧಾರಿತ ಗುರಿ ಮತ್ತು ಉದ್ದೇಶಗಳನ್ನು ಗಮ್ಯಸ್ಥಾನವನ್ನು ತಲುಪಿಸಲು ಮಾಡುವ ಒಂದು ಮಾನಸಿಕ ಮತ್ತು ತಾಂತ್ರಿಕ ಸಿದ್ಧತೆಯೆ ಯೋಜನೆ. ಗಮ್ಯಸ್ಥಾನವನ್ನು ತಲುಪಲಿಕ್ಕೆ ಮುಂದೆ ಬರಲಿರುವ ಒಳಿತು ಮತ್ತು ಕೆಡಕುಗಳನ್ನು ತಾರ್ಕಿಕವಾಗಿ ಹಾಗೂ ವೈಚಾರಿಕವಾಗಿ ಪರಿಶೀಲಿಸಿ ಮತ್ತು ಪರಾಮರ್ಶೆ ಮಾಡಿ ತಯಾರಿಸುವ ಯೋಜನಾ ಪ್ರಕ್ರಿಯೆ.
ಇದನ್ನೇ ಶರಣ ಅಂಬಿಗರ ಚೌಡಯ್ಯನವರು ತಮ್ಮ ಒಂದು ವಚನದಲ್ಲಿ ಹೇಳುವ ಮೂಲಕ ಯೋಜನೆ (Planning) ಯ ವಿಸ್ತಾರವನ್ನು ನಿರೂಪಿಸಿದ್ದಾರೆ. ಈ ಅದ್ಭುತ ವಚನದ ಮೂಲಕ Planning ಗೇ ಒಂದು Planning ಮಾಡತಾರೆ ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರು.
ಆನೆಂಬುದೇನು? | ಇದಿರಿಟ್ಟು ತೋರೂದಿದೇನು? || ಇದೆಲ್ಲಿಂದಲೊದಗಿತ್ತು? | ಇದರ ಲಯವು ತಾನೆಲ್ಲಿ || ಎಂದು ಅನುಮಾನಿಸಿ | ಶ್ರೀಗುರುಚರಣವಂ ನಂಬಿ || ಅಂತರ್ಮುಖದಲ್ಲಿ ವಿಚಾರಿಸಿ | ಅಲ್ಲೊಂದು ಮಾರ್ಗವ ಕಂಡು || ಆ ಮಾರ್ಗವ ಬಳಿವಿಡಿದು | ತಲೆ ಹೊಲಕ್ಕೆ ಹೋಗಿ || ಹಿಂದು ಮುಂದ ಮರೆದು | ಮಹಾಬೆಳಗಿನ ಬೆಳಗಿನಲ್ಲಿ ನಿಂದು || ಪರಮಾನಂದಸಾಗರದೊಳಗೆ | ಸಮರಸನಾದವಂಗೆ || ಇಹಪರವಿಲ್ಲೆಂದಾತನಂಬಿಗ | ಚೌಡಯ್ಯ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-949 / ವಚನ ಸಂಖ್ಯೆ-51)
ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ, ಅಲ್ಲಿಗೆ ಹೋಗುವುದಕ್ಕೆ ಏನು ಮಾಡಬೇಕು ಎಂದು ಪ್ರಶ್ನೆ ಮಾಡಿ ಉತ್ತರ ಕಂಡುಕೊಳ್ಳುವುದು ಯೋಜನೆಯ ಮೂಲ ತಳಹದಿ. ಇಷ್ಟೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ ಮೇಲೂ ಸಹ ಶ್ರೀಗುರು ಚರಣವನ್ನು ನಂಬಬೇಕು ಅಂತ ಹೇಳತಾರೆ ಅಂಬಿಗರ ಚೌಡಯ್ಯನವರು. ಶೀಗುರು ಚರಣ ಅಂದರೆ ಆಧ್ಯಾತ್ಮದಲ್ಲಿ ಪ್ರಸಾದ ತತ್ವ, ಅಂತಿಮ ಫಲವನ್ನು ಕಾಣುವ ತತ್ವ. ಅದನ್ನೇ ನಾವು ನಿರ್ವಹಣಾ ವಿಜ್ಞಾನದಲ್ಲಿ ಸಂಸ್ಥೆಯ ಗುರಿ ಅಥವಾ ಉದ್ದೇಶ ಅನ್ನಬಹದು. ಯಾವಾಗ ನಮ್ಮ ಗುರಿ ಮತ್ತು ಉದ್ದೇಶಗಳಲ್ಲಿ ವಿಶ್ವಾಸವಿಟ್ಟು ದುಡಿಯುತ್ತೇವೆಯೋ ಯಶಸ್ಸು ಖಂಡಿತ ಎನ್ನುವ ವಿಷಯ ನಿರೂಪಣೆ ಇದೆ ಅಂಬಿಗರ ಚೌಡಯ್ಯನವರ ವಚನದಲ್ಲಿ.
ಮುಂದುವರೆದು ಅಂಬಿಗರ ಚೌಡಯ್ಯನವರು ಹೇಳತಾರೆ, ಅಂತರಂಗದಲ್ಲಿ ವಿಚಾರಿಸಿ ಅಲ್ಲೊಂದು ಮಾರ್ಗವ ಕಂಡು ಹಿಡಿದು ತಲೆ ಹೊಲಕ್ಕೆ ಹೋಗಬೇಕೆಂದು. ತಲೆ ಮತ್ತು ಹೊಲ ಎನ್ನುವ ಬೆಡಗಿನ ಶಬ್ದಗಳ ಪ್ರಯೋಗ ಮಾಡತಾರೆ ಅಂಬಿಗರ ಚೌಡಯ್ಯನವರು. ತಲೆ ಅಂದರೆ ಶಿವನ ಪ್ರಕಾಶದಂತಿರುವ ಜ್ಞಾನದ ಭಂಡಾರ. ಹೊಲ ಅಂದರೆ ಇಡೀ ಸಮಷ್ಠಿ. ಅಂದರೆ ಸಂಸ್ಥೆಯ ಒಳಗೂ ಮತ್ತೂ ಹೊರಗೂ ಎಷ್ಟು ಚಿಂತನ ಮಂಥನವಾಗುತ್ತೋ ಅಷ್ಟು ಯೋಜನೆ (Planning) ಯ ಸ್ಪಷ್ಟತೆ ಸಿಗುತ್ತದೆ. “ಮಹಾಬೆಳಗಿನ ಬೆಳಗಿನಲ್ಲಿ ನಿಂದು” “ಸಮರಸವಾದವಂಗೆ” ಎಂಥ ಬೆರಗನ್ನು ಮೂಡಿಸುವ ಶಬ್ದ ಪ್ರಯೋಗವಿದು ಅಂದರೆ ಗೊತ್ತು ಗುರಿಯನ್ನು ಸಾಕ್ಷಾತ್ಕರಿಸಿಕೊಂಡು ಮುಂದೆ ಹೆಜ್ಜೆಯಿಟ್ಟಾಗ “ಇಹ ಪರವಿಲ್ಲೆಂದಾತನಂಬಿಗರ ಚೌಡಯ್ಯ” ಗಮ್ಯಸ್ಥಾನವನ್ನು ತಲುಪುವದರಲ್ಲಿ ಸಂಶಯವಿಲ್ಲ ಎನ್ನುವುದರ ಮೂಲಕ ಯೋಜನೆ (Planning) ಯ ಯಶಸ್ಸಿನ ಗುಟ್ಟನ್ನು ನಮ್ಮ ಮುಂದೆ ತೆರೆದಿಡುತ್ತಾರೆ ಅಂಬಿಗರ ಚೌಡಯ್ಯನವರು. ಇಂಥ ಅದ್ಭುತ ವೈಜ್ಞಾನಿಕ ವಚನಗಳನ್ನು ವಚನ ಸಾಹಿತ್ಯ ನಮಗೆ ನೀಡಿದೆ.
2. ಸಂಘಟನೆ (Organizing) : Peter F. Drucker says: Organizing is defined as “Executing the plans effectively and systematically by arranging Human Resources (Personnel), Finance (Capital, Machinery, Materials) together to accomplish the goals & Objectives of the organization.
ಪೀಟರ್ ಎಫ್. ಡ್ರಕರ್ ಹೇಳತಾರೆ: ಸಂಘಟನೆ ಎಂದರೆ, ಮಾನವ ಸಂಪನ್ಮೂಲಗಳನ್ನು, ಧನ ಸಂಪನ್ಮೂಲ (ಬಂಡವಾಳ, ಯಂತ್ರಗಳು, ವಸ್ತುಗಳು) ಗಳನ್ನು ಕ್ರೋಢೀಕರಿಸಿಕೊಂಡು ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ಯೋಜನೆಯನ್ನು ಪರಿಣಾಮಕಾರಿಯಾಗೆ ಮತ್ತು ಶಿಸ್ತುಬದ್ಧವಾಗಿ ಅನುಷ್ಠಾನಕ್ಕೆ ತರುವುದು. ಪೀಟರ್ ಫರ್ಡಿನಾಂಡ್ ಡ್ರಕರ್ (1909-2005) ಆಸ್ಟ್ರಿಯನ್ ಸಂಜಾತ ಅಮೇರಿಕಾದ Management Consultant ಮತ್ತು Founder of Modern Management. ಹಾಗೆಯೇ ಶಿಕ್ಷಣ ತಜ್ಞ ಮತ್ತು ಲೇಖಕರೂ ಹೌದು. ಮೂಲತಃ ನಿರ್ವಹಣಾ ಶಾಸ್ತ್ರ ಮತ್ತು ಆಧುನಿಕ ಸಾಂಸ್ಥೀಕರಣ ನಿರ್ವಹಣೆ ವಿಜ್ಞಾನದ ಬಗ್ಗೆ ಅವರು ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. Management Objectives ಮತ್ತು Self Control ಬಗ್ಗೆ ಬರೆದ ಲೇಖನಗಳು ಪ್ರಸಿದ್ಧವಾಗಿವೆ.
ಸಂಘಟನೆಯ ಬಗ್ಗೆ ವಚನ ಸಾಹಿತ್ಯದಲ್ಲಿ ವಿಪುಲವಾದ ಉಲ್ಲೇಖ ನಮಗೆ ಸಿಗುತ್ತದೆ. “ಅನುಭವ ಮಂಟಪ” ವೇ ಒಂದು ಅತ್ಯುತ್ತಮ ಉದಾಹರಣೆ. 770 ಅಮರ ಗಣಂಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಿ ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮದ ಚಿಂತನೆಯ ಮೂಲಕ ಸಮರ್ಥ ಸಮಾಜವನ್ನು ಕಟ್ಟಿದ್ದು ಆಧುನಿಕ ನಿರ್ವಹಣಾ ವಿಜ್ಞಾನದ ಸಂಘಟನೆ (Orgnizing) ಎನ್ನುವ ಕಾರ್ಯತಂತ್ರಕ್ಕೆ ಸಾಕ್ಷಿ.
ನಿರ್ವಹಣಾ ವಿಜ್ಞಾನದ ಸಂಘಟನೆ (Orgnizing) ಎನ್ನುವ ಕಾರ್ಯತಂತ್ರಕ್ಕೆ ವಚನ ಸಾಹಿತ್ಯದಲ್ಲಿ ಎರಡು ರೀತಿಯಲ್ಲಿ ಪ್ರಸ್ತಾವನೆ ಇದೆ. ಒಂದು ಎಲ್ಲರನ್ನೂ ಸಮಾನವಾಗಿ ಸ್ವೀಕರಿಸಿ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ನೀಡುವ ಜವಾಬ್ದಾರಿ. ಇನ್ನೊಂದು ಸಂಸ್ಕೃತಿಯ ತಳಹದಿಯ ಮೇಲೆ ಕಾರ್ಯತಂತ್ರವನ್ನು ರೂಪಿಸುವುದು. ಬಸವಾದಿ ಶರಣರು ಈ ಎರಡೂ ಸೂತ್ರಗಳನ್ನು ಬಳಸಿ ಸಂಘಟನೆ (Orgnizing) ಯನ್ನು ಮಾಡತಾರೆ.
ಅರೆವನಯ್ಯಾ | ಸಣ್ಣವಹನ್ನಕ್ಕ || ಒರೆವನಯ್ಯಾ | ಬಣ್ಣಗಾಬನ್ನಕ್ಕ || ಅರೆದಡೆ ಸಣ್ಣವಾಗಿ | ಒರೆದಡೆ ಬಣ್ಣವಾದಡೆ || ಕೂಡಲಸಂಗಮದೇವನೊಲಿದು | ಸಲುಹುವನು || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-63 / ವಚನ ಸಂಖ್ಯೆ-687)
“ಗಂಧ ತೀಡಿದಾಂಗ” ಎನ್ನುವ ನಮ್ಮ ಜಾನಪದರ ನಾಣ್ಣುಡಿಯಂತೆ, ಗಂಧವನ್ನು ತೇಯುವ ಹಾಗೆ ನನ್ನನ್ನು ನಾನೇ ಅರೆದುಕೊಂಡು ಸೇವೆಯನ್ನು ಮಾಡುವೆನು. “ಒರೆವನಯ್ಯಾ ಬಣ್ಣ ಗಾಬನ್ನಕ್ಕ” ಎನ್ನುವಲ್ಲಿ ಅಕ್ಕಸಾಲಿಗನು ಚಿನ್ನವನ್ನು ತಿಕ್ಕಿ ತಿಕ್ಕಿ ಪರೀಕ್ಷಿಸುವಂತೆ ನನ್ನನ್ನು ನಾನು ಪರೀಕ್ಷೆಗೆ ಒಳಪಡುವೆ ಎಂದು ಹೇಳುತ್ತಾರೆ ಬಸವಣ್ಣನವರು. ಈ ಎರಡೂ ತತ್ವಗಳು ಸಂಘಟನೆ (Orgnizing) ಯ ಉನ್ನತ ತತ್ವಗಳು. ಸಂಘಟನೆಯಲ್ಲಿ ತೊಡಗಿಸಿಕೊಳ್ಳುವವರು ತಮ್ಮೆಲ್ಲ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಕೆಲಸ ಮಾಡುವುದರಿಂದ ಗುರಿ ಮತ್ತು ಉದ್ದೇಶಗಳನ್ನು ತಲುಪುವುದಕ್ಕೆ ಸಹಾಯಕವಾಗುತ್ತದೆ.
ಇನ್ನು ಸಂಸ್ಕೃತಿಯ ತಳಹದಿಯ ಮೇಲೆ ಸಂಘಟನೆಯನ್ನು ಮಾಡುವುದು. ಯಾವಾಗ ಸಂಸ್ಥೆಯಲ್ಲಿ ಗುರಿಯನ್ನು ತಲುಪುವ ವ್ಯವಸ್ಥೆ ಪರಂಪರೆ ಮತ್ತು ಸಂಸ್ಕೃತಿಯ ಮೇಲೆ ಅವಲಂಬಿತವಾಗುತ್ತದೆಯೋ ಅಲ್ಲಿ ಗುರಿ ಮತ್ತು ಉದ್ದೇಶಗಳು ಯಶಸ್ವಿಯಾಗುತ್ತವೆ ಎನ್ನುವುದಕ್ಕೆ Infosys, Microsoft, Wipro ಮತ್ತು TCS ನಂಥ ಹಲವಾರು Multi National Company ಗಳ ಯಶಸ್ಸು ನಮ್ಮ ಕಣ್ಣ ಮುಂದಿವೆ. ಅಲ್ಲಿರುವ ಎಲ್ಲ ಸ್ಥರದಲ್ಲಿ ಕೆಲಸ ಮಾಡುವವರನ್ನು ಮಾತನಾಡಿಸಿದರೆ ಒಂದೇ ತರಹದ ಗುರಿ ಮತ್ತು ಉದ್ದೇಶ ತಲುಪುವುದರ ಬಗ್ಗೆ ಹೇಳುವ ಸಂಸ್ಕೃತಿಯನ್ನು ಕಾಣಬಹುದು.
ಇದನ್ನೇ ಆಧುನಿಕ ನಿರ್ವಹಣಾ ವಿಜ್ಞಾನ (Modern Scientific Management System) ನಾವು “ಕಾಯಕ ಸಂಸ್ಕೃತಿ” (Work Culture) ಎನ್ನುತ್ತೇವೆ. ಇದನ್ನೇ ಬಸವಣ್ಣನವರ ಎರಡು ವಚನಗಳು ಪ್ರಭುದ್ಧವಾಗಿ ಚಿತ್ರಿಸುತ್ತದೆ.
ಲಿಂಗವಶದಿಂದ | ಬಂದ ನಡೆಗಳು || ಲಿಂಗವಶದಿಂದ | ಬಂದ ನುಡಿಗಳು || ಲಿಂಗವಂತರು | ತಾವು ಅಂಜಲದೇಕೆ? || ಲಿಂಗವಿರಿಸಿದಂತಿಪ್ಪುದಲ್ಲದೆ | ಕೂಡಲಸಂಗಮದೇವ || ಭಕ್ತರಭಿಮಾನ | ತನ್ನದೆಂಬನಾಗಿ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-63 / ವಚನ ಸಂಖ್ಯೆ-685)
ಲಿಂಗಕ್ಕಲ್ಲದೆ | ಮಾಡೆನೀ ಮನವನು || ಜಂಗಮಕ್ಕಲ್ಲದೆ | ಮಾಡೆನೀ ಧನವನು || ಪ್ರಸಾದಕ್ಕಲ್ಲದೆ | ಮಾಡೆನೀ ತನುವನು || ಲಿಂಗಜಂಗಮ | ಪ್ರಸಾದಕ್ಕಲ್ಲದೆ || ಬಾಯ್ದೆರೆಯೆನೆಂಬುದೆನ್ನ ಭಾಷೆ || ಅನರ್ಪಿತವಾದಡೆ | ತಪ್ಪೆನ್ನದು || ಮೂಗ ಕೊಯಿ | ಕೂಡಲಸಂಗಮದೇವಾ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-66 / ವಚನ ಸಂಖ್ಯೆ-728)
ಅರಿವೇ ಗುರು, ಆಚಾರವೇ ಲಿಂಗ, ಸಮಾಜ ಮತ್ತು ಸಮಷ್ಠಿಯ ಉತ್ಥಾನವೇ ಜಂಗಮ ಎನ್ನುವುದು ಅಷ್ಟಾವರಣದ ಒಂದು ಶ್ರೇಷ್ಠ ತತ್ವ. ಲಿಂಗ ಎನ್ನುವುದು ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕ. ಹಾಗಾಗಿ ಗುರು ಲಿಂಗ ಜಂಗಮವೆನ್ನುವದು ಸಂಘಟನೆಯಲ್ಲಿರುವ ಜನರ ಅರಿವು, ಸಂಸ್ಕೃತಿ ಮತ್ತು ಗುರಿ ಮತ್ತು ಉದ್ದೇಶಗಳನ್ನು ಈಡೇರಿಸುವ ಹಾಗೂ ಸಫಲತೆಯೆಡೆಗೆ ಒಯ್ಯುವ ಸಂಸ್ಕೃತಿಯನ್ನು ಸಂಘಟನೆಯಲ್ಲಿ ಇರಬೇಕಾದ ಅವಶ್ಯಕತೆಯನ್ನು ಬಸವಾದಿ ಶರಣರು 12 ನೇ ಶತಮಾನದಲ್ಲಿ ಕಂಡುಕೊಂಡಿದ್ದರು. ಹಾಗಾಗಿ “ಮಹಾಮನೆ” ಮತ್ತು “ಅನುಭವ ಮಂಟಪ” ಎನ್ನುವ ಎರಡು ಉದಾತ್ತ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಇದು ಆಧುನಿಕ ನಿರ್ವಹಣಾ ವಿಜ್ಞಾನ (Modern Scientific Management System) ಕ್ಕೆ ಒಂದು Proto Type Model ಎನ್ನಬಹುದು. ಅದಕ್ಕಾಗಿ ಈಗಲೂ ನಾವು ಈ ಎರಡೂ ಸಂಸ್ಥೆಗಳನ್ನು ಪದೆ ಪದೆ ನೆನಪಿಸಿಕೊಳ್ಳುತ್ತಿದ್ದೇವೆ.
3. ನಿರ್ದೇಶನ (Directing) : Douglas McGregor says: Directing is defined as “Process of Instructing, Guiding, Leading the people, Performance Monitoring to achieve the Goals & Objectives of the organization. ಡಗ್ಲಸ್ ಮ್ಯಾಕ್ಗ್ರೆಗರ್ ಹೇಳತಾರೆ: ನಿರ್ದೇಶನ ಎಂದರೆ, ಸೂಚನೆ, ಮಾರ್ಗದರ್ಶನ, ಕಾರ್ಯಕ್ಷಮತೆಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಗಳನ್ನು ಮಾಡುವುದರ ಮೂಲಕ ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ತಲುಪುವಲ್ಲಿ ಸಹಾಯಕ ಮಾಡುವ ಪ್ರಕ್ರಿಯೆ. ಡಗ್ಲಸ್ ಮರ್ರೆ ಮ್ಯಾಕ್ ಗ್ರೆಗರ್ (1906-1964) ಅಮೇರಿಕಾದ MIT Sloan School of Management (MIT Sloan or Sloan) ನಲ್ಲಿ ಆಧ್ಯಾಪಕರಾಗಿದ್ದವರು. ಕೋಲ್ಕತ್ತಾದ Indian Institute of Management ನಲ್ಲಿಯೂ ಕೂಡ ಕೆಲಕಾಲ ಅಧ್ಯಾಪಕರಾಗಿದ್ದವರು. ಇವರ ಗುರುಗಳು ಅಮೇರಿಕಾದ ಪ್ರಖ್ಯಾತ ಮನಃಶಾಸ್ತ್ರಜ್ಞ ಅಬ್ರಹಾಂ ಮಾಸ್ಲೋ. ಮೂಲತಃ ನಿರ್ವಹಣಾ ಶಾಸ್ತ್ರ ಮತ್ತು ಆಧುನಿಕ ಸಾಂಸ್ಥೀಕರಣ ನಿರ್ವಹಣೆ ವಿಜ್ಞಾನದ ಬಗ್ಗೆ ಅವರು ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. 1960 ರಲ್ಲಿ ಅವರು ಬರೆದ “The Human Side of Enterprise” ಪುಸ್ತಕದಲ್ಲಿ ಮಂಡಿಸಿದ ಮಾನವ ಪ್ರಕೃತಿ ಸಹಜ ಗುಣ ಮತ್ತು ನಡಾವಳಿಕೆ (Human Nature & Behaviour) ಕುರಿತಾದ “Theory-X & Theor-Y” ಅತ್ಯಂತ ಪ್ರಸಿದ್ಧವಾದ ಸೂತ್ರ.
“ನಿರ್ದೇಶನ” ಎನ್ನುವುದು ನಿರ್ವಹಣಾ ವಿಜ್ಞಾನ (Management Science) ದ ಸುತ್ತ ತಿರುಗುವ ಕಾರ್ಯತಂತ್ರ. ಮೇಲ್ವಿಚಾರಣೆ (Supervision), ಪ್ರೇರಣಾತ್ಮಕ (Motivational), ನಾಯಕತ್ವ ಗುಣಗಳು (Leadership Qualities), ಸಂವಹನ ಕೌಶಲ್ಯ (Communication) ನಿರ್ದೇಶನದ ನಾಲ್ಕು ಮೂಲ ಅಂಶಗಳು.
