ಬಾಳು ಮನವೆ
ಬಾಳು ಮನವೆ
ಹರುಷದಿ
ನುಡಿದರೆಲ್ಲ
ಬಾರರು ನಿನ್ನ ಕಾಲ
ನಡಿಗೆಯಲಿ
ಬಾಳು ಮನವೆ
ಹರುಷದಿ
ಕಾಮಾಲೆ ಕಣ್ಣಿಂದ
ಕಾಣುತಿಹರು
ಕಳಂಕದ ಅಂಗನೆಯ
ಬಾಳು ಮನವೆ
ಹರುಷದಿ
ದೂರ ದಾರಿ
ಕಾಳ ಕತ್ತಲೆ
ನೋವ ನುಂಗಿ
ಬದುಕಬೇಕು
ಸತ್ಯ ನುಡಿದು
ಮುಕ್ತಿ ಕಾಣು
ಬಾಳು ಮನವೆ
ಹರುಷದಿ
-ವೀಣಾ ಸುರೇಶ ಮಂಡ್ಯ