e-ಸುದ್ದಿ, ಮಸ್ಕಿ
ತಾಲೂಕಿನ ಉಟಕನೂರಿನ ಬಸವಲಿಂಗ ತಾತನ ಜಾತ್ರ ಮಹೋತ್ಸವ ಇತ್ತಿಚಿಗೆ ಶುಕ್ರವಾರ ಸರಳವಾಗಿ ಆಚರಿಸಲಾಯಿತು.
ಪ್ರತಿವರ್ಷದಂತೆ ಈ ವರ್ಷ ಕೂಡ ತಾತನ ಜಾತ್ರೆ ನಡೆಯಿತು. ಕರೊನಾ ಹಿನ್ನಲೆಯಲ್ಲಿ ಅತೀ ಹೆಚ್ಚು ಜನರನ್ನು ಸೇರಿಸದೆ ಕರೊನಾ ಮುಂಜಾಗ್ರತ ಕ್ರಮವಾಗಿ ಮುನ್ನಚ್ಚರಿಕೆಯಿಂದ ಜಾತ್ರೆ ನಡೆಸಿದರು.
ಬೆಳಿಗ್ಗೆ ಬಸವಲಿಂಗ ತಾತನ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚಾನೆ ಕಾರ್ಯಕ್ರಮಗಳು ಜರುಗಿದವು. ಸಂಜೆ ಮಸ್ಕಿಯ ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು, ಉಟಗನೂರಿನ ಮರಿಬಸವರಾಜ ದೇಶಿಕೇಂದ್ರ ಮಹಾಸ್ವಾಮೀಜಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೇ ನೀಡಿದರು.
ನೆರದಿದ್ದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಪುನಿತರಾದರು. ಆ.18 ರಿಂದ ಫೇ.5 ರವರೆಗೆ ಮರಿಬಸವಲಿಂಗತಾತನ ಕುರಿತು ಆಧ್ಯತ್ಮೀಕಪ್ರವಚನ ನಡೆಸಲಾಯಿತು. ಜಾತ್ರೆಯೊಂದಿಗೆ ಪ್ರವಚನ ಕಾರ್ಯಕ್ರಮ ಮುಕ್ತಾಗೊಳಿಸಲಾಯಿತು.