ಇಂಥ ಮೂಲಭೂತ ಮೇಲ್ವಿಚಾರಣೆ (Supervision) ಅಂಶವನ್ನು ಬಸವಾದಿ ಶರಣರು 12 ನೇ ಶತಮಾನದಲ್ಲಿಯೇ ತಮ್ಮ ವಚನಗಳ ಮೂಲಕ ನಿರೂಪಿಸಿದ್ದಾರೆ. ವೀರ ಗೊಲ್ಲಾಳ ಎಂಬ ಶರಣರು ತಮ್ಮ ಒಂದು ವಚನದಲ್ಲಿ ನಿರ್ವಹಣಾ ವಿಜ್ಞಾನ (Management Science) ದ ಮೇಲ್ವಿಚಾರಣೆ (Supervision) ಅಂಶವನ್ನು ಕುರಿಗಳ ಮೇಲ್ವಿಚಾರಣೆಯ ರೂಪಕದ ಮೂಲಕ ವಿಸ್ತಾರ ಮಾಡಿದ್ದಾರೆ.
ಕಂಥೆಯ ಕಟ್ಟಿ | ತಿತ್ತಿಯ ಹೊತ್ತು || ಮರಿಯ ನಡಸುತ್ತ | ದೊಡ್ಡೆಯ ಹೊಡೆವುತ್ತ || ಅಡ್ಡಗೋಲಿನಲ್ಲಿ ಹೋಹ | ಚುಕ್ಕಿ ಬೊಟ್ಟಿನವ ತಿಟ್ಟುತ್ತ || ಹಿಂಡನಗಲಿ | ಹೋಹ ದಿಂಡೆಯ || ಮಣೆಘಟ್ಟನ ಅಭಿಸಂದಿಯ | ಕೋಲಿನಲ್ಲಿಡುತ್ತ || ಈ ಹಿಂಡಿನೊಳಗೆ | ತಿರುಗಾಡುತಿದ್ದೇನೆ || ಈ ವಿಕಾರದ | ಹಿಂಡ ಬಿಡಿಸಿ || ನಿಜನಿಳಯ ನಿಮ್ಮಂಗವ | ತೋರಿ ಸುಸಂಗದಲ್ಲಿರಿಸು || ಎನ್ನೊಡೆಯ | ವೀರಬೀರೇಶ್ವರಲಿಂಗಾ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1623 / ವಚನ ಸಂಖ್ಯೆ-87)
ಆಧ್ಯಾತ್ಮಿಕ ಸೊಗಡಿರುವ ಶರಣ ವೀರ ಗೊಲ್ಲಾಳರ ಈ ವಚನದಲ್ಲಿ ಮಾನವನು ಜೀವನದ ಅಂತರಂಗ ಮತ್ತು ಬಹಿರಂಗವನ್ನೂ ನೋಡಿಕೊಂಡು ಗುರಿಯನ್ನು ತಲುಪಬೇಕೆನ್ನುವ ಆಶಯವನ್ನು ವ್ಯಕ್ತಪಡಿಸುತ್ತಾನೆ. ಚರ್ಮದ ಚೀಲವನ್ನು ಹೊತ್ತ ದೇಹವನ್ನು ಸಂಸ್ಥೆಯೆನ್ನುವದಕ್ಕೆ ಹೋಲಿಸಬಹುದು. ವಿವಿಧ ಸ್ಥರದ ಮತ್ತು ವಿವಿಧ ತರಹದ ಮನಸ್ಥಿತಿಯುಳ್ಳ ನೌಕರ ವರ್ಗವನ್ನು ಸಂಸ್ಥೆಯು ಹೊಂದಿರುತ್ತದೆ. ಕೆಲವರು ಅಹಂಕಾರದಿಂದ ಕೂಡಿದವರಾಗಿದ್ದರೆ, ಇನ್ನು ಕೆಲವರು ಕೆಲಸ ಮಾಡದೇ ಕುಂತಲ್ಲಿಯೇ ದುಂಡಗಾದವರಿರುತ್ತಾರೆ. ಇನ್ನೂ ಹಲವರು ಜಾತ್ರೆಗಳಲ್ಲಿ ಸೇರಿದ ಜನರಂತೆ ಗದ್ದಲ ಮಾಡಿ ಸಂಸ್ಥೆಯನ್ನು ಮಧ್ಯದಲ್ಲಿಯೇ ಬಿಟ್ಟು ಹೋಗುವವರಿರುತ್ತಾರೆ. ಇನ್ನೂ ಕೆಲವರು ಸಂತೋಷದಿಂದ ಅವರ ಕೆಲಸ ಮಾಡಿಕೊಂಡು ಹೊಗುವವರಿರುತ್ತಾರೆ. ಹೀಗೆ ಹಲವು ಮನಸ್ಥಿತಿಯವರನ್ನು ಶರಣ ವೀರಗೊಲ್ಲಾಳರು ಕುರಿಯನ್ನು ಕಾಯುವ ಮೇಲ್ವಿಚಾರಕ (Supervision) ನಂತೆ ನಮಗೆ ಗೋಚರವಾಗುತ್ತಾರೆ. ಹಿಂಡನಗಲಿ ಹೋಗುವವರನ್ನು ಪ್ರೇರೇಪಿಸಿ ತನ್ನಲ್ಲಿಯೇ ಉಳಿಸಿಕೊಳ್ಳುವ ಜವಾಬ್ದಾರಿ ಮೇಲ್ವಿಚಾರಕನ ಮೇಲಿರುತ್ತದೆ. ಇಂಥ ಅನುಪಮ ವಚನದ ಮೂಲಕ ಮೇಲ್ವಿಚಾರಣೆಯೆಂಬ ತತ್ವವನ್ನು ಆಧ್ಯಾತ್ಮದ ಮೂಲಕ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.
ಪ್ರೇರಣಾತ್ಮಕ (Motivational) ಚಿಂತನೆಗಳು ಸಂಸ್ಥೆಗಳ ಅವಿಭಾಜ್ಯ ಅಂಗ. ಇದು ಸಾಮರ್ಥ್ಯವುಳ್ಳ ನೌಕರರನ್ನು ಹಿಡಿದಿಟ್ಟುಕೊಳ್ಳುವಲ್ಲಿ (Work Force Retention) ಅಮೂಲ್ಯ ಕೊಡುಗೆ ನೀಡುತ್ತದೆ. ಇದಕ್ಕೆ ನಿರ್ವಹಣಾ ಶಾಸ್ತ್ರದಲ್ಲಿ ಹಲವಾರು ನೀತಿಗಳು ಇದ್ದರೂ ಸಹ ನಿಷ್ಠೆ ಎನ್ನುವ ತತ್ವ ಬಹಳ ಮುಖ್ಯವಾದದ್ದು.
ನಿಷ್ಠೆಯಿಂದ | ಲಿಂಗವ ಪೂಜಿಸಿ || ಮತ್ತೊಂದು | ಪಥವನರಿಯದ ಶರಣರು || ಸರ್ಪನ ಹೆಡೆಯ ಮಾಣಿಕದಂತೆ | ಇಪ್ಪರು ಭೂಷಣರಾಗಿ || ದರ್ಪಣದೊಳಗಣ | ಪ್ರತಿಬಿಂಬದಂತೆ ಹಿಂಗದಿಪ್ಪರು || ಕೂಡಲಸಂಗಮದೇವಾ | ನಿಮ್ಮ ಶರಣರು || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-68 / ವಚನ ಸಂಖ್ಯೆ-746)
ಸಂಸ್ಥೆಯನ್ನು ಬಿಟ್ಟು ಹೋಗುವವರನ್ನು ಬಸವಣ್ಣನವರು ಸರ್ಪದ ಮೇಲಿನ ಮಣಿಯಂತೆ ಪ್ರಯೋಜನಕ್ಕೆ ಬಾರದವರೆಂದು ಹೇಳುವ ಮೂಲಕ ನೌಕರರನ್ನು ಹಿಡಿದಿಟ್ಟುಕೊಳ್ಳುವುದು ಅನಿವಾರ್ಯವೆನ್ನುವುದನ್ನು ತಿಳಿಸಿದ್ದಾರೆ. ಲಿಂಗಪಥವೆನ್ನುವ ಏಕೋಭಾವದ ನಂಬುಗೆಯ ಸಂಸ್ಥೆಯ ಗುರಿ ಮತ್ತು ಉದ್ದೇಶಗಳು ನೌಕರರ ಮನಕ್ಕೆ ತಾಕಿದಾಗ ಅವರು ಸಂಸ್ಥೆಯನ್ನು ಬಿಟ್ಟು ಹೋಗುವುದಿಲ್ಲ. ಇದನ್ನು ಉಪಯೋಗಿಸಿಕೊಂಡು ಅವರನ್ನು ಪ್ರೇರೇಪಿಸಬೇಕೆನ್ನುವ ಸದಾಶಯ ಬಸವಣ್ಣನವರ ಈ ವಚನದಲ್ಲಿದೆ.
ನಾಯಕತ್ವ ಗುಣಗಳು (Leadership Qualities) ನಾಯಕತ್ವ ಸಂಸ್ಥೆಯನ್ನು ನಡೆಸುವ ಹಿರಿಯರಲ್ಲಿ ಇರಬೇಕಾದದ್ದು ಅತ್ಯವಶ್ಯಕ.
ಮೇಲಾಗಲೊಲ್ಲೆನು | ಕೀಳಾಗಲಲ್ಲದೆ || ಕೀಳಿಂಗಲ್ಲದೆ | ಹಯನು ಕರೆವುದೆ || ಮೇಲಾಗಿ | ನರಕದಲೋಲಾಡಲಾರೆನು || ನಿಮ್ಮ ಶರಣರ | ಪಾದಕ್ಕೆ ಕೀಳಾಗಿಸು || ಮಹಾದಾನಿ | ಕೂಡಲಸಂಗಮದೇವಾ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-37 / ವಚನ ಸಂಖ್ಯೆ-360)
“Modern Servant Leadership Movement” ನ ಸಂಸ್ಥಾಪಕ ಅಮೇರಿಕಾದ Robert Greenleaf ಹೇಳುವಂತೆ “Good leaders must first become good servants” ಎನ್ನುವ ನೀತಿಯನ್ನು ಅಕ್ಷರಶಃ ತಮ್ಮ ಆಚರಣೆಯಲ್ಲಿ ತಂದವರು ಬಸವಣ್ಣನವರು. “ಕೀಳಿಂಗಲ್ಲದೆ ಹಯನು ಕರೆವುದೆ” ಹಸು ತನ್ನ ಕರುವಿಗೆ ಮಾತ್ರ ಹಾಲು ನೀಡುವಂತೆ ನನ್ನನ್ನೂ ಕರುವಂತೆ ಕಾಣಿರಿ ಎಂದು ಬಸವಣ್ಣನವರು ಬೇಡಿಕೊಳ್ಳುತ್ತಾರೆ. ಇನ್ನೂ ಮುಂದೆ ಹೋಗಿ ನಿಮ್ಮ ಶರಣರ ಪಾದಕ್ಕೆ ಕೀಳಾಗಿಸು ಎಂದು ಕೂಡಲ ಸಂಗಮದೇವರನ್ನು ಬೇಡುತ್ತಾರೆ. ಸರಳಾತಿ ಸರಳ ವ್ಯಕ್ತಿತ್ವವನ್ನು ಮುಂದಿಟ್ಟುಕೊಂಡು ಹೋಗುವ ಬಸವಣ್ಣನವರ ನಾಯಕತ್ವದ ದಿವ್ಯ ವ್ಯಕ್ತಿತ್ವವನ್ನು ಈ ವಚನ ನಿರೂಪಿಸುತ್ತದೆ.
4. ಸಂಯೋಜನೆ (Co-ordinating) James David Mooney says: Co-ordinating is defined as “Process of Synchronization of the efforts of Group Members, Scientific Centralization & De-Centralization of Work, Delegation of Authority, Unity of Actions to achieve the Goals & Objectives of the organization. ಜೇಮ್ಸ್ ಡೇವಿಡ್ ಮೂನೀ ಹೇಳತಾರೆ: ಸಂಯೋಜನೆ ಎಂದರೆ, ಸಂಸ್ಥೆಯ ಎಲ್ಲ ವರ್ಗದವರ ಸಂಕೀರ್ಣ ಕಾರ್ಯಕ್ಷಮತೆ, ಕಾರ್ಯಕಗಳ ಕೇಂದ್ರೀಕರಣ ಮತ್ತು ವಿಕೇಂದ್ರೀಕರಣ, ಅಧಿಕಾರ ನಿಯೋಜನೆ ಮಾಡುವುದರ ಮೂಲಕ ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ತಲುಪುವಲ್ಲಿ ಸಹಾಯಕ ಮಾಡುವ ಪ್ರಕ್ರಿಯೆ. ಜೇಮ್ಸ್ ಡೇವಿಡ್ ಮೂನೀ (1884-1957) ಅಮೇರಿಕಾದ ಗಣಿ ಮತ್ತು ಲೋಹಶಾಸ್ತ್ರ (Mining & Metallurgy) ಅಭಿಯಂತರರು. ಇಂಜನೀಯರಿಂಗ್ ಪದವಿ ಪಡೆದ ನಂತರ ಮೆಕ್ಸಿಕೋ ಮತ್ತು ಕ್ಯಾಲಿಫೋರ್ನಿಯಾದ ಗಣಿಗಳ ಅಧ್ಯಯನ ನಡೆಸಿದಂಥವರು. ಅಮೇರಿಕಾದ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ Westinghouse Electric, Goodrich ಮತ್ತು Hyatt Roller Bearing Company ಗಳಲ್ಲಿ ಕೆಲಸ ಮಾಡಿದಂಥವರು. ಪ್ರಖ್ಯಾತ ಕಾರ್ಪೊರೇಟ್ ಕಂಪನಿಯಾದ General Motors ನಲ್ಲಿ “Corporate Executive” ಆಗಿದ್ದವರು. ನಿರ್ವಹಣಾ ವಿಜ್ಞಾನ (Management Science) ದ ಬಗ್ಗೆ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ Principles of Organization ಪ್ರಮುಖವಾದ ಪುಸ್ತಕ.
ಸಂಯೋಜನೆ (Co-ordinating) ಎನ್ನುವುದು ನಿರ್ವಹಣಾ ವಿಜ್ಞಾನ (Management Science) ದ ಪ್ರಮುಖ ಕಾರ್ಯತಂತ್ರಗಳಲ್ಲೊಂದು. ಎಲ್ಲರನ್ನೂ ಒಟ್ಟಗೆ ಸೇರಿಸಿಕೊಂಡು ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ತಲುಪುವುದಕ್ಕೆ ಸಹಾಯಯಕ ತಂತ್ರ. ಬಸವಣ್ಣನವೆರು ಸಮಷ್ಠಿಯ ಲೇಸನ್ನು ಬಯಸಿದಂಥವರು. ಹಾಗಾಗಿ ಈ ಕಾರ್ಯತಂತ್ರವನ್ನು ಬಳಸಿದಂಥ ನಾಯಕರು.
ಇವನಾರವ ಇವನಾರವ | ಇವನಾರವನೆಂದೆನಿಸದಿರಯ್ಯಾ || ಇವ ನಮ್ಮವ ಇವ ನಮ್ಮವ | ಇವ ನಮ್ಮವನೆಂದೆನಿಸಯ್ಯ || ಕೂಡಲಸಂಗಮದೇವಾ ನಿಮ್ಮ | ಮನೆಯ ಮಗನೆಂದೆನಿಸಯ್ಯ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-16 / ವಚನ ಸಂಖ್ಯೆ-62)
ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಎಲ್ಲರೂ ಒಂದೇ ಬಳ್ಳಿಯ ಹೂವುಗಳಂತೆ ಕೆಲಸ ಮಾಡಬೇಕೆಂಬುದು ಸಂಸ್ಥೆಯ ಧೇಯೋದ್ಧೇಶಗಳಲ್ಲೊಂದು. ಅವರಲ್ಲಿ ಹೊಂದಾಣಿಕೆ ಅಥವಾ ಸಂಯೋಜನೆ ಇರಬೇಕಾದ್ದು ಕರ್ತವ್ಯವೂ ಹೌದು. ಇದನ್ನೇ ಬಸವಣ್ಣನವರು ಈ ಅನುಪಮ ವಚನದ ಮೂಲಕ ಸಾದರ ಪಡಿಸಿದ್ದಾರೆ. ಇಂಥ ಒಂದು ಬದ್ಧತೆಯನ್ನು ಬಸವಾದಿ ಶರಣರೆಲ್ಲರೂ ಪ್ರದರ್ಶಿಸಿದ್ದರು. ಸಾಮಾಜಿಕ ನ್ಯಾಯ ಮತ್ತು ಸಂಸ್ಥೆಯ ನಿರ್ವಹಣೆಯಲ್ಲಿ ಈ ಸಂಯೋಜನೆ ಎನ್ನುವ ತತ್ವದಲ್ಲಿ ಎಲ್ಲರೂ ಒಂದೇ ಮನೆಯವರಂತೆ ನಡೆದುಕೊಂಡರೆ, ರಸಾಯನ ಶಾಸ್ತ್ರದಲ್ಲಿ ಬಳಸುವ ವೇಗವರ್ಧಕ (Catalyst) ದಂತೆ ಕೆಲಸ ಮಾಡುತ್ತದೆ ಎನ್ನುವುದು ನಿರ್ವಿವಾದ.
5. ನಿಯಂತ್ರಣ (Controlling) : Henry Ford says: Controlling is defined as “Process of carrying out in accordance with the plan which has been adopted and the principles which have been laid down. Objective is to point out mistakes in order that they may be rectified and prevented from recurring to achieve the Goals & Objectives of the organization. ಹೆನ್ರಿ ಫೋರ್ಡ್ ಹೇಳತಾರೆ: ನಿಯಂತ್ರಣ ಎಂದರೆ, ಸಂಸ್ಥೆಯು ಗೊತ್ತು ಮಾಡಲ್ಪಟ್ಟ ಯೋಜನೆಗಳನ್ನು ಸರಿಯಾದ ದಿಶೆಯಲ್ಲಿ ಅನುಷ್ಠಾನಗೊಳಿಸುವ ಪ್ರಕ್ರಿಯೆ. ಅನುಷ್ಠಾನ ಮಾಡುವಾಗ ಬರುವ ಅಥವಾ ಆಗುವ ತಪ್ಪುಗಳನ್ನು ಸರಿಪಡಿಸುವುದು ಮತ್ತು ಆ ತಪ್ಪುಗಳು ಮರುಕಳಿಸದೇ ಇರವುಂತೆ ನೋಡಿಕೊಂಡು ಆ ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ತಲುಪುವಲ್ಲಿ ಸಹಾಯಕ ಮಾಡುವ ಪ್ರಕ್ರಿಯೆ. ಹೆನ್ರಿ ಫೋರ್ಡ್ (1863-1947) ಅಮೇರಿಕಾದ ಪ್ರಖ್ಯಾತ ಕಾರು ತಯಾರಿಸುವ ಫೋರ್ಡ್ ಮೋಟರ್ಸ್ ಕಂಪನಿಯ ಸಂಸ್ಥಾಪಕ ಮತ್ತು ಉದ್ಯೋಗಪತಿ. ಮಧ್ಯಮ ವರ್ಗದವರಿಗಾಗಿಯೇ ಕಾರನ್ನು ತಯಾರಿಸುವುದರ ಮೂಲಕ ಕಾರುಗಳ ವ್ಯಾಪಾರದ ಮೂಲ ಸ್ವರೂಪವನ್ನೇ ಬದಲಾಯಿಸಿದವರು. ನಿರ್ವಹಣಾ ವಿಜ್ಞಾನ (Management Science) ವನ್ನು ತಮ್ಮ ಕಾರ್ಖಾನೆಗಳಲ್ಲಿ ಅನುಷ್ಠಾನಗೊಳಿಸುವುದರ ಮೂಲಕ ಹೊಸ ಭಾಷ್ಯ ಬರೆದವರು. ನಿರ್ವಹಣಾ ವಿಜ್ಞಾನ (Management Science) ದ ಬಗ್ಗೆ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ My Life & My Work ಪ್ರಮುಖವಾದ ಪುಸ್ತಕ.
ನಿಯಂತ್ರಣ (Controlling) ನಿಯಂತ್ರಣ ಎನ್ನುವ ಪ್ರಕ್ರಿಯೆ ತನ್ನನ್ನು ತಾನು Extreme Realization ಗೆ ಒಳಪಡಿಸಿಕೊಳ್ಳುವುದು. ಇದನ್ನು ವಚನ ಸಾಹಿತ್ಯದಲ್ಲಿ ಅತ್ಯುನ್ನತ ಸ್ಥರಕ್ಕೆ ಕೊಂಡೊಯ್ದವರು ನಮ್ಮ ಬಸವಾದಿ ಶರಣರು. ಮನವೆಂಬ ಮರ್ಕಟವನ್ನು ಕಟ್ಟಿ ಹಾಕಿ ನಿಯಂತ್ರಣದಲ್ಲಿಟ್ಟುಕೊಂಡು ಸಮಾಜವನ್ನು ನಿರ್ಮಿಸಿದವರು ಬಸವಾದಿ ಶರಣರು. ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮ ಪ್ರಭುಗಳು ಮುಂತಾದ ಶರಣರು ಇಹಲೋಕದ ಒಂದು ಮಾಯೆಯನ್ನು ದಾಟಿ ತಮ್ಮನ್ನು ತಾವು ನಿಯಂತ್ರಿಸಿಕೊಂಡು ಒಂದು ಸಮ ಸಮಾಜವನ್ನು ಕಟ್ಟುವುದು ಇದೆಯಲ್ಲಾ ಅದು Extreme Modern Management Technique ನ ಒಂದು ಅದ್ಭುತ ಲೋಕ. ಇಂಥ ಒಂದು Realization ನ ನಿಯಂತ್ರಣ (Controlling) ವನ್ನು ವ್ಯಕ್ತಿ ಸ್ವಾತಂತ್ರ್ಯದ ಮೂರ್ತಿರೂಪ ವೈರಾಗ್ಯನಿಧಿ ಅಕ್ಕ ಮಹಾದೇವಿಯು ಒಂದು ಅದ್ಭುತ ವಚನದಲ್ಲಿ ತಿಳಿಸಿದ್ದಾಳೆ.
ಹಿಂದಣ ಹಳ್ಳ ಮುಂದಣ ತೊರೆ | ಸಲ್ಲುವ ಪರಿಯೆಂತು ಹೇಳಾ? || ಹಿಂದಣ ಕೆರೆ ಮುಂದಣ ಬಲೆ | ಹದುಳವಿನ್ನೆಲ್ಲಿಯದು ಹೇಳಾ? || ನೀನಿಕ್ಕಿದ ಮಾಯೆ ಕೊಲುತಿಪ್ಪುದು | ಕಾಯಯ್ಯಾ ಚೆನ್ನಮಲ್ಲಕಾರ್ಜುನಾ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-830 / ವಚನ ಸಂಖ್ಯೆ-419)
“ಹಿಂದೆ ಇರುವ ಹಳ್ಳ” ಅಂದರೆ ನಮ್ಮ ಹಿಂದಿನ ಅನುಭವಗಳು ಮತ್ತು “ಮುಂದಣ ತೊರೆ” ಮುಂದೆ ಬರುವ ಅವಕಾಶಗಳನ್ನು ನೋಡಿ ನಮ್ಮ ಮನಸ್ಸೂ ಚಂಚಲವಾಗಬಹುದು. ಇದು ನಮ್ಮ ಮುಂದೆ ಇರುವ ಸಂಸ್ಥೆಯ ಧೇಯೋಧ್ದೇಶಗಳನ್ನು ಗುರಿ ತಲುಪಿಸುವಲ್ಲಿ ಭಾಧಕವಾಗಬಹುದು. ಅದಕ್ಕಾಗಿಯೇ ನಿಯಂತ್ರಣ (Controllin) ಬೇಕೇ ಬೇಕೆನ್ನುವುದು ನಿರ್ವಹಣಾ ವಿಜ್ಞಾನ (Management Science) ದ ಒಂದು ಪ್ರಮುಖ ಕಾರ್ಯತಂತ್ರ.
ಇದನ್ನೂ ಮೀರಿದ ನಿಯಂತ್ರಣವನ್ನು ಅಲ್ಲಮ ಪ್ರಭುಗಳು ತಮ್ಮ ಎಲ್ಲ ವಚನಗಳಲ್ಲಿ ನಾನೇ ದೇವರು ಎನ್ನುವ ಅತ್ಯುನ್ನತ ವಿಶ್ವಾಸ (Extreme Confidence) ಮತ್ತು ಅತ್ಯುನ್ನತ ನಿಷ್ಠೆ (Extreme Conviction) ಯನ್ನು ಪ್ರದರ್ಶಿಸಿದ್ದಾರೆ. ಎಲ್ಲಿಯೂ ಅವರು ನಿಯಂತ್ರಣವನ್ನು ಕಳೆದುಕೊಂಡಿದ್ದನ್ನು ಉದಾಹರಿಸುವ ವಚನಗಳನ್ನು ನಾವು ಕಾಣುವುದಿಲ್ಲ. ಎಲ್ಲವೂ ಆಧುನಿಕ ನಿರ್ವಹಣಾ ವಿಜ್ಞಾನ (Modern Management Science) ನಿರ್ವಹಣಾ ವಿಜ್ಞಾನದಲ್ಲಿ ಕಾಣುವ ಅಸಾಧಾರಣ ನಿಯಂತ್ರಣ ಕಾರ್ಯತಂತ್ರ.
ಮಾಮರದೊಳಗೊಂದು | ಮಾಯದ ಮಂಜು ಕವಿದಡೆ || ಹೂ ಮಿಡಿ ಫಲಂಗಳು | ಉದುರವಿನ್ನೆಂತೋ? || ಮಂಜಿನ ರಸವನುಂಡು | ಫಲ ನಿಮಿರ್ದು ಬೆಳೆದಡೆ || ಆ ಫಲವ ನಾನು ಮುಟ್ಟೆನು | ಕಾಣಾ ಗುಹೇಶ್ವರಾ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-165 / ವಚನ ಸಂಖ್ಯೆ-347)
ಮಾವಿನಮರದಲ್ಲಿ “ಮಂಜು” ಇದನ್ನು ಮಾಯೆ ಅಥವಾ ನಮ್ಮ ಸುತ್ತಮುತ್ತಲಿನ ಚಂಚಲತೆಗಳನ್ನು ಮನಸ್ಸಿನ ತೊಳಲಾಟಕ್ಕೆ ಬಳಸುವ ಅಲ್ಲಮರು, “ಮಂಜು ಮುಸುಕಿದಾಗ” ಅಂದರೆ ನಮ್ಮ ಮನಸ್ಸು ನಿಯಂತ್ರಣವಿಲ್ಲದಾಗ ಬೆಳೆಯುವ “ಹೂ ಮಿಡಿ ಫಲಗಳು” ನಿಯಂತ್ರಣಕ್ಕೆ ಬಾರದ ಆಸೆ ಅಮಿಷಗಳು ಬರುತ್ತವೆ ಅಥವಾ ಉದುರುತ್ತವೆ. ಎಂಥ ಆಧ್ಯಾತ್ಮಿಕ ದೃಷ್ಟಾಂತವನ್ನು ನಮಗೆ ತೆರೆದಿಡುತ್ತಾರೆ ಅಲ್ಲಮ ಪ್ರಭುಗಳು. ಅಂಥ ಫಲಗಳನ್ನು ನಾನು ಗುಹೇಶ್ವರನ ಆಣೆಗೂ ಮುಟ್ಟೋದಿಲ್ಲ, ತಿನ್ನುವುದಿಲ್ಲ ಎಂದು ಅಲ್ಲಮ ಪ್ರಭುಗಳು ಹೇಳುತ್ತಾರೆ. ಇದೇ ಆಧುನಿಕ ನಿರ್ವಹಣಾ ವಿಜ್ಞಾನ (Modern Management Science) ದಲ್ಲಿ ಕಂಡು ಬರುವ ನಿಯಂತ್ರಣ (Controllin) ಕಾರ್ಯತಂತ್ರ. ಯಾವಾಗ ಸಂಸ್ಥೆಗಳಲ್ಲಿ ಇಂಥ ತತ್ವಗಳನ್ನು ಎಲ್ಲ ವರ್ಗದವರು ಅಳವಡಿಸಿಕೊಳ್ಳುತ್ತಾರೋ ಆ ಸಂಸ್ಥೆಯ ಗುರಿ ಮತ್ತು ಧೇಯೋದ್ದೇಶಗಳು ಈಡೇರುವಲ್ಲಿ ಸಂಶಯವಿಲ್ಲಾ ಎನ್ನುವುದನ್ನು ನಾವು 12 ನೇ ಶತಮಾನದ ಬಸವಾದಿ ಶರಣರ ವಚನಗಳಲ್ಲಿ ಕಂಡುಕೊಳ್ಳಬಹುದು. ಇಂಥ ಒಂದು ನಿಯಂತ್ರಣವನ್ನು ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್) ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದರು. ಮಾರ್ಟಿನ್ ಲೂಥರ್ ಕಿಂಗ್ (ಜ್ಯೂನಿಯರ್) (15.01.1929 – 04.04.1968) ಅಮೇರಿಕಾ ಸಂಯುಕ್ತ ಸಂಸ್ಥಾನದ ಆಟ್ಲಾಂಟ ನಗರದಲ್ಲಿ ಜನಿಸಿದ ಡಾ. ರೆವೆರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್, ವರ್ಣಭೇಧನೀತಿಯ ವಿರುಧ್ಧ ಹೋರಾಡಿದ ಪ್ರಮುಖ ಕಪ್ಪು ನಾಯಕರಲ್ಲೊಬ್ಬರು. ಇವರನ್ನು ಗೌರವಿಸಿದ ಪ್ರಶಸ್ತಿಗಳಲ್ಲಿ “ನೊಬೆಲ್ ಶಾಂತಿ ಪ್ರಶಸ್ತಿ” ಮತ್ತು “ಅಮೇರಿಕದ ಅಧ್ಯಕ್ಷರ ಸ್ವಾತಂತ್ರ್ಯ ಪದಕ” ಗಳು ಪ್ರಮುಖವಾದವು. ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಇವರು ಅಹಿಂಸಾತ್ಮಕ ಚಳುವಳಿ ಮತ್ತು ಸರಳ ನಡವಳಿಕೆಗಳು, ಇವರನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಿದವು. 04.04.1968 ರಂದು ಇವರು ಹಂತಕನ ಗುಂಡಿಗೆ ಬಲಿಯಾಗಿ ಹುತಾತ್ಮರಾದರು.
ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರು ಬಾಲ್ಯದಿಂದಲೂ ಇಡೀ ಜಗತ್ತಿನ ಜನಾಂದೋಲನ ಸಾಹಿತ್ಯವನ್ನು ಸಮಗ್ರವಾಗಿ ಅಭ್ಯಾಸ ಮಾಡಿದವರು. ಆದರೆ ಅವರು ಅತ್ಯಂತ ಪ್ರಭಾವಿತರಾಗಿದ್ದು ಮಾಹಾತ್ಮಾ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟಕ್ಕೆ.
Never be afraid to do what’s right, especially if the well-being of a person or animal is at stake. Society’s punishments are small compared to the wounds we inflict on our soul when we look the other way.
ಸಕಲ ಚರಾಚರ ವಸ್ತುಗಳ ಮತ್ತು ಜನಸಾಮಾನ್ಯರ ಒಳಿತಿಗಾಗಿ ಮಾಡುವ ಕೆಲಸ ಸತ್ಯ ಮತ್ತು ಸರಿಯಿದ್ದರೆ ಆ ಕೆಲಸವನ್ನು ಮಾಡಲು ಹಿಂಜರಿಯುವದು ಬೇಡ ಮತ್ತು ಹೆದರುವುದು ಬೇಡ. ಜನಸಾಮಾನ್ಯರ ಘಾಸಿಗೊಂಡ ಮನ ಅಥವಾ ಅತ್ಮಗಳಿಗಾದ ಗಾಯಗಳನ್ನು ಹೋಲಿಸಿದರೆ ಸಮಾಜ ನೀಡುವ ಶಿಕ್ಷೆ ನಮಗೆ ಅತಿ ಚಿಕ್ಕವು ಅಥವಾ ಕನಿಷ್ಠವಾದವು.
ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಪ್ರಸಿದ್ಧ ಹೇಳಿಕೆಗಳು ಅಥವಾ ಉಲೇಖಗಳಲ್ಲಿ ಕೆಲವೊಂದನ್ನು ಬಸವಣ್ಣನವರ ವಚನಗಳ ಮೂಲಕ ತಿಳಿದುಕೊಳ್ಳುವದರಿಂದ ಜಾಗತಿಕ ಮಟ್ಟದಲ್ಲಿ ಬಸವಣ್ಣನವರ ವಿಚಾರಧಾರೆಗಳು ಎಷ್ಟರ ಮಟ್ಟಿಗೆ ಹೋಲಿಕೆಯಾಗುತ್ತವೆ ಎನ್ನುವುದರ ಪರಿಕಲ್ಪನೆ ನಮಗಾಗಬಹುದು.
ಧನದಲ್ಲಿ ಶುಚಿ | ಪ್ರಾಣದಲ್ಲಿ ನಿರ್ಭಯ | ಇದಾವಂಗಳವಡವುದಯ್ಯ? || ನಿಧಾನ ತಪ್ಪಿ | ಬಂದಡೆ ಒಲ್ಲೆನೆಂಬವರಿಲ್ಲ || ಪ್ರಮಾದವಶ | ಬಂದಡೆ ಹುಸಿಯೆನೆಂಬವರಿಲ್ಲ || ನಿರಾಶೆ ನಿರ್ಭಯ | ಕೂಡಲಸಂಗಮದೇವಾ || ನೀನೊಲಿದ | ಶರಣಂಗಲ್ಲದಿಲ್ಲ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-77 / ವಚನ ಸಂಖ್ಯೆ-855)
ತನುಮನಧನಕ್ಕೂ ಕೂಡ ಒಂದು ನಿಯಂತ್ರಣ ಹಾಕಿಕೊಂಡಿರುವುದನ್ನು ನಾವು ಈ ವಚನದಲ್ಲಿ ಕಾಣಬಹುದು. ಇದು ಬಸವಾದಿ ಶರಣರ ಒಂದು ತಾಕತ್ತು ಮತ್ತು ಶಕ್ತಿ. ನಿಯಂತ್ರಣವೆನ್ನುವ ತತ್ವ ಶರಣರಲ್ಲಿ ಹಾಸು ಹೊಕ್ಕಾಗಿತ್ತು. ಇಂಥ ಒಂದು ನಿಯಂತ್ರಣದ ರೇಖೆಗೆ ಬಸವಾದಿ ಶರಣರು ಯಾವಾಗಲೂ ಬದ್ಧರಾಗಿದ್ದರು. ಇದನ್ನು ನಾವು ಆಧುನಿಕ ನಿರ್ವಹಣಾ ವಿಜ್ಞಾನ (Modern Management Science) ಕ್ಕೆ ಅಳವಡಿಸುವುದು ಅತೀ ಆವಶ್ಯಕ.
ನಿರ್ವಣಾ ವಿಜ್ಞಾನ ತತ್ವ (Principles of Management) ಗಳು : ನಿರ್ವಹಣಾ ವಿಜ್ಞಾನ ತತ್ವ (Principles of Management) ಗಳಿಗೆ ತಳಹದಿಯನ್ನು ಒದಗಿಸಿಕೊಟ್ಟಂಥ ಹೆನ್ರಿ ಫಾಯೋಲ್ “General and Industrial Management (1916) ಎನ್ನುವ ಪುಸ್ತಕದಲ್ಲಿ 14 ತತ್ವಗಳನ್ನು ಪ್ರಸ್ತಾಪಿಸಿದ್ದಾರೆ. 1. ಕಾರ್ಯಗಳ ವಿಂಗಡಣೆ (Division of Work) 2. ಅಧಿಕಾರ ಮತ್ತು ಜವಾಬ್ದಾರಿ (Authority and Responsibility) 3. ಶಿಸ್ತು (Discipline) 4. ಆಜ್ಞೆಯಲ್ಲಿ ಏಕತೆ (Unity of Command) 5. ನಿರ್ದೇಶನದಲ್ಲಿ ಏಕತೆ (Unity of Direction) 6. ಸಹೋದ್ಯೋಗಿಗಳ ಹಿತಾಸಕ್ತಿಗಳು (Subordination of Individual Interest) 7. ಗೌರವ ಸಂಭಾವನೆ (Remuneration) 8. ಕೇಂದ್ರೀಕರಣದ ಸ್ವರೂಪ (The Degree of Centralization) 9. ಪ್ರಮಾಣೀಕೃತ ಮತ್ತು ಸಶಕ್ತ ನಿರ್ದೇಶನಗಳು (Scalar Chain) 10. ವ್ಯವಸ್ಥಿತ ಆಜ್ಞೆಗಳು (Order) 11. ನ್ಯಾಯ ಸಂಹಿತೆ (Equity) 12. ಸಹೋದ್ಯೋಗಿಗಳ ಸ್ಥಿರ ಅಧಿಕಾರಾವಧಿ (Stability of Tenure of Personal) 13. ಮೊದಲ ಹೆಜ್ಜೆ ಅಥವಾ ಪ್ರಾರಂಭ (Initiative) 14. ನೈತಿಕ ಆದರ್ಶ ಅಥವಾ ಸ್ಥೈರ್ಯ (Esprit de Corps-Morale)
1. ಕಾರ್ಯಗಳ ವಿಂಗಡಣೆ (Division of Work) : This principle of management is based on the theory that if workers are given a specialized task to do, they will become skilful and more efficient in it than they had a broader range of tasks. Therefore, a process where everyone has a specialized role will be an efficient one.
ಯಾವುದೇ ಕೆಲಸವಿರಲಿ ನಿರಂತರವಾಗಿ ಅದರಲ್ಲಿ ತೊಡಗಿಸಿಕೊಂಡಾಗ ವ್ಯಕ್ತಿಯ ಕಾರ್ಯದಲ್ಲಿ ಕೌಶಲ್ಯತೆ ಮತ್ತು ಕ್ಷಮತೆ ಬರುತ್ತದೆ. ಆದ್ದರಿಂದ ನಿರಂತರವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಈ ತತ್ವದ ಮಹತ್ವ.
ಹೊಲೆಗಂಡಲ್ಲದೆ ಪಿಂಡದ | ನೆಲೆಗಾಶ್ರಯವಿಲ್ಲ || ಜಲ-ಬಿಂದುವಿನ | ವ್ಯವಹಾರವೊಂದೇ || ಆಶೆಯಾಮಿಷರೋಷಹರುಷ | ವಿಷಯಾದಿಗಳೆಲ್ಲಾ ಒಂದೇ || ಏನನೋದಿ ಏನಕೇಳಿ | ಏನುಫಲ? || ಕುಲಜನೆಂಬುದಕ್ಕೆ | ಆವುದು ದೃಷ್ಟ? || ಸಪ್ತಧಾತುಸಮಂ ಪಿಂಡಂ | ಸಮಯೋನಿ ಸಮುದ್ಭವಂ || ಆತ್ಮಜೀವಸಮಾಯುಕ್ತಂ | ವರ್ಣಾನಾಂ ಕಿಂ ಪ್ರಯೋಜನಂ? || ಎಂದುದಾಗಿ: ಕಾಸಿ ಕಮ್ಮಾರನಾದ | ಬೀಸಿ ಮಡಿವಾಳನಾದ || ಹಾಸನಿಕ್ಕಿ ಸಾಲಿಗನಾದ | ವೇದವನೋದಿ ಹಾರುವನಾದ || ಕರ್ಣದಲ್ಲಿ ಜನಿಸಿದವರುಂಟೆ | ಜಗದೊಳಗೆ? || ಇದು ಕಾರಣ | ಕೂಡಲಸಂಗಮದೇವಾ || ಲಿಂಗಸ್ಥಲವನರಿದವನೆ | ಕುಲಜನು || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-55 / ವಚನ ಸಂಖ್ಯೆ-590)
ಇದು ಹೆನ್ರಿ ಫಾಯೋಲ್ ಕೊಟ್ಟ ನಿರ್ವಣಾ ವಿಜ್ಞಾನ ತತ್ವ (Principles of Management) ಗಳ 14 ತತ್ವಗಳಲ್ಲಿ ಮೊದಲನೇಯ ತತ್ವ. ವೃತ್ತಿಕೌಶಲ್ಯದ ಮಹತ್ವವನ್ನು ತಿಳಿಸುವ ಈ ತತ್ವವನ್ನು 12 ನೇ ಶತಮಾನದಲ್ಲಿ ಬಸವಾದಿ ಶರಣರು ಕಂಡುಕೊಂಡಿದ್ದರು ಎನ್ನುವುದಕ್ಕೆ ಬಸವಣ್ಣನವರ ಈ ವಚನ ಸಾಕ್ಷೀಭೂತವಾಗಿದೆ. ಎಂಥ ಅದ್ಭುತ ಕೌಶಲ್ಯಾಭಿವೃದ್ಧಿಯ (Skill Development) ಸಂಕೇತವನ್ನು ಬಸವಣ್ಣನವರು ನಮಗೆ ತಿಳಿಸಿಕೊಟ್ಟದ್ದಾರೆ. ಸಮಷ್ಠಿಯ ಸರ್ವಹಿತ ಮತ್ತು ಸಮಾನತೆಯನ್ನು ಸಾರುವ ಈ ವಚನ ವೃತ್ತಿ ಕೌಶಲ್ಯದ ಮಹತ್ವವನ್ನು ತಿಳಿಸುತ್ತದೆ. ಹುಟ್ಟಿನಿಂದ ಯಾರೂ ಕೌಶಲ್ಯವನ್ನು ಹೊತ್ತುಕೊಂಡು ಬಂದಿರುವುದಿಲ್ಲ ಮತ್ತು ಯಾವ ಜಾತಿಯಲ್ಲಿ ಹುಟ್ಟಿದ್ದಾರೆ ಅನ್ನುವುದರ ಮೇಲೂ ಅವಲಂಬಿತವಾಗಿರುವುದಿಲ್ಲ ಎನ್ನುವುದನ್ನು ಹೇಳುತ್ತದೆ. ಕಮ್ಮಾರ, ಮಡಿವಾಳ, ಸಾಲಿಗ, ಬ್ರಾಹ್ಮಣರು ತಮ್ಮ ತಮ್ಮ ಕೆಲಸಗಳನ್ನು ಶ್ರದ್ಧೆಯಿಂದ ನಿರಂತರವಾಗಿ ಮಾಡತಾ ಇದ್ದರೆ ಅದರಲ್ಲಿ ಕೌಶಲ್ಯತೆಯನ್ನು ಪಡೆಯುತ್ತಾರೆ.
12 ನೇ ಶತಮಾನದಲ್ಲಿ ಆಯಗಾರರು ಎನ್ನುವ ಈ ಸಮಾಜೊ-ಧಾರ್ಮಿಕ ಆರ್ಥಿಕ ಪದ್ಧತಿಯಿಂದ ಎಲ್ಲ ವ್ಯವಹಾರಗಳೂ ಹಳ್ಳಿಯಲ್ಲಿಯೇ ಹುಟ್ಟಿ ಹಳ್ಳಿಯಲ್ಲಿಯೇ ಕೊನೆಗೊಳ್ಳುತ್ತಿದ್ದವು. ಉತ್ಪಾದನೆ ಮತ್ತು ವಿತರಣೆ ಎಲ್ಲವೂ ಒಂದಕ್ಕೊಂದು ಭಾವನಾತ್ಮಕವಾಗಿ ಹೆಣೆದುಕೊಂಡಿದ್ದವು. ಇದನ್ನೇ ಆರ್ಥಶಾಸ್ತ್ರದಲ್ಲಿ “ಪ್ರಾಚೀನ ಆರ್ಥಿಕ ಮಾದರಿ” (Primitive Model of Economics) ಎಂದು ಹೇಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅರ್ಥಶಾಸ್ತ್ರಜ್ಞರು “ಏಷಿಯಾ ಖಂಡದ ಉತ್ಪಾದನಾ ಮಾದರಿ” (Asiatic Method of Production) ಎಂತಲೂ ವ್ಯಾಖ್ಯಾನಿಸುತ್ತಾರೆ.
2. ಅಧಿಕಾರ ಮತ್ತು ಜವಾಬ್ದಾರಿ (Authority and Responsibility) : Authority is the power to give orders and get it obeyed or in other words it is the power to take decisions. This principle looks at the concept of managerial authority. It looks at how authority is necessary in order to ensure that managerial commands are carried out.
ಅಧಿಕಾರ: ಆಜ್ಞೆಗಳನ್ನು ನೀಡುವುದು ಮತ್ತು ಆ ಅಜ್ಞೆಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುವುದು. ಒಂದರ್ಥದಲ್ಲಿ ನಿರ್ಧಾರವನ್ನು ಮಾಡುವುದು ಮತ್ತು ಸಂಸ್ಥೆಯ ಗುರಿಗಳು ಮತ್ತು ಉದ್ದೇಶಗಳತ್ತ ದಾಪುಗಾಲು ಹಾಕುವತ್ತ ಪ್ರೇರೇಪಿಸು ಸಿರ್ದೇಶನಗಳು.
ಲಿಂಗನಯನದಲ್ಲಿ ನೋಡುತ್ತ | ಲಿಂಗಜಿಹ್ವೆಯಲ್ಲಿ ನುಡಿವುತ್ತ || ಲಿಂಗಹಸ್ತದಲ್ಲಿ ಮುಟ್ಟುತ್ತ | ಲಿಂಗನಾಸಿಕದಲ್ಲಿ ವಾಸಿಸುತ್ತ || ಲಿಂಗಸ್ತೋಸ್ತ್ರದಲ್ಲಿ ಕೇಳುತ್ತ | ಲಿಂಗಪಾದದಲ್ಲಿ ನಡೆವುತ್ತ || ಸರ್ವಾಂಗಲಿಂಗಮಯವಾದ | ಶರಣರ ಸಂಗಸುಖದೊಳಗೆ || ಎನ್ನನಿರಿಸಯ್ಯಾ | ಬಸವಪ್ರಿಯ ಕೂಡಲಚೆನ್ನಬಸವಣ್ಣಾ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1732 / ವಚನ ಸಂಖ್ಯೆ-1027)
ಆಜ್ಞೆಗಳನ್ನು ನೀಡುವ ಅಧಿಕಾರಿ ಹೇಗೆ ಅಧಿಕಾರ ಚಲಾಯಿಸಬೇಕೆನ್ನುವ ತತ್ವವನ್ನು ಶರಣ ಹಡಪದ ಅಪ್ಪಣ್ಣನವರು ಆಧ್ಯಾತ್ಮಿಕವಾಗಿ ನಿರೂಪಿಸಿದ್ದಾರೆ. “ಲಿಂಗ” ಎನ್ನುವ ಪದ ಅಥವಾ ತತ್ವ ಬಸವಾದಿ ಶರಣರು ಆಚಾರ ಸಂಹಿತೆಗೆ ನೀಡಿದ ಅನುಪಮ ಶಬ್ದ. ನಮ್ಮ ಪಂಚೇಂದ್ರಿಯಗಳೂ ಲಿಂಗಸ್ವರೂಪಿಯಾಗಿರಬೇಕು. ನೋಡುವ ನೋಟ, ಆಡುವ ಮಾತು, ಮುಟ್ಟುವ ಸ್ಪರ್ಷ, ಮೂಗಿಗೆ ತಲುಪುವ ವಾಸನೆ, ಕಿವಿಗೆ ಬೀಳುವ ಶಬ್ದತರಂಗಗಳು ಎಲ್ಲವೂ ಶುದ್ಧವಾಗಿರಬೇಕು. ಅದೇ ರೀತಿಯಾಗಿ ನಾವು ಅಧಿಕಾರ ಚಲಾಯಿಸುವಾಗ ಸತ್ಯಶುದ್ಧ ನಡೆ ನುಡಿ ಇರಬೇಕಾದದ್ದು ಅತ್ಯಂತ ಅವಶ್ಯಕ. ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರೂ ಸಹ ಅಧಿಕಾರ ಚಲಾಯಿಸುವಲ್ಲಿ ಅತ್ಯಂತ ವಿನಯದಿಂದ ವರ್ತಿಸುತ್ತಿದ್ದರು ಎಂದು ಅವರ ವಚನಗಳ ಮೂಲಕ ತಿಳಿದು ಬರುತ್ತದೆ. “ವಿದ್ಯಾ ವಿನಯೇನ ಭೂಷತೆ” ಎನ್ನುವ ಹಾಗೆ ಅಧಿಕಾರ ಚಲಾಯಿಸುವಾಗಲೂ ವಿನಯದಿಂದ ವರ್ತಿಸಬೇಕೆನ್ನುವ ತತ್ವವನ್ನು ನಾವು ಗಮನಿಸಬೇಕು. ಆಧುನಿಕ ನಿರ್ವಣಾ ವಿಜ್ಞಾನ (Modern Management Science) ಗಳ ಅನುಷ್ಠಾನವನ್ನು ನಮ್ಮ ಬಸವಾದಿ ಶರಣರು ಮಾಡಿದ್ದರು ಎನ್ನುವುದಕ್ಕೆ ಹಡಪದ ಅಪ್ಪಣ್ಣನವರು ಮೇಲ್ಪಂಕ್ತಿಯ ಮಾದರಿಯಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.
Responsibility means state of being accountable or answerable for any obligation, trust, debt or something or in other words it means obligation to complete a job assigned on time and in best way.
ಜವಾಬ್ದಾರಿ: ಉತ್ತರದಾಯಿತ್ವ ಮತ್ತು ಹೊಣೆಯನ್ನು ನಿಭಾಯಿಸುವ ಪ್ರಕ್ರಿಯೆ. ಒಟ್ಟಾರೆ ಹೇಳುವುದಾದರೆ ನಿಯುಕ್ತಿಗೊಂಡ ಕಾರ್ಯವನ್ನು ಯಶಸ್ವಿವಾಗಿ ನಿರ್ವಹಿಸಿ ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ನಿಗದಿತ ವೇಳೆಯಲ್ಲಿ ಮತ್ತು ಉತ್ತಮ ಮಾರ್ಗದಲ್ಲಿ ಈಡೇರಿಸುವುದು.
ಜವಾಬ್ದಾರಿ ಎನ್ನುವುದು ಮಾನವನ ಜೀವನದಲ್ಲಿ ಬರುವ ಒಂದು ಘಟ್ಟ ಅಥವಾ ತತ್ವ. ಈ ಜವಾಬ್ದಾರಿಗೆ ಎಲ್ಲರೂ ಹೆಗಲು ಕೊಟ್ಟಾಗಲೇ ಜೀವನಕ್ಕೊಂದು ಪರಿಪೂರ್ಣತೆ ಬರುವುದು. ಇಂತಹ ಅತ್ಯಂತ ಶ್ರೇಷ್ಠ ತತ್ವವನ್ನು ಅನುಸರಿಸಿದವರಲ್ಲಿ ವೀರ ಗಣಾಚಾರಿ ಮಡಿವಾಳ ಮಾಚಿದೇವರು ಅಗ್ರಗಣ್ಯರು. ಕಲ್ಯಾಣದಲ್ಲಿ ಕ್ರಾಂತಿಯಾಗಿ ಶರಣರನ್ನು ಕಗ್ಗೊಲೆ ಮಾಡಿ ವಚನಗಳನ್ನು ಸುಟ್ಟು ಹಾಕಲು ಮುಂದಾದಾಗ ಮಡಿವಾಳ ಮಾಚಿದೇವರು ತೋರಿದ ಅಪ್ರತಿಮ ಸಾಹಸ ಮತ್ತು ವಚನಗಳನ್ನು ಉಳಿಸುವ ನಿಟ್ಟಿನಲ್ಲಿ ಅವರು ತೆಗೆದುಕೊಂಡ ಜವಾಬ್ದಾರಿ ಇಂದಿಗೂ ಚಿರಸ್ಥಾಯಿಯಾದಂಥಾ ಘಟನೆ. ಬಸವಾದಿ ಶರಣರಲ್ಲಿ ಅತ್ಯಂತ ನೆಚ್ಚಿನ ಸಿಪಾಯಿಯಾಗಿದ್ದ ಮಡಿವಾಳ ಮಾಚಿದೇವರನ್ನು ಕುರಿತು ಹಲವಾರು ವಚನಗಳು ನಮಗೆ ಲಭ್ಯವಾಗಿವೆ. ಅಲ್ಲಮ ಪ್ರಭುಗಳ ಈ ವಚನ ಮಡಿವಾಳ ಮಾಚಿದೇವರ ಜವಾಬ್ದಾರಿ ತತ್ವಕ್ಕೆ ಕನ್ನಡಿ ಹಿಡಿದ ಹಾಗಿದೆ.
ಇಷ್ಟತನುವಿನ | ಘಟ್ಟಿಯ ಕರಗಿಸಿ || ಕಟ್ಟುಗ್ರದ ಕಾಮ | ಕ್ರೋಧ ಲೋಭ ಮೋಹ || ಮದ ಮತ್ಸರಗಳೆಂಬವ | ಸುಟ್ಟುರುಹಿ || ತನುವಿನ ಅವಗುಣವ ಕೆಡಿಸಿ | ಮನದ ಸಂಚಲವ ನಿಲಿಸಿ || ಸಕಲ ಕರಣಂಗಳ | ಅರಿವಿಂಗೆ ಆಹುತಿಯನಿಕ್ಕಿ || ಸುಜ್ಞಾನ ಪ್ರಭೆಯನುಟ್ಟು | ಸುಜ್ಞಾನ ಪ್ರಭೆಯ ಹೊದೆದು || ಸುಜ್ಞಾನ ಪ್ರಭೆಯ ಸುತ್ತಿ | ಸುಜ್ಞಾನ ಪ್ರಭೆಯ ಹಾಸಿ || ಮಹಾಜ್ಞಾನದಲ್ಲಿ | ನಿರ್ಭಾವ ಸಂಪನ್ನನಾದ || ಮಡಿವಾಳನ ಮಡಿಯ ಪ್ರಸಾದವ | ನಾನು ಹೊದ್ದ ಕಾರಣ || ನಿರ್ಮಳನಾದೆನು ನಿಜೈಕ್ಯನಾದೆನು | ನಿಶ್ಚಿಂತನಾದೆನು || ಇದು ಕಾರಣ | ಗುಹೇಶ್ವರಲಿಂಗದಲ್ಲಿ ತೆರಹಿಲ್ಲದಿಪ್ಪ || ಮಡಿವಾಳನ ಪ್ರಸಾದದಿಂದ | ನಿಮ್ಮ ಘನವನರಿದು || ಬದುಕಿದೆನು ಕಾಣಾ | ಸಂಗನಬಸವಣ್ಣಾ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-224 / ವಚನ ಸಂಖ್ಯೆ-939)
“ಪ್ರಭೆ” ಎನ್ನುವ ಶಬ್ದ ಅನುಭೂತಿ ಚರಿತ್ರೆಯಲ್ಲಿ ಮತ್ತು ಅನುಭಾವ ಸಾಹಿತ್ಯದಲ್ಲಿ ಅರಿವಿನ ಬೆಳಕು ಅಥವಾ ಅಂತರಂಗದ ಶುದ್ಧತೆಯನ್ನು ಸಾರುವ ಸಂದರ್ಭದಲ್ಲಿ ಬಳಸುವ ಬೆಡಗಿನ ಶಬ್ದ ಅಥವಾ ಅಲಂಕಾರಿಕ ಶಬ್ದ. ಇಂಥ ಬೆಡಗಿನ ಶಬ್ದವನ್ನು ಅಲ್ಲಮ ಪ್ರಭುಗಳು ಮಡಿವಾಳ ಮಾಚಿದೇವರನ್ನು “ಸುಜ್ಞಾನ ಪ್ರಭೆ” ಗೆ ಹೋಲಿಸುತ್ತಾರೆ. ಜವಾಬ್ದಾರಿಯನ್ನು ಹೊರುವ ಸಮಯ ಬಂದಾಗ ಮಡಿವಾಳ ಮಾಚಿದೇವರು ಸಮರ್ಥವಾಗಿ ನಿರ್ವಹಿಸಬಲ್ಲರು ಎನ್ನುವುದನ್ನು ಸಾಂಕೇತಿಕವಾಗಿ ಬಣ್ಣಿಸಿದ್ದಾರೆ ಅಲ್ಲಮ ಪ್ರಭುಗಳು ಈ ವಚನದಲ್ಲಿ. ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ತನುವೆಂಬ ಘಟ್ಟಿಯನ್ನೇ ಕರಗಿಸಬೇಕು. ಅರಿಷಡ್ವರ್ಗಗಳನ್ನು ಸುಟ್ಟು ಹಾಕಿಕೊಳ್ಳಬೇಕು. ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಸುಜ್ಞಾನ ಪ್ರಭೆಯೆಂಬ ಜಾವಾಬ್ದಾರಿಯನ್ನು ನಿರ್ವಹಿಸಬೇಕಾದ ಸಂಧರ್ಭದಲ್ಲಿ ಜವಾಬ್ದಾರಿಯನ್ನೇ ಮೈದುಂಬ ಸುತ್ತಿಕೊಳ್ಳಬೇಕು. ಅದನ್ನೇ ಹಾಸಿಗೆಯನ್ನಾಗಿ ಮಾಡಿಕೊಳ್ಳಬೇಕು. ಜವಾಬ್ದಾರಿಯನ್ನೇ ಸುತ್ತಿಕೊಂಡು, ಹಾಸಿಕೊಂಡು ಬದುಕಿದಂಥಾ ಮಡಿವಾಳ ಮಾಚಿದೇವರನ್ನು ಕಂಡು ನಾನು ಬದುಕಿದೆನು ಅಂತ ಅಲ್ಲಮ ಪ್ರಭುಗಳು ಹೇಳಿದ್ದಾರೆ. ಜವಾಬ್ದಾರಿ ಎನ್ನುವ ತತ್ವಕ್ಕೆ ಅದ್ಭುತ, ಅನುಪಮ, ಶ್ರೇಷ್ಠ ಚಿಂತನೆಯ ದೃಷ್ಟಾಂತ ಮತ್ತು ನಿದರ್ಶನವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ ಅಲ್ಲಮ ಪ್ರಭುಗಳು.
ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ಜವಾಬ್ದಾರಿ ತತ್ವವನ್ನು ಅಕ್ಷರಶಃ ಆಚರಣೆಗೆ ತಂದವರು ಮತ್ತು ಅಂಥ ಒಂದು ಬದ್ಧತೆಗೆ ಯಾವಾವಗಲೂ ಕಟ್ಟು ಬಿದ್ದವರು ನಮ್ಮ ಬಸವಾದಿ ಶರಣರು. ಇದನ್ನು ಅನುಸರಿಸುವ ದೊಡ್ಡ ಜವಾಬ್ದಾರಿ ಆಧುನಿಕ ಪ್ರಪಂಚದ ಎಲ್ಲ ಸಂಸ್ಥೆಗಳ ಮತ್ತು ಅಧಿಕಾರಿ ವರ್ಗದವರ ಹೆಗಲ ಮೇಲೆ ಇದೆ.
3. ಶಿಸ್ತು (Discipline) : This principle relates to the fact that discipline is needed within an organization for it to run effectively. Organizational rules, philosophies and structures need to be met.
ಸಂಸ್ಥೆಯ ತತ್ವಗಳು ಮತ್ತು ಕಾರ್ಯತಂತ್ರಗಳನ್ನು ಮೈಗೂಡಿಸಿಕೊಂಡು ಪರಿಣಾಮಕಾರಿಯಾಗಿ ಗುರಿ ಮತ್ತು ಉದ್ದೇಶಗಳನ್ನು ತಲುಪುವಂತೆ ಮಾಡುವುದು. ಸಂಸ್ಥೆಯ ಕಟ್ಟಳೆಗಳನ್ನು ಮತ್ತು ತತ್ವ ಚಿಂತನೆಗಳನ್ನು ಚಾಚೂ ತಪ್ಪದೇ ಪಾಲಿಸುವುದು. ಚಾಟಿಯೇಟನ್ನು ನೀಡುವುದರಲ್ಲಿ ಅಂಬಿಗರ ಚೌಡಯ್ಯನವರು ನಿಸ್ಸೀಮರು. ಅತ್ಯಂತ ಕಟುವಾದ ಮತ್ತು ತೀಕ್ಷ್ಣ ವಿಮರ್ಶೆಗೆ ಅಂಬಿಗರ ಚೌಡಯ್ಯನವರು ಹೆಸರುವಾಸಿಯಾಗಿದ್ದಾರೆ. ಅನ್ಯರ ತಪ್ಪನ್ನು ಎತ್ತಿ ತೋರಿಸುವುದು ಸುಲಭ. ಆದರೆ ಅಂಬಿಗರ ಚೌಡಯ್ಯನವರು ಒಪ್ಪಿನ ದಾರಿಯನ್ನು ತೋರಿ ಶಿಸ್ತಿನಲ್ಲಿ ಬದುಕು ನಡೆಸಿದ ಧೀರ ಗಣಾಚಾರಿಗಳು. ಅವರ ಒಂದು ವಚನ ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ಶಿಸ್ತಿನ ತತ್ವವನ್ನು ಅಕ್ಷರಶಃ ಪ್ರತಿಬಿಂಬಿಸುತ್ತದೆ.
[ನಂಬಿಯಣ್ಣ] ಮಾಡುವ ಭಕ್ತಿ | ನಾಡೆಲ್ಲ ಮಾಡಬಹುದಯ್ಯ || ಕುಂಬಾರ ಗುಂಡಯ್ಯ ಮಾಡುವ ಭಕ್ತಿ | ಊರೆಲ್ಲ ಮಾಡಬಹುದಯ್ಯ || ಇದೇನು ದೊಡ್ಡಿತ್ತೆಂಬರು : ಸರ್ವರಿಗೂ ವಶವಾಗದ ಭಕ್ತಿ | ಅವರ ಮನ-ಜ್ಞಾನದಂತೆ ಇರಲಿ || ಶರಣಾರ್ಥಿ : ಈ ವಸುಧೆಯೊಳಗೆ | ಶುದ್ಧಭಕ್ತಿಯನರಿತು || ನಡೆದುದು ಬಟ್ಟೆಯಾಗದೆ? | ನುಡಿದುದು ಸಿದ್ಧಿಯಾಗದೆ? || ದೇಹಕ್ಕೆ ಕಷ್ಟ-ನಷ್ಟ ರೋಗ-ರುಜೆಗಳು | ಬಂದು ಅಟ್ಟಿ ಮುಟ್ಟಿದವಾಗಿ || ಧೃಢವಾಗಿದ್ದು ಶರಣನ | ಮನವು ನಿಶ್ಚಯಿಸಿ || ಧೃಢಶೀಲಂಗಳಂ ಬಿಡದೆ ನಡೆವಾತ | ದೊಡ್ಡ ಭಕ್ತನೆಂದಾತ || ನಮ್ಮ | ಅಂಬಿಗರ ಚೌಡಯ್ಯ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-961 / ವಚನ ಸಂಖ್ಯೆ-166)
ಆಧ್ಯಾತ್ಮಿಕ ಲೋಕದಲ್ಲಿ ಭಕ್ತಿಯೆನ್ನುವುದು ಅಂತರಂಗದ ಅರಿವಿನ ಸಂಕೇತ. ಯಾವಾಗ ನಮ್ಮ ನಡೆ, ನುಡಿ, ಅಚಾರ, ವಿಚಾರಗಳಲ್ಲಿ ಭಕ್ತಿಯ ಅರಿವಾಗುತ್ತದೆಯೋ ಸಮಷ್ಠಿಯ ಜೀವರಾಶಿಗಳಲ್ಲಿ ಶಿಸ್ತು ಎನ್ನುವ ಭಕ್ತಿಯ ಅಂಕುರಾರ್ಪಣವಾಗುತ್ತದೆ. ಇದನ್ನೇ ದಿಟ್ಟ ಗಣಾಚಾರಿ ಅಂಬಿಗರ ಚೌಡಯ್ಯನವರು ತಮ್ಮ ಈ ವಚನದಲ್ಲಿ ನಿರೂಪಿಸಿದ್ದಾರೆ. ಶಿಸ್ತಿನಿಂದ ಶುದ್ಧ ಭಕ್ತಿಯ ಮಾಡಿದಲ್ಲಿ ಅಂದರೆ ನಮ್ಮ ನಮ್ಮ ಕರ್ತವ್ಯಗಳನ್ನು ನಿರ್ವಹಿಸಿದಲ್ಲಿ ಭವಿಯಿಂದ ಭಕ್ತನಾಗುವುದರಲ್ಲಿ ಸಂಶಯವೇ ಇಲ್ಲ. ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ವರ್ಗದವರಿಗೂ ಅನ್ವಯವಾಗುವ ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ಶಿಸ್ತಿನ ತತ್ವ.
4. ಆಜ್ಞೆಯಲ್ಲಿ ಏಕತೆ (Unity of Command) : There should be a clear chain of command in place within an organization. An employee should know exactly whose instructions to follow.
ಸಂಸ್ಥೆಯಲ್ಲಿರುವ ವರ್ಗ ಶ್ರೇಣಿ (Hierarchy) ಗಳನ್ನು ಗೌರವಿಸುವುದು. ಇದು ಆಜ್ಞೆಗಳನ್ನು ಕೊಡುವವರಿಗೂ ಮತ್ತು ಸ್ವೀಕರಿಸುವವರಿಗೂ ಅನ್ವಯವಾಗುತ್ತದೆ. ಕಾರ್ಯನಿರ್ವಹಿಸುವ ನೌಕರರಿಗೆ ಯಾರಿಂದ ಆಜ್ಞೆಗಳನ್ನು ಸ್ವೀಕರಿಸಬೇಕು ಹಾಗೆಯೇ ಅಧಿಕಾರಿಗಳು ಯಾರಿಗೆ ಆಜ್ಞೆ ನೀಡಬೇಕೆಂಬುದನ್ನು ತಿಳಿಸುವ ತತ್ವ ಇದು.
ಅಂಧಕನ ಕೈಯ ಅಂಧಕ | ಹಿಡಿದಂತಿರಬೇಕು || ಮೂಗನ ಕೈಯಲ್ಲಿ ಕಾವ್ಯವ | ಕೇಳಿದಂತಿರಬೇಕು || ದರ್ಪಣದೊಳಗಣ | ಪ್ರತಿಬಿಂಬದಂತೆ || ಹಿಡಿವರಿಗಳವಲ್ಲದಿರಬೇಕು | ಅಣ್ಣಾ || ಕೂರ್ಮನ ಶಿಶುವಿನ | ಸ್ನೇಹದಂತೆ ಇರಲೊಲ್ಲದೆ || ಆರೂಢಗೆಟ್ಟೆಯೋ | ಅಜಗಣ್ಣಾ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-899 / ವಚನ ಸಂಖ್ಯೆ-1095)
ಬೌದ್ಧಿಕ ಪ್ರಖರತೆಯ ಶರಣೆ ಮುಕ್ತಾಯಕ್ಕ ಮತ್ತು ಗುಪ್ತ ಶರಣ ಅಜಗಣ್ಣ ಈರ್ವರೂ ಶರಣ ಲೋಕ ಕಂಡ ಪ್ರಭುದ್ಧ ಶರಣ ಸಹೋದರ ಸಹೋದರಿಯರು. ಶರಣ ಅಜಗಣ್ಣ ಲಿಂಗೈಕ್ಯನಾದಾಗ ಅವನ ಪಾರ್ಥೀವ ಶರೀರವನ್ನು ನೋಡಿ ಅಳುತ್ತಿದ್ದ ಅಜಗಣ್ಣನ ತಂಗಿ ಶರಣೆ ಮುಕ್ತಾಯಕ್ಕರನ್ನು ಅಲ್ಲಮ ಪ್ರಭುಗಳು ಸಂತೈಸುವ ಸಂದರ್ಭದಲ್ಲಿ ನಡೆದ ಸಂವಾದ, ಸಂಭಾಷಣೆ ಅಥವಾ ಚರ್ಚೆ ಅನುಭೂತಿಚರಿತ್ರೆಯಲ್ಲಿ ನಡೆದ ಅದ್ಭುತ ಚಿಂತನೆ. ಇದರಲ್ಲಿ ಮುಕ್ತಾಯಕ್ಕನವರ ಈ ವಚನ ಆಧ್ಯಾತ್ಮಿಕ ದೃಷ್ಟಿಯಿಂದಲೂ ಮತ್ತು ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ಆಜ್ಞೆಯಲ್ಲಿ ಏಕತೆ (Unity of Command) ತತ್ವ ಸಿದ್ಧಾಂತದ ದೃಷ್ಟಿಯಿಂದಲೂ ಬಹಳ ಹತ್ತಿರವಾದಂಥ ನಿರೂಪಣೆ.
ಸಂಸ್ಥೆಯಲ್ಲಿ ಕೊಡುವ ಆಜ್ಞೆಗಳು ಅಥವಾ ನಿರ್ದೇಶನಗಳು ಯಾರಿಗೂ ನೋವನ್ನುಂಟು ಮಾಡುವಂತೆ ಇರಬಾರದು ಮತ್ತು “ಕೂರ್ಮನ ಶಿಶುವಿನಂತೆ” ಇರಬೇಕೆಂಬುದು ಆಶಯ. ಆಮೆಯು ತನ್ನ ಮರಿಯನ್ನು ಕೇವಲ ಕಣ್ಣಿನ ನೋಟದಿಂದಲೇ ಅದರ ಹಸಿವನ್ನು ನೀಗಿಸುತ್ತದೆ ಎನ್ನುವುದು ವಿಜ್ಞಾನ ಲೋಕದ ವಿಸ್ಮಯ. ಹಾಗೆಯೇ ಅಧಿಕಾರಿ ವರ್ಗದಿಂದ ಹೊರಡುವ ಆಜ್ಞೆಗಳು ಕೇವಲ ಭಾಷೆಯ ದೃಷ್ಟಿಯಿಂದಲ್ಲದೇ ಅನುಷ್ಠಾನಕ್ಕೆ ತರುವ ನೀತಿ ಮತ್ತು ಕಾನೂನು ಕಟ್ಟಳೆಗಳೂ ಸಹ ಎಲ್ಲರಿಗೂ ಸಮನಾಗಿ ಅನ್ವಯವಾಗುವಂತಿರಬೇಕು. ಆವಾಗಲೇ ಸಂಸ್ಥೆಯ ಗುರಿಗಳು ಮತ್ತು ಧೇಯೋದ್ದೇಶಗಳು ಪರಿಣಾಮಕಾರಿಯಗಿ ಈಡೇರಲು ಸಾಧ್ಯ ಎನ್ನುವುದನ್ನು ಗಮನಿಸಬೇಕು.
“ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು” Even a blind man can understand ಅನ್ನುವ ಹಾಗಿರಬೇಕು. “ಮೂಗನ ಕೈಯಲ್ಲಿ ಕಾವ್ಯ ಕೇಳಿದಂತಿರಬೇಕು” Even a dumb can understand ಅನ್ನುವ ಹಾಗಿರಬೇಕು. “ದರ್ಪಣದೊಳಗಿನ ಪ್ರತಿಬಿಂಬದಂತಿರಬೇಕು” Clearly Visible to understand ಅನ್ನುವ ಹಾಗಿರಬೇಕು. ಉನ್ನತ ಸ್ಥಾನದಲ್ಲಿರುವವರು ನೀಡುವ ಆಜ್ಞೆಗಳು ಹೇಗಿರಬೇಕೆಂಬುದನ್ನು ಈ ಆಧ್ಯಾತ್ಮದ ಸೊಗಡಿರುವ ವಚನದಿಂದ ನಾವು ತಿಳಿಯಬಹುದು.
5. ನಿರ್ದೇಶನದಲ್ಲಿ ಏಕತೆ (Unity of Direction) : The work should be organized in a way that means employees are working in harmony toward a shared objective or goal using shared method or procedure.
ಸಂಸ್ಥೆಯಲ್ಲಿರುವ ಎಲ್ಲ ವರ್ಗದ ನೌಕರರು ಸಂಘಟಿತರಾಗಿ ಸಾಮರಸ್ಯದಿಂದ ಕೆಲಸಗಳನ್ನು ಹಂಚಿಕೊಂಡು ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ಮುಟ್ಟುವುದಕ್ಕೆ ಸಿದ್ಧರಾಗಿರಬೇಕು.
ಸೊಡ್ಡಳ ಬಾಚರಸರು ಕಲ್ಯಾಣದಲ್ಲಿ ಮಹಾಮನೆಯ ದಾಸೋಹದ ಉಗ್ರಾಣದ ಮತ್ತು ಬಿಜ್ಜಳನ ಆಸ್ಥಾನದಲ್ಲಿ ಧಾನ್ಯಗಳನ್ನು ಲೆಖ್ಖ ಬರೆಯುವ ಕರಣಿಕನಾಗಿದ್ದರೆಂದು ತಿಳಿದು ಬರುತ್ತದೆ. ನೇರನುಡಿ ಮತ್ತು ಮುಖಕ್ಕೆ ಕನ್ನಡಿ ಹಿಡಿದ ಹಾಗೆ ಹೇಳುವ ದಿಟ್ಟತನಕ್ಕೆ ಸೊಡ್ಡಳ ಬಾಚರಸರು ಹೆಸರುವಾಸಿ. ಅದು ಯಾರೇ ಇರಲಿ, ಅವರು ಇದ್ದದ್ದನ್ನು ಇದ್ದಂತೆ ಮುಖಕ್ಕೇ ಹೊಡೆದ ಹಾಗೆ ಹೇಳಿಬಿಡುತ್ತಿದ್ದರು. ಇದೇ ಕಾರಣಕ್ಕೆ ಅದೆಷ್ಟೋ ಸಲ ಬಾಚರಸರು ಇತರರೊಂದಿಗೆ ನಿಷ್ಠೂರವನ್ನು ಕಟ್ಟಿಕೊಂಡ ಪ್ರಸಂಗಗಳು ಇವೆ. ಇಂಥ ಸೊಡ್ಡಳ ಬಾಚರಸರ ಒಂದು ವಚನ ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ನಿರ್ದೇಶನದಲ್ಲಿ ಏಕತೆ (Unity of Direction) ತತ್ವ ಸಿದ್ಧಾಂತವನ್ನು ನಿರೂಪಿಸುತ್ತದೆ.
ಹಿಡಿದು ಬಿಟ್ಟ ಬಳಿಕ | ಅಂತಿರಬೇಕಲ್ಲದೆ || ಇನ್ನು ಹಿಡಿದು ತಪ್ಪಿದ ವಸ್ತುವ | ಅರಸಿ ಹಿಡಿಯಲುಂಟೆ? || ಮುನಿದು ಹಾವಿನೊಳಿಟ್ಟು | ಒಸೆದು ಆನೆಯನೇರಿಸಿಹೆನೆಂದಡೆ || ಶಿವಶರಣರ ಮುನಿಸು | ತಿಳಿಯದು ನೋಡಾ || ಒಡೆದ ಮುತ್ತು | ನಾಣ್ಯಕ್ಕೆ ಸಲ್ಲದು || ಒಡೆದ ಹಾಲು | ಅಮೃತಕ್ಕೆ ಸಲ್ಲದು || ನಾವೇತಕಯ್ಯಾ | ನಿನಗಂದು || ಸೊಡ್ಡಳನ ಶರಣರು | ನಿರೂಪವ ಕೊಡಲು || ಎನ್ನ ಪರಮಾರಾಧ್ಯರು | ಸಂಗನಬಸವಣ್ಣನ ತಿಳುಹುತಿರ್ದರು || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1708 / ವಚನ ಸಂಖ್ಯೆ-834)
ಒಂದು ಸಾರಿ ನಿರ್ದೇಶನವನ್ನು ನೀಡಿದರೆ ಅದು ಬಿಲ್ಲಿನಿಂದ ಬಿಟ್ಟ ಬಾಣದಂತೆ, ಹಿಂತಿರುಗಿ ಪಡೆಯಲಾಗದು. “ಹಿಡಿದು ತಪ್ಪಿದ ವಸ್ತುವ ಅರಸಿ ಹಿಡಿಯಲುಂಟೆ?” ಎನ್ನುವ ಪದಪುಂಜವೇ ಈ ವಿಷಯವನ್ನು ಸಾರುತ್ತದೆ. ಹಾವನ್ನು ಸಾಕಿ ಸಲುಹಿ ಪ್ರೀತಿಸಿ ಆನೆಯ ಮೇಲಿರಿಸಿದರೆ ಅದು ತನ್ನ ವಿಷವನ್ನು ಕಕ್ಕುವುದನ್ನು ಬಿಡುವುದಿಲ್ಲ. ಒಡೆದ ಮುತ್ತು ವ್ಯಾಪಾರದಲ್ಲಿ ನಿಷ್ಪ್ರಯೋಜಕ ಮತ್ತು ಒಡೆದ ಹಾಲೂ ಸಹ ಅಮೃತಕ್ಕೆ ಅಪ್ರಯೋಜಕ. ಹಾಗೆಯೇ ನಿರ್ದೇಶನ ನೀಡುವಲ್ಲಿ ಜಾಗರೂಕತೆಯನ್ನು ವಹಿಸಬೇಕಾದದ್ದು ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತ ನೌಕರ ವರ್ಗದವರು ಅರ್ಥ ಮಾಡಿಕೊಳ್ಳಬೇಕು. “ಸತ್ಯಲೋಕದ ಬಾಗಿಲ ತೆರೆದುದನ್ನು ಕಂಡು ಧನ್ಯನಾದೆನು” ಎನ್ನುವ ಸೊಡ್ಡಳ ಬಾಚರಸರ ನಿರೂಪದಂತೆ ನಿರ್ದೇಶನದಲ್ಲಿ ಏಕತೆ (Unity of Direction) ಯನ್ನು ಪ್ರದರ್ಶಿಸುವುದರಿಂದ ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ಸಮರ್ಥವಾಗಿ ಮುಟ್ಟಲು ಸಹಾಯಕವಾಗುತ್ತವೆ.
ಸಿದ್ಧಯ್ಯ ಪುರಾಣಿಕ ಅವರು ಬರೆದ “ಶರಣ ಚರಿತಾಮೃತ” ದಲ್ಲಿ ಸೊಡ್ಡಳ ಬಾಚರಸರ ಶರಣ ಧರ್ಮಪಾಲನೆಯನ್ನು ಅದ್ಭುತವಾಗಿ ಚಿತ್ತರಿಸಿದ್ದಾರೆ. ತನ್ನ ಕಾಲದ ಬೆಳಗಿನ ಬಳಗದಲ್ಲಿ ತಾನು ಬದುಕಿದ್ದುದು ತನ್ನ ಭಾಗ್ಯವೆಂದೇ ಬಾಚರಸರು ಭಾವಿಸಿದ್ದರು. ತನ್ನ ಕಣ್ಣೆದುರಿಗೇ ಸತ್ಯಲೋಕದ ಬಾಗಿಲ ತೆರೆದುದನ್ನು ಕಂಡು ಧನ್ಯನಾದವನು ಅಂತಾ ಬರಿತಾರೆ ಸಿದ್ಧಯ್ಯ ಪುರಾಣಿಕ ಅವರು.
6. ಸಹೋದ್ಯೋಗಿಗಳ ಹಿತಾಸಕ್ತಿಗಳು (Subordination of Individual Interest) : The interests of the organization as a whole should take precedence over the interests of any individual employee or group of employees. This encourages a team spirit and collective mentality of all for one and one for all.
ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲರ ಹಿತಾಸಕ್ತಿಯನ್ನು ಗಮನಿಸಬೇಕಾದದ್ದು ಎಲ್ಲರ ಕರ್ತವ್ಯ. ಇದು ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ತಲುಪುವಲ್ಲಿ ಮಾನಸಿಕ ಸಿದ್ಧತೆಯನ್ನು ಕಲ್ಪಿಸುವ ಮಾಧ್ಯಮ.
ಒಂದು ಸಂಸ್ಥೆಯ ಆಸ್ತಿ ಅಂದರೆ ಅಲ್ಲಿ ಕೆಲಸ ಮಾಡುವ ಎಲ್ಲ ಸ್ಥರದ ನೌಕರರು. ಸಂಸ್ಥೆಯ ಗುರಿ ಮತ್ತು ಧೇಯೋದ್ದೇಶಗಳು ಈಡೇರಬೇಕಾದರೆ ಅವರ ಸಾಮರ್ಥ್ಯ ಮತ್ತು ಕೆಲಸವನ್ನು ಗೌರವಿಸಸಬೇಕಾದದ್ದು ಎಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ 12 ನೇ ಶತಮಾನದಲ್ಲಿ ಬಸವಾದಿ ಶರಣರು ಇಂಥ ಒಂದು ಬದ್ಧತೆಗೆ ಒಳಗಾದದ್ದನ್ನು ನಾವು ಕಾಣಬಹುದು. ಬಸವಣ್ಣನವರ ಇಂಥ ಒಂದು ವಚನ ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ಸಹೋದ್ಯೋಗಿಗಳ ಹಿತಾಸಕ್ತಿ (Subordination of Individual Interest) ತತ್ವ ಸಿದ್ಧಾಂತವನ್ನು ನಿರೂಪಿಸುತ್ತದೆ.
ದೇವಸಹಿತ ಭಕ್ತ | ಮನೆಗೆ ಬಂದಡೆ || ಕಾಯಕವಾವುದೆಂದು | ಬೆಸಗೊಂಡೆನಾದಡೆ || ನಿಮ್ಮಾಣೆ ನಿಮ್ಮ | ಪುರಾತರಾಣೆ || ತಲೆದಂಡ ತಲೆದಂಡ | ಕೂಡಲಸಂಗಮದೇವಾ || ಭಕ್ತರಲ್ಲಿ ಕುಲವನರಸಿದಡೆ | ನಿಮ್ಮ ರಾಣಿವಾಸದಾಣೆ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-44 / ವಚನ ಸಂಖ್ಯೆ-453)
ಬಸವಣ್ಣನವರ ಅತಿ ದೊಡ್ಡ ಕನಸು ಅಂದರೆ ಹಸಿವು ಮುಕ್ತ ಸಮಾಜ. ಇದೇ 12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಪಿಲ್ಲರ್ ಅಥವಾ ಮೂಲಸ್ಥಂಭ. ಇದಕ್ಕಾಗಿ ಅವರು ಕೊಟ್ಟ ಎರಡು ಅದ್ಭುತ ತತ್ವಗಳು “ಕಾಯಕ” ಮತ್ತು “ದಾಸೋಹ”. ಬಸವ ಕಲ್ಯಾಣದಲ್ಲಿ “ಬಂದವರ ಓಣಿ” “ಗಂಜೀಕೆರೆ”, “ಮಜ್ಜಿಗೆ ಓಣಿ” ಅಂತ ಇದ್ದವು. ಬಂದವರಿಗೆ ಅಂಬಲಿ, ಮಜ್ಜಿಗೆ, ನೀರು ಕೊಟ್ಟು ಸತ್ಕರಿಸುತ್ತಿದ್ದರು.
ಇನ್ನು ಕಾಯಕಕ್ಕೆ ಇಂಗ್ಲೀಷಿನಲ್ಲಿ ಪರ್ಯಾಯ ಶಬ್ದವೇ ಇಲ್ಲ, at best we can say “Work”. ಬಸವಣ್ಣನವರು ಕಾಯಕಕ್ಕೆ ಕೊಡುವ Definition ಅದ್ಭುತ. ಕಾಯಕದ Definition ಅಂದರೆ
Ø Self-Responsibility : ತನ್ನನ್ನು ತಾನು ಸಂರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ. Ø Family Responsibility : ತನ್ನ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ. Ø Social Responsibility : ಜಗತ್ತಿನ ಎಲ್ಲ ಚರಾಚರ ವಸ್ತುಗಳ ಜವಾಬ್ದಾರಿ.
ಸಕಲ ಜೀವಾತ್ಮರಿಗೆ ಲೇಸನು ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು ಎನ್ನುವುದು ಶ್ರೇಣೀಕೃತ ಸಮಾಜದ ಕುಲ ಜಾತಿಯನ್ನು ಮೀರಿದ ತತ್ವ. ಕಾಯಕವನ್ನು ದೈವತ್ವವನ್ನು ಹೋಲಿಸ್ತಾರೆ. ಅದು ನೈತಿಕತೆಯಿಂದ ಕೂಡಿರಬೇಕು ಮತ್ತು ಕಾಯಕ ಇಡೀ ಸಮಾಜಕ್ಕೆ ಉಪಯೋಗ ಆಗಬೇಕು. ಎರಡು ಆಣೆ ಮಾಡತಾರೆ ಬಸವಣ್ಣನವರು. ಒಂದು ಪುರಾತರು ಮತ್ತೊಂದು ರಾಣೀವಾಸ. ಆಣೆ ಮಾಡಬೇಕಾದರೆ ನಾವು ತಂದೆ ತಾಯಿಯ ಮೇಲೆ ಅಥವಾ ಕುಲದೇವರ ಮೇಲೆ ಮಾಡುತ್ತೇವೆ. ಭಯ ಭಕ್ತಿ ಇದ್ದವರ ಮೇಲೆ ಮಾತ್ರ ನಾವು ಮಾಡತೀವಿ. ಅಂದ್ರ ನಮ್ಮನ್ನ ನಾವು Confirm ಮಾಡಕೋಳ್ಳುತ್ತೇವೆ. ಪುರಾತರು ಅಂದ್ರೆ ಹಿರಿಯರು, ಇನ್ನೂ ಮುಂದೆ ಹೋದ್ರೆ ಪಂಚೇಂದ್ರಿಯಗಳು ಮತ್ತು ಪಂಚ ತತ್ವಗಳು. ಪಂಚೇಂದ್ರಿಯಗಳು ಅಂದರೆ ದೃಷ್ಟಿ, ಶ್ರವಣ, ವಾಸನೆ, ರುಚಿ ಮತ್ತು ಸ್ಪರ್ಷ. ಪಂಚತತ್ವಗಳು ಅಂದರೆ ವಾಯು, ಅಗ್ನಿ, ಆಕಾಶ, ಭೂಮಿ ಮತ್ತು ನೀರು. ಅಂದರೆ ನಮ್ಮನ್ನು ಸೃಷ್ಟಿ ಮಾಡಿದ ಮತ್ತು ಸಮಷ್ಠಿಯ ಮೇಲೆ ಆಣೆ ಮಾಡತಾರೆ. ಎಂಥ ಪ್ರಭುದ್ಧ ಯೋಚನೆ. ಇನ್ನು ರಾಣೀವಾಸ ಅಂದ್ರೆ ಅದು ಪಾವರ್ ಸೆಂಟರ್. ಇವೆಲ್ಲದರ ಮೇಲೆ ಬಸವಣ್ಣನವರು ಆಣೆ ಮಾಡಿ ಹೇಳತಾರೆ. “ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ” ಮನೆಗೆ ಬಂದವರ ಕಾಯಕವನ್ನು ನಾನು ಕೇಳುವುದಿಲ್ಲ. ಅಂದರೆ ಕಾಯಕಕ್ಕೆ ಬಸವಣ್ಣನವರು ಕೊಟ್ಟಿರುವ ಮಹತ್ವವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇದನ್ನೇ ಸಂಸ್ಥೆಯಲ್ಲಿರುವ ನೌಕರರನ್ನೂ ಸಮಾನ ಗೌರವದಿಂದ ಕಾಣಬೇಕೆನ್ನುವುದು. ಅವರ ಹಿತಾಸಕ್ತಿಗಳನ್ನು ಕಾಪಾಡಬೇಕೆನ್ನುವುದು. “ಭಕ್ತರಲ್ಲಿ ಕುಲವನರಸಿದಡೆ ನಿಮ್ಮಾಣೆ” ಭಕ್ತರು ಅಂದ್ರೆ ಸಾಕ್ಷಾತ್ ಸಂಗಮನೇ ಅಂತಾರೆ ಬಸವಣ್ಣ. ಇದು ನೌಕರರನ್ನು ಗೌರವದಿಂದ ಕಾಣುವ ತತ್ವ. ಅವರಲ್ಲಿ ನಾನು ಕುಲವನ್ನು ಅರಸುವುದಿಲ್ಲ ಎಂಬ ಅಗಾಧ ಸಂದೇಶವನ್ನು ಈ ವಚನ ನೀಡುತ್ತದೆ. ಆಯಗಾರರ ಪರಿಕಲ್ಪನೆಯ ವಚನವಿದು. ಎಲ್ಲ ಸ್ಥರದ ನೌಕರ ವರ್ಗದವರನ್ನು ಸಮಾನ ರೀತಿಯಲ್ಲಿ ಕಾಣುವ ತತ್ವ. ಇದು ನಮ್ಮ 12 ನೇ ಶತಮಾನದ ಶರಣರನ್ನು ದೈವತ್ವದಿಂದ ಕಾಣುವ ತತ್ವದ ಮಹತ್ವ ಅದೂ ಇಂದಿಗೂ ಪ್ರಸ್ತುತ.
7. ಗೌರವ ಸಂಭಾವನೆ (Remuneration) : In order to motivate and be fair to employees, they should be paid a reasonable rate for the work they carry out. An organization that underpays will struggle to attract quality workers who are motivated.
ಎಲ್ಲ ಕಾರ್ಯಗಳಿಗೆ ಅವರವರ ಕಾರ್ಯಕ್ಕೆ ತಕ್ಕಂತೆ ಸಂಭಾವನೆ ಸಿಗುವ ವ್ಯವಸ್ಥೆಯನ್ನು ಸಂಸ್ಥೆಗಳು ಮಾಡಬೇಕಾಗುತ್ತದೆ. ಇದು ಅತಿ ಮುಖ್ಯವಾದ ತತ್ವ. ಪ್ರಪಂಚದ ಎಲ್ಲ ಸಂಸ್ಥೆಗಳ ಯಶಸ್ಸಿನ ಗುಟ್ಟೆಂದರೆ ಅವರ ನೌಕರರಿಗೆ ಕೊಡುವ ನಿರ್ಧಾರಿತ ಮೊತ್ತ ಮತ್ತು ನಿರ್ಧಾರಿತ ಸಮಯದಲ್ಲಿ ಸಂಬಳದ ವಿತರಣೆ.
ಎಲ್ಲಾರು ಮಾಡುವುದು ಹೊಟ್ಟಗಾಗಿ ಗೇಣು ಬಟ್ಟೆಗಾಗಿ ಅಂತಾ ದಾಸ ಸಾಹಿತ್ಯದ ಶ್ರೇಷ್ಠ ದಾಸರಲ್ಲಿ ಒಬ್ಬರಾದ ಕನಕದಾಸರು ಹೇಳುವ ಹಾಗೆ ಸಂಭಾವನೆ ಪ್ರಮುಖ ವಿಷಯ.
ಎಲ್ಲಾರು ಮಾಡುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ವೇದಶಾಸ್ತ್ರ ಪಂಚಾಂಗವ | ಓದಿಕೊಂಡು || ಅನ್ಯರಿಗೆ ಬೋಧನೆಯ ಮಾಡುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ಚಂಡಭಟರಾಗಿ ನಡೆದು | ಕತ್ತಿ ಢಾಲು ಕೈಲಿ ಹಿಡಿದು || ಖಂಡ ತುಂಡ ಮಾಡುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ಅಂಗಡಿ ಮುಂಗಟ್ಟನ್ಹೂಡಿ | ವ್ಯಂಗ್ಯ ಮಾತುಗಳನ್ನಾಡಿ || ಭಂಗ ಬಿದ್ದು ಗಳಿಸುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ಕುಂಟೆ ತುದಿಗೆ ಕೊರಡು ಹಾಕಿ | ಹೆಂಟೆ ಮಣ್ಣು ಸಮನು ಮಾಡಿ || ರೆಂಟೆ ಹೊಡೆದು ಬೆಳೆಸುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ಬೆಲ್ಲದಂತೆ ಮಾತಾನಾಡಿ | ಎಲ್ಲರನ್ನು ಮರುಳು ಮಾಡಿ || ಸುಳ್ಳು ಬೊಗಳಿ ತಿಂಬುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ಕೊಟ್ಟಣವನು ಕುಟ್ಟಿಕೊಂಡು | ಕಟ್ಟಿಗೆಯನು ಹೊತ್ತುಕೊಂಡು || ಕಷ್ಟ ಮಾಡಿ ಉಣ್ಣುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ತಾಳ ದಂಡಿಗೆ ಶ್ರುತಿ ಮೇಳ | ತಂಬೂರಿಯ ಹಿಡಿದುಕೊಂಡು || ಸೂಳೆಯಂತೆ ಕುಣಿಯುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ಸನ್ಯಾಸಿ ಜಂಗಮ ಜೋಗಿ | ಜಟ್ಟಿ ಮೊಂಡ ಬೈರಾಗಿ || ನಾನಾ ವೇಷಗಳೆಲ್ಲ | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ಹಳ್ಳದಲ್ಲಿ ಕುಳಿತುಕೊಂಡು | ಕಲ್ಲು ದೊಣ್ಣೆ ಹಿಡಿದುಕೊಂಡು || ಕಳ್ಳತನವ ಮಾಡುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ಅಂದಣ ಪಲ್ಲಕ್ಕಿ ಏರಿ | ಮಂದಿ ಮಾರ್ಬಲ ಕೂಡಿ || ಚಂದದಿಂದ ಮೆರೆಯುವುದು | ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ಉನ್ನತ ಕಾಗಿನೆಲೆಯಾದಿಕೇಶವನಾ | ಧ್ಯಾನವನ್ನು || ಮನಮುಟ್ಟಿ ಮಾಡುವುದು | ಮುಕ್ತಿಗಾಗಿ ಆನಂದಕಾಗಿ ||
ಪ್ರಪಂಚದ ಎಲ್ಲ ದುಡಿಯುವ ಮತ್ತು ಕಾಯಕ ವರ್ಗದವರಿಗೆ ಸೇರಬೇಕಾದದ್ದು ನಿಯತ ಕಾಲದಲ್ಲಿ ಬರುವ ಸಂಭಾವನೆ ಅಥವಾ ವರಮಾನ. ಈ ತತ್ವ ಸಿದ್ಧಾಂತವನ್ನೇ 12 ನೇ ಶತಮಾನದಲ್ಲಿ ಅಲ್ಲಮ ಪ್ರಭುಗಳ ಈ ವಚನ ಪ್ರಶ್ನಾರ್ಥಕವಾಗಿ ನಿರೂಪಿಸಿದೆ. ಅಂದರೆ ಈ ಎಲ್ಲ ಸಿದ್ಧಾಂತಗಳನ್ನೂ ನಾವು ಪಾಲಿಸಿದಾಗ ಮಾತ್ರ ಸಮಾಜವನ್ನು ಉನ್ನತ ಮಟ್ಟದಲ್ಲಿ ನೋಡಲು ಸಾಧ್ಯ ಎನ್ನುವದಕ್ಕೆ ಉದಾಹರಣೆ.
ಬೆವಸಾಯವ ಮಾಡಿ ಮನೆಯ | ಬೀಯಕ್ಕೆ ಬತ್ತವಿಲ್ಲದಿರ್ದಡೆ || ಆ ಬೆವಸಾಯದ | ಘೋರವೇತಕ್ಕಯ್ಯಾ? || ಕ್ರಯವಿಕ್ರಯವ ಮಾಡಿ | ಮನೆಯಸಂಚ ನಡೆಯದನ್ನಕ್ಕ || ಆ ಕ್ರಯವಿಕ್ರಯದ | ಘೋರವೇತಕ್ಕಯ್ಯಾ? || ಒಡೆಯನನೋಲೈಸಿ ತನುವಿಂಗೆ | ಅಷ್ಟಭೋಗವ ಪಡೆಯದಿರ್ದಡೆ || ಆ ಓಲಗದ | ಘೋರವೇತಕ್ಕಯ್ಯಾ? || ಭಕ್ತನಾಗಿ ಭವಂ | ನಾಸ್ತಿಯಾಗದಿರ್ದಡೆ || ಆ ಉಪದೇಶವ ಕೊಟ್ಟ ಗುರು | ಕೊಂಡ ಶಿಷ್ಯ || ಇವರಿಬ್ಬರ ಮನೆಯಲಿ | ಮಾರಿ ಹೊಗಲಿ || ಗುಹೇಶ್ವರನೆಂಬವನತ್ತಲೆ | ಹೋಗಲಿ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-65)
ವ್ಯವಸಾಯದಿಂದ ಉತ್ಪನ್ನವಿಲ್ಲದಿದ್ದರೆ, ವ್ಯಾಪಾರ ಮಾಡಿ ಲಾಭವಿಲ್ಲದಿದ್ದರೆ, ಒಡೆಯರನ್ನು ಸಂತುಷ್ಟಗೊಳಿಸಿ ಕಾಣಿಕೆಗಳನ್ನು ಪಡೆಯದಿದ್ದರೆ, ಗುರುವಿನಿಂದ ಪಾಠ ಕಲಿಯಲು ಅವಕಾಶವಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಅಂತೆಯೇ ಸಮಾಜದ ಎಲ್ಲ ಚರಾಚರ ವಸ್ತುಗಳಿಂದ, ಎಲ್ಲ ವರ್ಗಗಳವರ ಸಹಯೋಗದಿಂದ ಲಾಭವಾದಾಗ ಮಾತ್ರ ಸುಖಿ ಸಮಾಜ ನಿರ್ಮಾಣ ಸಾಧ್ಯ ಎನ್ನುವುದನ್ನು ಈ ವಚನದಲ್ಲಿ ನಿರೂಪಿಸಿದ್ದಾರೆ ಅಲ್ಲಮ ಪ್ರಭುಗಳು.
ಎಲ್ಲವೂ ಆಧುನಿಕ ಮತ್ತು ನಾವೇ ಶ್ರೇಷ್ಠ ಮತ್ತು ವೈಜ್ಞಾನಿಕ ಸೂತ್ರಗಳನ್ನು ಅನುಷ್ಠಾನಗೊಳಿಸಿಕೊಂಡಿದ್ದೇವೆ ಎನ್ನುವದು ನಮ್ಮ ಇಂದಿನ ಭ್ರಾಂತಿ ಎಂದರೆ ತಪ್ಪಾಗಲಾರದು. ನಾವು ಅಥವಾ ಹಿರಿಯ ಸಾಮಾಜಿಕ ಮತ್ತು ಆರ್ಥಿಕ ತಜ್ಞರು ಅಥವಾ ವಿಜ್ಞಾನಿಗಳು ಹೇಳಿರುವ ಎಲ್ಲ ಸೂತ್ರಸಿದ್ಧಾಂತಗಳನ್ನು 12 ನೇ ಶತಮಾನದ ಬಸವಾದಿ ಶರಣರು ಅನುಷ್ಠಾನಗೊಳಿಸಿ ಸುಖಿ ಮತ್ತು ಸಮ ಸಮಾಜವನ್ನು ನಿರ್ಮಾಣ ಮಾಡಿದ್ದು ನಮಗೆ ವಚನ ಸಾಹಿತ್ಯ ಮತ್ತ ಇತಿಹಾಸದಿಂದ ತಿಳಿದು ಬರುತ್ತದೆ.
8. ಕೇಂದ್ರೀಕರಣದ ಸ್ವರೂಪ (The Degree of Centralization) : This principle relates to whether decisions should be made centrally, as in from the top down, or in a more democratic way, from the bottom up. Different decision making processes are appropriate for different types of decisions.
ಆಜ್ಞೆಗಳು ಮತ್ತು ನಿರ್ಧಾರಗಳು ಕೇಂದ್ರೀಕೃತವಾಗಿದೆಯೇ ಅಥವಾ ಮೇಲಿನಿಂದ ಕೆಳಗೆ (Top Down) ಅಥವಾ ಕೆಳಗಿನಿಂದ ಮೇಲೆ (Bottoms Up) ತಲುಪುತ್ತವೆಯೋ ಎನ್ನುವ ತತ್ವದ ಮೇಲೆ ಅವಲಂಬಿಸಿದೆ. ಎಲ್ಲ ನೌಕರರೂ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವ ವ್ಯವಸ್ಥೆ ನಿರ್ಮಾಣ ಮಾಡುವ ಅವಶ್ಯಕತೆಯಿದೆ.
12 ನೇ ಶತಮಾನದ ವಚನಕಾರರು, ವಚನಗಳನ್ನು ಆದ್ಯರ ಆಜ್ಞೆ ಎಂದು ಪಾಲನೆ ಮಾಡುತ್ತಿದ್ದರು. ನಡೆ, ನುಡಿ ಎನ್ನುವ ಎರಡು ತತ್ವಗಳನ್ನು ಇಟ್ಟುಕೊಂಡು ವಚನಗಳನ್ನು ರಚನೆ ಮಾಡಿ ನಿರಾಕಾರ ಶಿವನಿಗೆ ಅರ್ಪಿಸಿದ್ದಾರೆ. ನಾವು ನಡೆಸುವ ಸತ್ಯ ಶುದ್ಧ ಜೀವನದಿಂದ ಮಾತ್ರ ಸಾಧ್ಯ ಎಂದು ಸಾಮಾನ್ಯರ ಜತೆಗೆ ಅಸಾಮಾನ್ಯವಾಗಿ ಬದುಕಿದವರು ವಚನಕಾರರು. ಇನ್ನು ಆಜ್ಞೆಗಳನ್ನು ಪಾಲಿಸುವುದರಲ್ಲಿ ಮತ್ತು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದನ್ನು ವಚನಗಳ ಮೂಲಕ ನಾವು ಕಾಣಬಹುದು. ಅಂಥ ವಚನಕಾರರಲ್ಲಿ ಶರಣ ಬಾಹೂರ ಬೊಮ್ಮಣ್ಣನವರೂ ಒಬ್ಬರು. ಅವರ ಒಂದು ವಚನ ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ಕೇಂದ್ರೀಕರಣದ ಸ್ವರೂಪ (The Degree of Centralization) ದ ತತ್ವ ಸಿದ್ಧಾಂತವನ್ನು ನಿರೂಪಿಸುತ್ತದೆ.
ಗುರುವಿನಲ್ಲಿ | ಅನುವನರಿತವಂಗೆ || ಮತ್ತೆ ಗುರು | ನಿರೂಪವೆಂಬುದಿಲ್ಲ || ಪ್ರಾಣವೆ ಲಿಂಗವಾದವಂಗೆ | ನೆನಹಿಂಗೆ ಎಡೆದೆರಪಿಲ್ಲ || ಸರ್ವದಯೆ | ಸಂಪೂರ್ಣನಾದವಂಗೆ || ಇಕ್ಕಿಹೆ ಎರೆದಿಹೆನೆಂಬ | ತೋಟಿಯ ತೊಡಕಿಲ್ಲ || ಇಂತಿವನೊಳಗನರಿದು | ವೇಧಿಸುವನ್ನಕ್ಕ || ಗುರುವಿನ ಆಜ್ಞೆ | ಲಿಂಗದ ಪೂಜೆ || ಮಾಟಕೂಟದ | ಬೇಟವ ಬಿಡಲಿಲ್ಲ || ಇದು ಸಂಗನಬಸವಣ್ಣನಾಟ | ಬ್ರಹ್ಮೇಶ್ವರಲಿಂಗದ ಕೂಟ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1387 / ವಚನ ಸಂಖ್ಯೆ-270)
ಶರಣ ಬಾಹೂರ ಬೊಮ್ಮಣ್ಣನವರ ಈ ವಚನದಲ್ಲಿ ಗುರುವನ್ನು ಕುರಿತು ವಿಶ್ಲೇಷಣೆ ಮಾಡಲಾಗಿದೆ. ಗುರು ಇದು ಅಂತರಂಗದ ಅರಿವಿನ ಸಂಕೇತ. ಯಾವುದೇ ಒಂದು ಗುರಿಯನ್ನು ಬೆನ್ನು ಹತ್ತಿದಾಗ ನಮ್ಮನ್ನು ನಾವು ಕೇಂದ್ರೀಕರಿಸುವ ಅವಶ್ಯಕತೆ ಇರುತ್ತದೆ. ಎಷ್ಟು ತನ್ಮಯತೆಯಿಂದ ನಮ್ಮ ಕೆಲಸ ಕೇಂದ್ರೀಕೃತವಾಗುತ್ತದೆಯೋ ಗುರಿಯನ್ನು ತಲುಪುವದು ಅಷ್ಟೇ ಸುಲಭವಾಗುತ್ತದೆ. ಇಂಥ ಒಂದು ಅಂತರಂಗದ ಆಜ್ಞೆಯ ಮೂಲಕ ಗುರಿಯನ್ನು ಕೇಂದ್ರೀಕರಿಸಿ ಯಾವುದೇ ಸಂಘ ಅಥವಾ ಸಂಸ್ಥೆಯ ಧೇಯೋದ್ದೇಶಗಳನ್ನು ಈಡೇರಿಸಲು ಅನುಕೂಲ. ಇಂಥ ಒಂದು ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ಕೇಂದ್ರೀಕರಣದ ಸ್ವರೂಪ (The Degree of Centralization) ದ ತತ್ವ ಸಿದ್ಧಾಂತವನ್ನು ಈ ವಚನ ನಿರೂಪಿಸುತ್ತದೆ. ಹಾಗಾಗಿ ನಮ್ಮ ಬಸವಾದಿ ಶರಣರು ಆಧುನಿಕ ಶಾಸ್ತ್ರದ ರೂಪರೇಷೆಗಳನ್ನು 12 ನೇ ಶತಮಾನದಲ್ಲಿಯೇ ತಿಳಿಸಿದ್ದನ್ನು ನಾವು ಕಾಣಬಹುದು.
9. ಪ್ರಮಾಣೀಕೃತ ಮತ್ತು ಸಶಕ್ತ ನಿರ್ದೇಶನಗಳು (Scalar Chain) : This relates to the principle of a clear chain of communication existing between employees and superiors. The chain should be respected, unless speedy communication is vital, in which case the chain may be bypassed with all parties’ consent. ಸಂವಹನ ಮತ್ತು ವಾಹಕ ಮಾಧ್ಯಮಗಳನ್ನು ಪರಿಪೂರ್ಣತೆ ಮತ್ತು ಸಕಾರಾತ್ಮಕ ಸಿದ್ಧತೆಯೊಂದಿಗೆ ಜೋಡಣೆ ಮಾಡಬೇಕಾಗುತ್ತದೆ. ಎಲ್ಲ ಧನಾತ್ಮಕ ಸಂವಹನ ಮತ್ತು ವಾಹಕ ಮಾಧ್ಯಮಗಳನ್ನು ಸ್ವೀಕರಿಸಬೇಕಾದದ್ದು ಸಂಸ್ಥೆಯ ಎಲ್ಲ ವರ್ಗದವರ ಕರ್ತವ್ಯ. ಇದರ ಹೊರತಾಗಿ ಕೆಲವೊಂದು ತುರ್ತು ನಿರ್ದೇಶನಗಳನ್ನೂ ಸಹ ಗೌರವಿಸಬೇಕಾಗುತ್ತದೆ.
ಧರ್ಮದೊಳಗೆ ಶಿವಧರ್ಮವೇ | ಧರ್ಮವೆಂದರಿದೆನಾಗಿ || ಧರ್ಮ | ಸಾಧ್ಯವಾಯಿತ್ತೆನಗೆ || ಗುರು ಲಿಂಗ ಜಂಗಮವ | ಪಡೆದೆನಾಗಿ || ಅರ್ಥ | ಸಾಧ್ಯವಾಯಿತ್ತೆನಗೆ || ಶರಣಸತಿ ಲಿಂಗಪತಿ | ಎಂದರಿದೆನಾಗಿ || ಕಾಮ | ಸಾಧ್ಯವಾಯಿತ್ತೆನಗೆ || ಮಹಾ ಪ್ರಸಾದವನಿಂಬುಗೊಂಡು | ಧರಿಸಿದೆನಾಗಿ || ಮೋಕ್ಷ | ಸಾಧ್ಯವಾಯಿತ್ತೆನಗೆ || ಇಂತೀ ಧರ್ಮಾರ್ಥ | ಕಾಮಮೋಕ್ಷಗಳೆಂಬ || ಚತುರ್ವಿಧ ಫಲವೆನಗಾಯಿತ್ತು | ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1107 / ವಚನ ಸಂಖ್ಯೆ-1404)
ಉರಿಲಿಂಗ ಪೆದ್ದಿಗಳವರ ಈ ವಚನ ಆಧುನಿಕ ನಿರ್ವಹಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ಪ್ರಮಾಣೀಕೃತ ಮತ್ತು ಸಶಕ್ತ ನಿರ್ದೇಶನಗಳು (Scalar Chain) ತತ್ವ ಸಿದ್ಧಾಂತವನ್ನು ನಿರೂಪಿಸುತ್ತದೆ. ಆಧ್ಯಾತ್ಮದ ಬೆಡಗಿನ ರೂಪದ ಈ ವಚನದಲ್ಲಿ ದರ್ಮ ಎನ್ನುವ ಶಬ್ದ ಇಡೀ ಸಮಷ್ಟಿಯ ಗುರಿ ಮತ್ತು ಧೇಯೋದ್ದೇಶಗಳನ್ನು ವಿಶದೀಕರಿಸುತ್ತದೆ. ಯಾವಾಗ ನಿರ್ದೇಶನಗಳು ನಮ್ಮ ಅಂತರಂಗವನ್ನು ತಟ್ಟುತ್ತವೆಯೋ ಅವು ನಿರಾಕಾರ ಶಿವನ ಆಜ್ಞೆಗಳಂತೆ ನಮಗೆ ಭಾಸವಾಗುತ್ತವೆ. ಇದು ನಿರ್ದೇಶನದ ಸಶಕ್ತ ಸರಪಳಿಯ ಮೊದಲನೇ ಗುರಿ. ಈ ಗುರಿಗಳು ತಳಮಟ್ಟಕ್ಕೆ ತಲುಪುವಂತೇ ಮಾಡುವುದೇ ಇದರ ಉದ್ದೇಶ. ಅಂದರೆ ಸಂಘ ಅಥವಾ ಸಂಸ್ಥೆಗಳ ಗುರಿಗಳು ಒಂದು ನಿರ್ದಿಷ್ಠ ಸಾಲಿನಲ್ಲಿ ಇರುವೆಗಳ ಸಾಲಿನಂತೆ ಪ್ರವಹಿಸುತ್ತವೆಯೋ ಅಲ್ಲಿಗೆ ಸಂಸ್ಥೆಯ ಗುರಿ ಮತ್ತು ಧೇಯೋದ್ದೇಶಗಳು ಸಫಲವಾಗುತ್ತವೆ. ಉರಿಲಿಂಗ ಪೆದ್ದಿಗಳು ಈ ವಚನದಲ್ಲಿ ಸ್ಪಷ್ಟವಾಗಿ ಶರಣಸತಿ ಲಿಂಗಪತಿ ಎನ್ನುವ ವಾಕ್ಯಗಳನ್ನು ಹೇಳುವುದರ ಮೂಲಕ ಪ್ರಮಾಣೀಕೃತ ಮತ್ತು ಸಶಕ್ತ ನಿರ್ದೇಶನ (Scalar Chain) ದ ತತ್ವ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶರಣಸತಿ ಅಂದರೆ ನಮ್ಮನ್ನು ನಾವು ಶರಣ ಎಂದುಕೊಂಡು ಲಿಂಗಪತಿ ಅಂದರೆ ಸಂಸ್ಕಾರ ಅಥವಾ ಆಜ್ಞೆಗಳನ್ನು ಪಾಲಿಸುತ್ತವೆಯೋ ಕಾಮ ಅಂದರೆ ಗುರಿ ಮತ್ತು ಧೇಯೋದ್ದೇಶಗಳ ಸಾಧನೆ ಮಾಡಲು ಸಾಧ್ಯ. ಎಂತ ಅದ್ಭುತ ಶಬ್ದ ಪ್ರಯೋಗ. ಚತುರ್ವಿಧ ಮೋಕ್ಷ ಅಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು ಪ್ರಸಾದದ ರೂಪದಲ್ಲಿ ಪಡೆಯುವುದು. ಪ್ರಸಾದ ಅಂದರೆ reaching the ultimate goal. ನಮ್ಮನ್ನು ನಾವು ಅರಿತುಕೊಂಡು ವ್ಯವಸ್ಥಿತ ಆಜ್ಞೆಗಳ ಸರಪಳಿಯ ಮೂಲಕ ಕಾರ್ಯ ನಿರ್ವಹಿಸಿದಾಗ ಸಿಗುವ ಪ್ರಸಾದವೇ ಗುರಿ ಮತ್ತು ಧೇಯೋದ್ದೇಶಗಳ ಸಾಧನೆ. ಇದು 12 ನೇ ಶತಮಾನದ ವಚನ ಸಾಹಿತ್ಯದ ಶಕ್ತಿ ಮತ್ತು ತಿಳುವಳಿಕೆ. ಆಧುನಿಕ ಕಾಲಕ್ಕೂ ಸಲ್ಲುವಂಥ ತತ್ವ ಸಿದ್ಧಾಂತಗಳನ್ನು ಅಂದೇ ನಿರೂಪಿಸಿದ್ದಾರೆ ನಮ್ಮ ಬಸವಾದಿ ಶರಣರು.
10. ವ್ಯವಸ್ಥಿತ ಆಜ್ಞೆಗಳು (Order) : This relates to the proper use of resourses and their effective deployment in structured fashion.
ಯಾವುದೇ ಸಂಸ್ಥೆಯ ಆಜ್ಞೆಗಳು ಪರಿಣಾಮಕಾರಿಯಾಗಿರಬೇಕು. ಎಲ್ಲ ಸಂಪನ್ಮೂಲಗಳ ಸದ್ಬಳಕೆ ಮಾಡುವಲ್ಲಿ ಸಕಾರಾತ್ಮಕ ಅಜ್ಞೆಗಳು ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ತಲುಪುವ ನಿಟ್ಟಿನಲ್ಲಿ ರಸಾಯನ ಶಾಸ್ತ್ರದಲ್ಲಿ ಬಳಸುವ ವೇಗವರ್ಧಕ (Catalyst) ದಂತೆ ಕೆಲಸ ಮಾಡುತ್ತವೆ.
ಸಂಸ್ಥೆಯ ಆಜ್ಞೆಗಳು ಸಕಾರಾತ್ಮಕವಾಗಿದ್ದಲ್ಲಿ ಗುರಿ ಮತ್ತು ಉದ್ದೇಶಗಳನ್ನು ತಲುಪುವಲ್ಲಿ ಪಾರಿಣಾಮಕಾರಿಯಾಗಿರುತ್ತವೆ. ಈ ನಿಟ್ಟಿನಲ್ಲಿ 12 ನೇ ಶತಮಾನದಲ್ಲಿ ಕಟ್ಟಿದ್ದ ಅನುಭವ ಮಂಟಪದ ಕಾರ್ಯವೈಖರಿ ನಮಗೆ ಮಾರ್ಗದರ್ಶನ ನೀಡುತ್ತದೆ. ಬಸವಾದಿ ಶರಣರು ಯಾರ ಮೇಲೂ ಆಜ್ಞೆಯೆಂಬ ತೂಗುಕತ್ತಿಯನ್ನು ಕಟ್ಟಿರಲಿಲ್ಲ. ಅವರವರ ಕಾರ್ಯಗಳನ್ನು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ನಿರ್ವಹಿಸಿದ್ದರಿಂದ ಇಂದಿಗೂ ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ವ್ಯವಸ್ಥಿತ ಆಜ್ಞೆಗಳು (Order) ತತ್ವ ಸಿದ್ಧಾಂತವನ್ನು ಅಕ್ಷರಶಃ ಜಾರಿಗೆ ತಂದಿದ್ದನ್ನು ನಾವು ಕಾಣಬಹುದು.
ಪ್ರಾಣಲಿಂಗ ಸಂಬಂಧಿಯಾಗಿ | ಅಂಗಲಿಂಗ ಸಂಬಂಧಿಯಾಗಿ || ಕರಸ್ಥಲದಲಿ ಲಿಂಗವ | ಬಿಜಯಂಗೈಸಿಕೊಟ್ಟು || ಶ್ರೀಗುರು ರಕ್ಷಿಸಿದ ಬಳಿಕ | ಲಿಂಗವೇ ಪ್ರಾಣ ಪ್ರಾಣವೇ ಲಿಂಗ || ಲಿಂಗವೇ ಅಂಗ | ಅಂಗವೇ ಲಿಂಗ || ಇಂತು ಅಂತರಂಗ | ಬಹಿರಂಗ ಲಿಂಗವಾಗಿ || ಸರ್ವಾಂಗ ಲಿಂಗವಾದ ಬಳಿಕ | ಲಿಂಗದ ನಡೆ ಲಿಂಗದ ನುಡಿ || ಪಂಚೇಂದ್ರಿಯಗಳೆಲ್ಲವೂ | ಲಿಂಗೇಂದ್ರಿಯಂಗಳು || ಅಂತಃಕರಣ ಚತುಷ್ಟಯಂಗಳು | ಲಿಂಗಕರಣಂಗಳು || ವರ್ತಕ ನಿವರ್ತಕ | ಇದು ಸಹಜ ಸತ್ಯ || ಪ್ರಾಣಲಿಂಗ ಸಂಬಂಧಿ | ಅನ್ಯ ವರ್ತಕ ವರ್ತಿಸಿದಡೆ || ಪ್ರಾಣಲಿಂಗ ಸಂಬಂಧಿಯಲ್ಲ | ಅವನು ಪೂಜಕರಂತೆ ಪೂಜ್ಯಕನಪ್ಪನು || ಉರಿಲಿಂಗ ಪೆದ್ದಿಪ್ರಿಯ | ವಿಶ್ವೇಶ್ವರಾ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1115 / ವಚನ ಸಂಖ್ಯೆ-1446)
ಯಾವುದೇ ಸಂಸ್ಥೆಯ ಆತ್ಮ ಅಂದರೆ ಅಲ್ಲಿನ ನೌಕರ ವರ್ಗ ಮತ್ತು ಗುರಿಯನ್ನು ತಲುಪುವ ಮಾರ್ಗಸೂಚಿಗಳು ಅಥವಾ ಬಸವಾದಿ ಶರಣರ ಮಾತಿನಲ್ಲಿ ಹೇಳುವುದಾದರೆ ಪ್ರಾಣ ಮತ್ತು ಲಿಂಗ. ಪ್ರಾಣ ಸಂಸ್ಥೆಯ ಗುರಿ ಆದರೆ ಲಿಂಗ ಅದರ ಸಂಸ್ಕೃತಿ. ಅಂಥ ಗುರಿ ಮತ್ತು ಧೇಯೋದ್ದೇಶಗಳೆಂಬ ಪ್ರಾಣ ಮತ್ತು ಲಿಂಗವನ್ನು ಕರಸ್ಥಲದಲ್ಲಿರಿಸಿಕೊಂಡು ಹೋಗುವ ವಿಷಯ ಅತ್ಯಂತ ಗಮನಾರ್ಹ. ಗುರುವಿನಿಂದ ರಕ್ಷಣೆ ಪಡೆಯುವುದು ಅಂದರೆ ಗುರು ಮುಖೇನ ಬರುವ ಎಲ್ಲ ಆಜ್ಞೆ ಅಥವಾ ಸಂದೇಶಗಳನ್ನು ಎಚ್ಚರಪೂರ್ವಕವಾಗಿ ಅಂತರಂಗ ಮತ್ತು ಬಹಿರಂಗದಲ್ಲಿ ಒಡಮೂಡಿಸಿಕೊಂಡು ಹೋಗುವ ತತ್ವ 12 ನೇ ಶತಮಾನದ ಅದ್ಭುತ ಕೊಡುಗೆ. ಇದನ್ನೇ ಪಂಚೇಂದ್ರಿಯಗಳನ್ನು ನಿಯಂತ್ರಿಸಿಕೊಂಡು ಆಜ್ಞೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪೂಜಿಸಿ ಗುರಿಯನ್ನು ತಲುಪುವ ಮಾರ್ಗದರ್ಶನದ ಅದ್ಭುತ ವಿಶ್ಲೇಷಣೆಯನ್ನು ಉರಿಲಿಂಗ ಪೆದ್ದಿಗಳು ಈ ವಚನದ ಮೂಲಕ ನಿರೂಪಿಸಿದ್ದಾರೆ.
11. ನ್ಯಾಯ ಸಂಹಿತೆ (Equity) : Managers should behave ethically towards those they manage. Almost every organization in the modern world will have a written set of policies and procedures which will outline exactly what is expected from staff at all levels.
ಸಂಸ್ಥೆಗಳಲ್ಲಿ ನೈತಿಕತೆಯಿಂದ ಇರುವುದು ಮತ್ತು ಕಾನೂನಾತ್ಮಕವಾಗಿ ಎಲ್ಲರನ್ನೂ ಸಮದೃಷ್ಟಿಯಂದ ಕಾಣುವುದು ಅತ್ಯಂತ ಅವಶ್ಯಕ. ಆಧುನಿಕ ಸಂಸ್ಥೆಗಳಲ್ಲಿ ಈ ತತ್ವಕ್ಕನುಗುಣವಾಗಿ ತಮ್ಮದೇ ಆದ ನೀತಿ, ನಿಯಮ, ಕಟ್ಟಳೆಗಳು ಮತ್ತು ಕಾರ್ಯವಿಧಾನಗಳನ್ನು ಹೊಂದಿರುತ್ತವೆ. ಇಂತಹ ನೀತಿ ನಿಯಮಗಳಂತೆ ನಡೆದುಕೊಳ್ಳುವುದು ಎಲ್ಲ ವರ್ಗದವರ ಕರ್ತವ್ಯ.
ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ನ್ಯಾಯ ಸಂಹಿತೆ (Equity) ಎನ್ನುವುದು ಮೂಲಭೂತ ಸತ್ಯದ ಅರಿವಿನ ತತ್ವ. ಕಾರಣ ಮತ್ತು ಪರಿಣಾಮಗಳು ವ್ಯವಸ್ಥಿತವಾದ ಬುನಾದಿಯನ್ನು ಒದಗಿಸುತ್ತದೆ. ಚಿಂತನಶೀಲತೆ ಮತ್ತು ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಇಂಥ ಒಂದು ನೈತಿಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಬಸವಾದಿ ಶರಣರು ಯಾವಾಗಲೂ ಬದ್ಧತೆಯನ್ನು ಹೊಂದಿದ್ದರು. ಎಲ್ಲರನ್ನೂ ಸಮನಾಗಿ ಕಾಣುವಲ್ಲಿ ಬಸವಣ್ಣನವರ ಈ ವಚನ ಆಧುನಿಕ ನಿರ್ವಹಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ನ್ಯಾಯ ಸಂಹಿತೆ (Equity) ಯನ್ನು ಸಮರ್ಥವಾಗಿ ನಿರ್ದೇಶಿಸುತ್ತದೆ.
ದೇವಸಹಿತ ಭಕ್ತ | ಮನೆಗೆ ಬಂದಡೆ || ಕಾಯಕವಾವುದೆಂದು | ಬೆಸಗೊಂಡೆನಾದಡೆ || ನಿಮ್ಮಾಣೆ ನಿಮ್ಮ | ಪುರಾತರಾಣೆ || ತಲೆದಂಡ ತಲೆದಂಡ | ಕೂಡಲಸಂಗಮದೇವಾ || ಭಕ್ತರಲ್ಲಿ ಕುಲವನರಸಿದಡೆ | ನಿಮ್ಮ ರಾಣಿವಾಸದಾಣೆ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-44 / ವಚನ ಸಂಖ್ಯೆ-453)
ಎರಡು ಆಣೆ ಮಾಡತಾರೆ ಬಸವಣ್ಣನವರು ಇಲ್ಲಿ. ಒಂದು ಪುರಾತರು ಇನ್ನೊಂದು ರಾಣೀವಾಸ. ನಾವು ತಂದೆ ತಾಯಿ, ಕುಲದೇವರು, ಭಯ-ಭಕ್ತಿ ಇದ್ದವರ ಮೇಲೆ ಆಣೆ ಮಾಡುತ್ತೇವೆ. ಅಂದರೆ ನಮ್ಮನ್ನ ನಾವು confirm ಮಾಡಿಕೊಂಡು ಆಣೆ ಮಾಡುತ್ತೇವೆ. ಪುರಾತರು ಅಂದ್ರೆ ಹಿರಿಯರು, ಇನ್ನೂ ಮುಂದೆ ಹೋದ್ರೆ ಪಂಚೇಂದ್ರಿಯಗಳು ಮತ್ತು ಪಂಚ ತತ್ವಗಳು. ಪಂಚೇಂದ್ರಿಯಗಳು ಅಂದರೆ ದೃಷ್ಟಿ, ಶ್ರವಣ, ವಾಸನೆ, ರುಚಿ ಮತ್ತು ಸ್ಪರ್ಷ. ಪಂಚತತ್ವಗಳು ಅಂದರೆ ವಾಯು, ಅಗ್ನಿ, ಆಕಾಶ, ಭೂಮಿ ಮತ್ತು ನೀರು. ಅಂದರೆ ನಮ್ಮನ್ನು ಸೃಷ್ಟಿ ಮಾಡಿದ ಮತ್ತು ಸಮಷ್ಠಿಯ ಮೇಲೆ ಆಣೆ ಮಾಡತಾರೆ. ಎಂಥ ಪ್ರಭುದ್ಧ ಯೋಚನೆ. ಇನ್ನು ರಾಣೀವಾಸ ಅಂದ್ರೆ ಅದು Power Center. ಇವೆಲ್ಲದರ ಮೇಲೆ ಆಣೆ ಮಾಡಿ ಅಂದರೆ ಬಸವಣ್ಣನವರು confirm ಮಾಡಿ ಹೇಳತಾರೆ, “ದೇವ ಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ” ದೇವರನ್ನೂ ಹಿಡಿದು ಮನೆಗೆ ಬಂದವರ ಕಾಯಕವನ್ನು ನಾನು ಕೇಳುವುದಿಲ್ಲ ಎನ್ನುವುದರ ಮೂಲಕ ಕಾಯಕ ಮತ್ತು ಸಮಾನತೆಯ ತತ್ವವನ್ನು ಸಾರುತ್ತಾರೆ. “ಭಕ್ತರಲ್ಲಿ ಕುಲವನರಸಿದಡೆ ನಿಮ್ಮಾಣೆ” ಭಕ್ತರು ಅಂದ್ರೆ ಸಾಕ್ಷಾತ್ ಸಂಗಮನೇ ಅಂತಾರೆ ಬಸವಣ್ಣನವರು. ಅವರಲ್ಲಿ ನಾನು ಕುಲವನ್ನು ಅರಸುವುದಿಲ್ಲ ಎನ್ನುವ ಮೂಲಕ ಸಮಾನತೆಯ ಅಗಾಧ ಸಂದೇಶವನ್ನು ಈ ವಚನ ನೀಡುತ್ತದೆ. ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಹೇಳಿದ ನ್ಯಾಯ ಸಂಹಿತೆ (Equity) ಎನ್ನುವ ಸಮಾನತೆಯ ಪರಿಕಲ್ಪನೆಯ ವಚನವಿದು.
ಸಂಸ್ಥೆಗಳಲ್ಲಿ ನೈತಿಕತೆಯಿಂದ ಇರುವುದು ಮತ್ತು ಕಾನೂನಾತ್ಮಕವಾಗಿ ಎಲ್ಲರನ್ನೂ ಸಮದೃಷ್ಟಿಯಂದ ಕಾಣುವುದು ಅತ್ಯಂತ ಅವಶ್ಯಕ. ಆಧುನಿಕ ಸಂಸ್ಥೆಗಳಲ್ಲಿ ಈ ತತ್ವಕ್ಕನುಗುಣವಾಗಿ ತಮ್ಮದೇ ಆದ ನೀತಿ, ನಿಯಮ, ಕಟ್ಟಳೆಗಳು ಮತ್ತು ಕಾರ್ಯವಿಧಾನಗಳನ್ನು ಹೊಂದಿರುತ್ತವೆ. ಇಂತಹ ನೀತಿ ನಿಯಮಗಳಂತೆ ನಡೆದುಕೊಳ್ಳುವುದು ಎಲ್ಲ ವರ್ಗದವರ ಕರ್ತವ್ಯ. ಇದನ್ನೇ 12 ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿ ನುಡಿದಂತೆ ನಡೆದು ತೋರಿಸಿದವರು.
12. ಸಹೋದ್ಯೋಗಿಗಳ ಸ್ಥಿರ ಅಧಿಕಾರಾವಧಿ (Stability of Tenure of Personal) : It is seen as desirable within an organization to have a low staff turnover rate. This is due to the benefits that come with having experienced staff and the time and expense needed to train new ones. There should be clear and efficient method of filling any staff vacancies that arise.
ಎಲ್ಲ ರೀತಿಯ ಸಾಮರ್ಥ್ಯಗಳನ್ನು ಪರೀಕ್ಷಿಸಿದ ನಂತರವೇ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಸಮರ್ಥರಾದ ನೌಕರರನ್ನು ಹಿಡಿದಿಟ್ಟುಕೊಳ್ಳುವುದು ಸಂಸ್ಥೆಯಲ್ಲಿರುವವರೆಲ್ಲರ ಜಾವಾಬ್ದಾರಿ. ಹಿರಿಯರ ಸಲಹೆ ಸೂಚನೆಗಳು ಕಿರಿಯ ಸಹೋದ್ಯೋಗಿಗಳಿಗೆ ತರಬೇತಿ ನೀಡಲು ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ ಸಮರ್ಥರಾದವರು ಸಂಸ್ಥೆಯನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಸ್ಥೆಯನ್ನು ನಡೆಸುವವರ ಮೇಲಿರುತ್ತದೆ.
ಸಂಸ್ಥೆಗಳಲ್ಲಿ ಅಥವಾ ಸಂಘಗಳಲ್ಲಿ ನೌಕರರನ್ನು ಹಿಡಿದಿಟ್ಟುಕೊಳ್ಳುವುದು (retention) ಅನ್ನುವುದು ಅತಿ ದೊಡ್ಡ ಸಾಹಸದ ಕೆಲಸ. ಅವರಿಗೆ ತರಬೇತಿ ನೀಡಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಅನುಕೂಲಕರ ವಾತಾವರಣ ನಿರ್ಮಿಸಿ, ತಕ್ಕಂಥ ಸಂಭಾವನೆಯನ್ನು ನೀಡಿದಾಗಲೂ ಕೂಡ ಬಿಟ್ಟು ಹೋಗುವುದು ಸರ್ವೇ ಸಾಮಾನ್ಯ. ಇಂಥ ಪರಿಸ್ಥಿತಿಯಲ್ಲಿ ಸಮರ್ಥರಾದವರು ಸಂಸ್ಥೆಯನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಸ್ಥೆಯನ್ನು ನಡೆಸುವವರ ಮೇಲಿರುತ್ತದೆ, ಗುರಿ ತಲುಪುವುದು ವಿಳಂಬವಾಗಬಹುದು ಎನ್ನುವುದಕ್ಕೆ ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಸಹೋದ್ಯೋಗಿಗಳ ಸ್ಥಿರ ಅಧಿಕಾರಾವಧಿ (Stability of Tenure of Personal) ಎನ್ನುವ ತತ್ವಕ್ಕೆ ಬಹಳ ಮಹತ್ವ ಬರುತ್ತದೆ. 12 ನೇ ಶತಮಾನದಲ್ಲಿ ಬಸವಾದಿ ಶರಣರು ಇದಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದರು ಎನ್ನುವುದನ್ನು ಅಲ್ಲಮ ಪ್ರಭುಗಳ ಈ ನಾಲ್ಕು ವಚನಗಳು ನಿರೂಪಿಸುತ್ತದೆ.
ಅರಿದಿಹೆ ಅರಿದಿಹೆನೆಂದಡೆ | ಅದೇಕೋ ಮುಂದೆ ಮರವೇ? || ನೀನರಿದೆನೆಂಬುದ ನಿನ್ನಲ್ಲಿ | ಲೇಸಾಗಿ ಉಳ್ಳಡೆ || ನಿನ್ನರಿವೆಲ್ಲವ ಹರಿಹಂಚ | ಮಾಡಿ ಹೋದಡರಿ ಮರುಳೆ || ಸ್ವತಂತ್ರ ಘನದೊಳಗಿರ್ದು | ನಿಜವನರಿದಿಹೆನೆಂದಡೆ || ಮೂರ್ತಿ ಕಿರಿದಲ್ಲ | ನಿಲ್ಲು ಮಾಣು || ಗುಹೇಶ್ವರನೆಂಬ ಲಿಂಗದ | ಘನಘಟ್ಟನರಿವಡೆ || ನಿನ್ನರಿವೆಲ್ಲವ | ಹರಿಹಂಚು ಮಾಡಿ || ನೀನರಿ ಮರುಳೇ | ಅನುಭಾವಿಯಾದಡೆ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-184 / ವಚನ ಸಂಖ್ಯೆ-600)
ಸಾಮರ್ಥ್ಯಗಳನ್ನು ಪರೀಕ್ಷಿಸಿದ ನಂತರವೇ ನೌಕರರನ್ನು ನಿಯುಕ್ತಿಗೊಂಡಾಗ ಸಂಸ್ಥೆ ಮತ್ತು ಸಂಘಗಳ ನೌಕರರಿಗೆ ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಬೇಕು. ನಾನು ಎಲ್ಲವನ್ನೂ ತಿಳಿದುಕೊಂಡಿದ್ದೇನೆ ಎನ್ನುವ ಅಹಂ ನೌಕರರಲ್ಲಿ ಬರಬಾರದು ಎನ್ನುವ ಸ್ಪಷ್ಟ ನಿಲುವನ್ನು ಈ ವಚನ ನಿರೂಪಿಸುತ್ತದೆ. “ನೀನರಿದೆನೆಂಬುದ ನಿನ್ನಲ್ಲಿ ಲೇಸಾಗಿ ಉಳ್ಳಡೆ ನಿನ್ನರಿವೆಲ್ಲವ ಹರಿಹಂಚ ಮಾಡಿ ಹೋದಡರಿ ಮರುಳೆ” ಎಂಥ ಅದ್ಭುತ ಸಾಲುಗಳು. ಕಲಿತ ವಿದ್ಯೆಯನ್ನು ಸಮರ್ಥವಾಗಿ ಬಳಸಿಕೊಂಡು ಸಂಸ್ಥೆ ಮತ್ತು ಸಂಘದ ಗುರಿ ಮತ್ತು ಉದ್ದೇಶಗಳನ್ನು ತಲುಪಲು ಸಹಾಯ ಮಾಡುವುದೇ ನೌಕರರ ವಿಶೇಷತೆ. ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಸಹೋದ್ಯೋಗಿಗಳ ಸ್ಥಿರ ಅಧಿಕಾರಾವಧಿ (Stability of Tenure of Personal) ಎನ್ನುವ ತತ್ವಕ್ಕೆ ಬಹಳ ಮಹತ್ವ ಬರುತ್ತದೆ. ಬಹುಕಾಲ ಸಂಸ್ಥೆಯಲ್ಲಿ ಕೆಲಸ ಮಾಡಲು ಅತ್ಯಂತ ಸುಲಭದ ದಾರಿ ಇದು.
ಕೆಂಡದ ಮಳೆ ಕರೆವಲ್ಲಿ | ಉದಕವಾಗಿರಬೇಕು || ಜಲಪ್ರಳಯವಾದಲ್ಲಿ | ವಾಯುವಿನಂತಿರಬೇಕು || ಮಹಾಪ್ರಳಯವಾದಲ್ಲಿ | ಆಕಾಶದಂತಿರಬೇಕು || ಜಗತ್ ಪ್ರಳಯವಾದಲ್ಲಿ | ತನ್ನ ತಾ ಬಿಡಬೇಕು || ಗುಹೇಶ್ವರನೆಂಬ ಲಿಂಗ | ತಾನಾಗಿರಬೇಕು || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-181 / ವಚನ ಸಂಖ್ಯೆ-556)
ಸಮರ್ಥರಾದ ನೌಕರರು ಸಂಸ್ಥೆ ಮತ್ತು ಸಂಘಗಳಲ್ಲಿ ಹೇಗಿರಬೇಕೆನ್ನುವುದಕ್ಕೆ ಉತ್ತಮ ಸಿದ್ಧಾಂತವನ್ನು ಈ ವಚನ ನೀಡುತ್ತದೆ. ಹಲವಾರು ಪ್ರಸಂಗಗಳಲ್ಲಿ ಮೇಲಿನ ಅಧಿಕಾರಿಗಳಾಗಲೀ ಸಂಸ್ಥೆಯ ಮುಖ್ಯಸ್ಥರಾಗಲೀ ಮಾಡುವ ಆಜ್ಞೆಗಳು ಮತ್ತು ಸಲಹೆ ಸೂಚನೆಗಳು ಕೆಂಡದ ಮಳೆಯಂತೆ, ಜಲಪ್ರಳಯದಂತೆ, ಮಹಾಪ್ರಳಯದಂತೆ ಅಥವಾ ಜಗತ್ ಪ್ರಳಯದಂತೆ ಅತ್ಯಂತ ತೀವ್ರವಾಗಿರುತ್ತವೆ. ಅವಕ್ಕೆಲ್ಲ ಸ್ಥಿತಪ್ರಜ್ಞರಂತಿರಬೇಕೆನ್ನುವ ಆಶಯ ಈ ವಚನ ತಿಳಿಸುತ್ತದೆ.
ಜಗದಗಲದಲಿ ಹಬ್ಬಿದ ಬಲೆ | ಯುಗಜುಗಕ್ಕೆ ತೆಗೆಯದು ನೋಡಾ || [ಅದು] ಬಗೆಯಲ್ಲಿ ಭ್ರಮೆಗೊಳ್ಳದು | ತನ್ನ ಇರವಿನ ಪರಿ ಇಂತುಟಾಗಿ || ಜಗದ ಪ್ರಾಣಿಗಳುಲಿದುಲಿದು ಮರಳಿ | ಮತ್ತಲ್ಲಿಯೇ ಬೀಳಲು || ಬಲೆಯ ನೇಣು | ಬಗ್ಗುರಿಯ ಕೈಯಲಿರಲು || ಬಲೆಯ ನೇಣ ಕಣ್ಣಿ ಕಳಚಿ | ಲಿಂಗಕ್ಕೆ ಪ್ರಾಣ ಶರಣೆನ್ನುತ್ತವೆ ನಿಂದು || ಒಡಲುಪಾಧಿಯನರಿಯದೆ | ಬೆಳಗಿನಲಿ ನಿಂದು || ಬೇಡಿದವರಿಗೆ ಅಣಿಮಾದಿ | ಗುಣಂಗಳನಿತ್ತು || ಮನೋಮಧ್ಯದಲಿ ನಿಲಿಸಿ | ನೆನೆವುತ್ತಿರ್ದು ಸುಖಿಯಾದ || ಪ್ರಾಣನಾಥನ ಕಾಯ | ಶೂನ್ಯಲಿಂಗಕ್ಕೆ ಪ್ರಾಣಶೂನ್ಯ ಶರಣ || ಗುಹೇಶ್ವರಲಿಂಗವ | ಬೆರಸಿ ಬೇರಿಲ್ಲ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-167 / ವಚನ ಸಂಖ್ಯೆ-377)
ನೌಕರರು ಸಂಸ್ಥೆಯನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳುವ ಜಾವಾಬ್ದಾರಿ ಸಂಸ್ಥೆಯ ಎಲ್ಲರ ಮೇಲಿರುತ್ತದೆ. ಸಹೋದ್ಯೋಗಿಗಳು, ಅಧಿಕಾರಿ ವರ್ಗದವರು, ಕೆಳ ವರ್ಗದವರು ಒಬ್ಬರಿಗೊಬ್ಬರ ಸಹಕಾರದಿಂದಲೇ ಸಂಸ್ಥೆಯಲ್ಲಿ ಮುಂದುವರಿಯಲು ಸಾಧ್ಯ. “ಜಗದಗಲದಲಿ ಹಬ್ಬಿದ ಬಲೆ ಯುಗಜುಗಕ್ಕೆ ತೆಗೆಯದು ನೋಡಾ” ಒಬ್ಬರು ಮತ್ತೊಬ್ಬರಿಗಾಗಿ ಬಲೆ ಬೀಸುವುದು ಯುಗ ಯುಗಾಂತರಗಳಿಂದ ನಡೆದು ಬಂದ ಕಥೆ ಇದು. “ಒಡಲುಪಾಧಿಯನರಿಯದೆ ಬೆಳಗಿನಲಿ ನಿಂದು” ಧನ ಸಂಪಾದಿಸಿ ಜೀವನ ನಡೆಸುವುದು ಎಲ್ಲರ ಲಕ್ಷ್ಯ. “ಬೇಡಿದವರಿಗೆ ಅಣಿಮಾದಿ ಗುಣಂಗಳನಿತ್ತು ಮನೋಮಧ್ಯದಲಿ ನಿಲಿಸಿ ನೆನೆವುತ್ತಿರ್ದು ಸುಖಿಯಾದ” ಎನ್ನುವ ಈ ವಚನದಲ್ಲಿ ತಿಳಿಸಿರುವ ಹಾಗೆ ಪಡೆದ ಗುಣ ಅವಗುಣಾವಗಳನ್ನು ಮೀರಿ ಸುಖಿಯಾಗುವುದೇ ಜೀವನ ಕ್ರಮ. ಉತ್ತಮ ನಡೆ ನುಡಿಗಳನ್ನು ಮೈಗೂಡಿಸಿಕೊಂಡು ಸಂಘ ಸಂಸ್ಥೆಗಳಲ್ಲಿ ಮುಂದುವರೆಯುವುದನ್ನು 12 ನೇ ಶತಮಾನದಲ್ಲಿಯೇ ಬಸವಾದಿ ಶರಣರು ತಿಳಿಸಿದ್ದನ್ನು ನಾವು ಕಾಣಬಹುದು.
ಸಮರ್ಥರಾದ ನೌಕರರನ್ನು ಹಿಡಿದಿಟ್ಟುಕೊಳ್ಳುವುದು ದೊಡ್ಡ ಸಾಹಸದ ಕೆಲಸ. ಇದನ್ನು ಈ ವಚನದಲ್ಲಿ ಸದೃಷ್ಯವಾಗಿ ನಿರೂಪಿಸಿದ್ದಾರೆ.
ಮಹಾಮಂಜಿನ ಸಂಗ್ರಹದ | ಘಟಾಘಟಿತರವರೆಲ್ಲರು || ಕುಂಜರನ ಪಂಜರದಲ್ಲಿ | ಸಂಜೀವಿತರಾಗಿಪ್ಪರು || ಎಂಜಲವನುಂಡು ಬಂದು | ಅಂಜದೆ ನುಡಿವುತ್ತಿಪ್ಪರು || ರಂಜನೆಗೊಳಗೊಪ್ಪುದೆ? | ಆಗರದ ಸಂಚವನರಿಯರು || ರಂಜಕನೂ ಅಲ್ಲ | ಭುಂಜಕನೂ ಅಲ್ಲ || ಗುಹೇಶ್ವರಾ ನಿಮ್ಮ ಶರಣ | ಸಂಜೀವನರಹಿತನು || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-178 / ವಚನ ಸಂಖ್ಯೆ-509)
“ಮಹಾಮಂಜಿನ ಸಂಗ್ರಹ” ಮಾಯೆಯೆನ್ನುವ ಮಂಜಿನೊಳಗೆ ಇದ್ದಂತೆ ಸಂಘ ಸಂಸ್ಥೆಗಳಲ್ಲಿರುವುದು ಪಕ್ಷಿಯೊಂದು ಪಂಜರದಲ್ಲಿರುವಂಥ ಭಾವನೆ ಬರುವುದು ಸಹಜ. ಹಾಗೆಯೇ ಅಲ್ಲಿರುವ ಎಲ್ಲ ಅನಾನುಕೂಲಗಳನ್ನು ಮೀರಿ ಕೆಲಸ ಮಾಡುವದನ್ನು ಮೈಗೂಡಿಸಿಕೊಳ್ಳಬೇಕೆನ್ನುವುದನ್ನು ಕಲಿತಿರಬೇಕೆಂಬ ಸದಾಶಯ ಈ ವಚನದ್ದು. “ಎಂಜಲವನುಂಡು ಬಂದು ಅಂಜದೆ ನುಡಿವುತ್ತಿಪ್ಪರು” ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಸಂಸ್ಥೆಯ ಗುರಿ ಮತ್ತು ಧೇಯೋದ್ದೇಶಗಳತ್ತ ಗಮನವಿರಬೇಕೆ ಹೊರತು ಅದರ ವಿರುದ್ಧ ಕೆಲಸ ಮಾಡುವುದು ವಿರೋಧಾಭಾಸ ಮತ್ತು ಸಂಚು ಮಾಡುವ ಪ್ರವೃತ್ತಿ. ಇದು ಕೇವಲ ಹಾಸ್ಯಾಸ್ಪದವಾಗುವುದಲ್ಲದೆ ವಿರೋಧಿಗಳಿಗೆ ಮನರಂಜನೆಯ ವಿಷಯವಾಗಬಹುದು. ಇದು ಸಂಸ್ಥೆಗಳಲ್ಲಿ ಕೆಲಸ ಮಾಡುವವರೆಲ್ಲರೂ ಅರಿಯಬೇಕಾದ ತತ್ವ.
ಒಟ್ಟಾರೆ ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಸಹೋದ್ಯೋಗಿಗಳ ಸ್ಥಿರ ಅಧಿಕಾರಾವಧಿ (Stability of Tenure of Personal) ಎನ್ನುವ ತತ್ವಕ್ಕೆ 12 ನೇ ಶತಮಾನದಲ್ಲಿಯೇ ಬಸವಾದಿ ಶರಣರು ಬಹಳ ಮಹತ್ವ ಕೊಟ್ಟದ್ದರು ಎನ್ನುವುದಕ್ಕೆ ಈ ವಚನಗಳು ಸಾಕ್ಷೀಭೂತವಾಗಿವೆ.
13. ಮೊದಲ ಹೆಜ್ಜೆ ಅಥವಾ ಪ್ರಾರಂಭ (Initiative) : Employees should have an input as to how to best do their jobs are likely to feel more motivated and respected. Many organizations place a great deal of emphasis on listening to the concerns of staff.
ಒಂದು ಸಂಸ್ಥೆಯ ಆಸ್ತಿಯೆಂದರೆ ಸಕಾರಾತ್ಮಕ ಪ್ರೇರಿತ ನೌಕರ ವರ್ಗ. ಆ ವರ್ಗದವರ ಕಾಳಜಿ ಮತ್ತು ಹಿತಾಸಕ್ತಿಯನ್ನು ಕಾಪಾಡುವಲ್ಲಿ ಈ ಪ್ರೇರಣೆ ಎನ್ನುವ ತತ್ವ ಧನಾತ್ಮಕವಾದ ಚಿಂತನೆಗಳನ್ನು ಹುಟ್ಟು ಹಾಕುತ್ತದೆ.
ಆಶೆಯ ವೇಷವ ಧರಿಸಿ | ಭಾಷೆ ಪಲ್ಲಟವಾದರೆ || ಎಂತಯ್ಯಾ ಶರಣಪಥ | ವೇದ್ಯವಹುದು? || ತ್ರಿಭುವನದ ಮಸ್ತಕದ ಮೇಲಿಪ್ಪ | ಮೂರು ಗಿರಿಯ ಹುಡಿಗುಟ್ಟದನ್ನಕ್ಕರ | ಎಂತಯ್ಯಾ ಶಿವಪಥ | ಸಾಧ್ಯವಹುದು? || ಭದ್ರೆನಿದ್ರೆಯೆಂಬವರ ಮೂಲವ | ನಾಶಮಾಡದನ್ನಕ್ಕರ || ಎಂತಯ್ಯಾ | ಲಿಂಗೈಕ್ಯವು? || ಅತಳಲೋಕದಲ್ಲಿ ಕುಳ್ಳಿರ್ದು | ಬ್ರಹ್ಮಲೋಕವ ಮುಟ್ಟಿದೆನೆಂಬವರೆಲ್ಲ || ಭವಭಾರಕ್ಕೊಳಗಾದುದ ಕಂಡು | ನಾನು ಬೆರಗಾದೆನು ಗುಹೇಶ್ವರಾ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-179 / ವಚನ ಸಂಖ್ಯೆ-528)
“ಶರಣಪಥವನರಿದು ನಡೆಯುವ” ಅಂದರೆ ಸಕಾರಾತ್ಮಕ ಪ್ರೇರಿತ ನೌಕರ ವರ್ಗ ಸಂಸ್ಥೆಯ ಗೊತ್ತು ಗುರಿಗಳನ್ನು ತಲುಪಲು ಅತ್ಯಂತ ಅವಶ್ಯಕ. ಇದನ್ನೇ ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದಲ್ಲಿ ಮೊದಲ ಹೆಜ್ಜೆ ಅಥವಾ ಪ್ರಾರಂಭ (Initiative) ಎನ್ನುವ ತತ್ವ. ಪ್ರಾರಂಭದಲ್ಲೇ ಇಂಥ ಸಕಾರಾತ್ಮಕ ಹೆಜ್ಜೆಗಳು ಗುರಿ ಮತ್ತು ಉದ್ದೇಶಗಳು ಈಡೇರುವಲ್ಲಿ ಮತ್ತು ಸಂಸ್ಥೆಯನ್ನು ಮುನ್ನಡೆಸುವಲ್ಲಿ ಸಹಕಾರಿಯಾಗುತ್ತವೆ. ಪ್ರಾರಂಭದ ಹಂತದಲ್ಲಿಯೇ ನೌಕರರು ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವುದನ್ನು ಈ ವಚನ ಪರಿಣಾಮಕಾರಿಯಾಗಿ ವಿಶ್ಲೇಷಣೆ ಮಾಡಿದೆ. “ಭಾಷೆ ಪಲ್ಲಟವಾಗಬಾರದು” ಅಂದರೆ ಗುರಿಯನ್ನು ತಲುಪುವಲ್ಲಿ ತಪ್ಪು ಹೆಜ್ಜೆಗಳನ್ನಿಡಬಾರದು. ತನು ಮನದಿಂದ ಗುರಿಯನ್ನು ತಲುಪುವಲ್ಲಿ ಪ್ರಯತ್ನ ಸಾಗಬೇಕು. ಭವ ಬಂಧನದಲ್ಲಿ ಕುಳಿತು ಭ್ರಮಾಲೋಕವನ್ನು ಸೃಷ್ಟಿಸಿಕೊಂಡರೆ ಗುರಿ ತಲುಪುವುದೆ ಹೇಗೆ ಎಂದು ಪ್ರಶ್ನಿಸುತ್ತಾರೆ ಅಲ್ಲಮ ಪ್ರಭುಗಳು ಈ ವಚನದಲ್ಲಿ. ಇಂಥ ಪ್ರಭುದ್ಧ ಚಿಂತನೆಗಳನ್ನು ಅಳವಡಿಸಿಕೊಂಡು ಸಮ ಸಮಾಜವನ್ನು ಕಟ್ಟಿದವರು ಬಸವಾದಿ ಶರಣರು.
14. ನೈತಿಕ ಆದರ್ಶ ಅಥವಾ ಸ್ಥೈರ್ಯ (Esprit de Corps-Morale) : Keeping a high level of morale and team spirit is an essential part of having the most productive organization possible. Happy and motivated employees are far more likely to be productive and less absent.
ಸಂಸ್ಥೆಯ ಮತ್ತು ನೌಕರ ವರ್ಗದವರ ಉನ್ನತ ಮಟ್ಟದ ನೈತಿಕತೆ ಮತ್ತು ಉನ್ನತ ಮಟ್ಟದ ಆದರ್ಶಗಳು ಆ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಬೆಳೆಸುವಲ್ಲಿ ಅತ್ಯಂತ ಅವಶ್ಯಕ ತತ್ವ. ಉತ್ತಮ ಬೇಳೆ ತೆಗೆಯಲು ಫಲವತ್ತಾದ ಹೊಲ ಹೇಗೆ ಬೇಕೋ ಹಾಗೇಯೇ ಈ ಉನ್ನತ ಮಟ್ಟದ ನೈತಿಕತೆ ಮತ್ತು ಉನ್ನತ ಮಟ್ಟದ ಆದರ್ಶಗಳು ಸಂಸ್ಥೆಯನ್ನು ಉನ್ನತಕ್ಕೇರಿಸಲು ಸಹಾಯಕವಾಗುತ್ತವೆ.
ಕಾಯಕ ತತ್ವದ ರಾಯಭಾರಿಯಾಗಿರುವ “ಆಯ್ದಕ್ಕಿ ಲಕ್ಕಮ್ಮ” ನವರ ಕಾಯಕ ನಿಷ್ಠೆ, ನೈತಿಕತೆಯ ಪ್ರಜ್ಞೆ ಅನುಪಮ ಮತ್ತು ಅಲೌಕಿಕವಾದದ್ದು. ಅದ್ಭುತ ವಚನದ ಮೂಲಕ ನೈತಿಕ ಆದರ್ಶ ಅಥವಾ ಸ್ಥೈರ್ಯ (Esprit de Corps-Morale) ಹೇಗಿರಬೇಕೆಂಬುದನ್ನು ನಿರೂಪಿದ್ದಾರೆ. ಮನಃಶುದ್ಧಿಯಿಂದ ಕಾಯಕ ಮಾಡಿದರೆ ಎಲ್ಲೆಡೆ ಸಂಪತ್ತಿನ ಮಳೆಯಾಗುತ್ತದೆ ಎನ್ನುವುದನ್ನು ಹೇಳಿದ್ದಾರೆ.
ಮನ ಶುದ್ಧವಿಲ್ಲದವಂಗೆ | ದ್ರವ್ಯದ ಬಡತನವಲ್ಲದೆ || ಚಿತ್ತಶುದ್ಧದಲ್ಲಿ | ಕಾಯಕವ ಮಾಡುವಲ್ಲಿ || ಸದ್ಭಕ್ತಂಗೆ ಎತ್ತ ನೋಡಿದತ್ತತ್ತ | ಲಕ್ಷ್ಮಿ ತಾನಾಗಿಪ್ಪಳು || ಮಾರಯ್ಯಪ್ರಿಯ ಅಮರೇಶ್ವರಲಿಂಗದ | ಸೇವೆಯುಳ್ಳನ್ನಕ್ಕರ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-867 / ವಚನ ಸಂಖ್ಯೆ-724)
ಸಂಸ್ಥೆಯಲ್ಲಿ ಕೆಲಸ ಮಾಡುವವರು ಸದ್ಭಕ್ತರ ಹಾಗಿರಬೇಕೆಂಬುದು ಈ ವಚನದ ಸಾರಾಂಶ. ಇದೇ ಆಧುನಿಕ ನಿರ್ವಣಾ ವಿಜ್ಞಾನ (Modern Management Science) ದ ನೈತಿಕ ಆದರ್ಶ ಅಥವಾ ಸ್ಥೈರ್ಯ (Esprit de Corps-Morale) ಎನ್ನುವ ತತ್ವ. ನೈತಿಕ ಶುದ್ಧವಿದ್ದಲ್ಲಿ ಸಂಘ ಮತ್ತು ಸಂಸ್ಥೆಗಳು ಉನ್ನತ ಮಟ್ಟಕ್ಕೆ ಏರುವುದರಲ್ಲಿ ಸಂಶಯವೇ ಬೇಡ. ಇಂಥ ಉದಾತ್ತ ಚಿಂತನೆಯನ್ನು ಶರಣೆ ಆಯ್ದಕ್ಕಿ ಲಕ್ಕಮ್ಮನವರು 12 ನೇ ಶತಮಾನದಲ್ಲಿಯೇ ನಮ್ಮ ಮುಂದೆ ತೆರೆದಿಟ್ಟಿದ್ದಾರೆ.
ಇಡೀ ಪ್ರಪಂಚದ ಎಲ್ಲ ದೇಶಗಳು ಪರಂಪರೆ ಮತ್ತು ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ರೀತಿ ನೀತಿಗಳನ್ನು ರೂಪಿಸುವುದರಲ್ಲಿ ತೊಡಗಿಸಿಕೊಂಡಿವೆ. ಆದರೆ ಭಾರತದ ಮಾದರಿಗಳು (Models) ಮತ್ತು ನೀತಿಗಳು (Policies) ಸರಿ ಸುಮಾರು 7500 ವರ್ಷಗಳಿಂದ ಇದೇ ತಳಹದಿಯ ಮೇಲೆ ನಡೆದು ಬಂದಿರುವುದನ್ನು ನಾವು ಕಾಣಬಹುದು. 1800 ವರ್ಷಗಳ ಸಮಗ್ರ ನೀತಿಗಳ ಇತಿಹಾಸವಿರುವ ಭಾರತದ ಮಾದರಿಗಳು ಎಲ್ಲ ರೀತಿಯಿಂದಲೂ ಪರಿಕ್ಷೆಗೊಳಪಟ್ಟು ಸಧೃಢವಾಗಿ ಅನುಷ್ಠಾನಗೊಂಡಿರುವ ಮಾದರಿಗಳು (Articulated, Tested and Successfully Implimented Policies and Models). ಪ್ರಪಂಚದ ವ್ಯವಸ್ಥೆಗಳು ತಲ್ಲಣಗೊಂಡಿರುವ ಈ ಸಂಕಷ್ಟ ಕಾಲದಲ್ಲಿ ಎಲ್ಲ ದೇಶಗಳು ಭಾರತದ ಮಾದರಿಗಳತ್ತ ನೋಡುವಂತಾಗಿದೆ. ಪ್ರಪಂಚದಲ್ಲಿ ಸಂಸ್ಕೃತಿ, ಪರಂಪರೆ ಮತ್ತು ನೈತಿಕತೆಯ ತಳಹದಿಗಳು ಕುಸಿದಿರುವ ಈ ಸಂಕಷ್ಟ ಕಾಲದಲ್ಲಿ ಇವಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಭಾರತಕ್ಕೆ ಎಲ್ಲ ಅವಕಾಶಗಳ ಬಾಗಿಲುಗಳು ತೆರೆದುಕೊಂಡಿವೆ. ಅತ್ಯಂತ ಕುತೂಹಲಕರ ಘಟ್ಟದಲ್ಲಿ ನಾವಿದ್ದೇವೆ. ಮುಂದಿನ 20 ವರ್ಷಗಳು ಭಾರತಕ್ಕೆ ಪರೀಕ್ಷೆಯ ಸಮಯ. ಭಾರತವು ಮತ್ತೇ ಉನ್ನತ ಮಟ್ಟಕ್ಕೇರುವ ಎಲ್ಲ ಸಾಧ್ಯತೆ ಮತ್ತು ಅವಕಾಶಗಳೂ ಇವೆ. ಆದರೆ ಭಾರತ ನಿರೀಕ್ಷಿಸಿದ ಮಟ್ಟದಲ್ಲಿ ಬೆಳೆಯುತ್ತಿಲ್ಲ ಎನ್ನುವುದೇ ಸಧ್ಯದ ಸವಾಲು.
“ಜಾತಸ್ಯ ಮರಣಂ ಧೃವಂ” ಎನ್ನುವ ನಾಣ್ಣುಡಿಯಂತೆ ನಾವೆಲ್ಲರೂ ಒಂದು ದಿನ ನಿರ್ಗಮಿಸುವವರೆ. ಆದರೆ ಹೋಗುವ ಮುನ್ನ ಸಮಾಜಕ್ಕೆ ಮತ್ತು ಸಮಷ್ಠಿಯಲ್ಲಿ ನಾವು ಬದುಕಿದ್ದೆವು ಎನ್ನುವುದಕ್ಕೆ ಏನಾದರೂ ಸಾಧನೆಯನ್ನು ಅಥವಾ ಸಮಾಜಕ್ಕೆ ಕೊಡುಗೆಯನ್ನು ನೀಡಿ ಹೋಗಬೇಕೆಂಬ ಸದಾಶಯವನ್ನುಳ್ಳ ಬಸವಣ್ಣನವರ ಈ ಅದ್ಭುತ ಮತ್ತು ಅನುಪಮ ವಚನದ ಮೂಲಕ ಲೇಖನಕ್ಕೆ ವಿರಾಮ ಹೇಳುತ್ತೇನೆ.
ಹೊತ್ತಾರೆ ಎದ್ದು | ಅಗ್ಘವಣೆ ಪತ್ರೆಯ ತಂದು || ಹೊತ್ತು ಹೋಗದ ಮುನ್ನ | ಪೂಜಿಸು ಲಿಂಗವ || ಹೊತ್ತು ಹೋದ ಬಳಿಕ | ನಿನ್ನನಾರು ಬಲ್ಲರು? || ಹೊತ್ತು ಹೋಗದ ಮುನ್ನ | ಮೃತ್ಯುವೊಯ್ಯದ ಮುನ್ನ || ತೊತ್ತುಗೆಲಸವ ಮಾಡು | ಕೂಡಲಸಂಗಮದೇವಾ || (ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-24 / ವಚನ ಸಂಖ್ಯೆ-172)
ಲೇಖನ : ವಿಜಯಕುಮಾರ ಕಮ್ಮಾರ ತುಮಕೂರು ಮೋಬೈಲ್ ನಂ : 9741 357 132 ಈ-ಮೇಲ್ : vijikammar@gmail.com |