ಪ್ರೀತಿ

*ಪ್ರೀತಿ*


ಈ ಪ್ರಕೃತಿಯ ಮಡಿಲಲ್ಲಿ ಜನಿಸಿರುವ ಪ್ರತಿಯೊಂದು ಜೀವಿಯೂ ಬದುಕಿರುವವರೆಗೂ ಪ್ರೀತಿಯಿಂದ ಬಾಳುತ್ತವೆ……
ತನ್ನನ್ನು ತಾನು ಪ್ರೀತಿಸುವವರು ಈ ಸುಂದರ ಪ್ರಕೃತಿಯನ್ನೂ ಪ್ರೀತಿಸುತ್ತಾನೆ. ರಾಗ, ದ್ವೇಷಗಳನ್ನು ಅಳಿಸಿ ಎಲ್ಲರನ್ನೂ ಪ್ರೀತಿಸುವವರ ಮನಸ್ಸು ಯಾವಾಗಲೂ ಪ್ರಶಾಂತವಾಗಿರುತ್ತದೆ…

*ಪ್ರೀತಿ ಎಂದರೆ ಏನು*… *?*
ಪ್ರೀತಿ ಎಂದರೆ ………
ಸುಂದರ ಅನುಭವ
ಅನುರಾಗ
ಪಾವಿತ್ರ್ಯತೆ
ತ್ಯಾಗ
ಭಂಧನ
ಬಲಿದಾನ
ವಯಸ್ಸು,ಜಾತಿ,ಲಿಂಗ ಭೇಧಗಳಿಲ್ಲದೆ ಹುಟ್ಟಿಕೊಳ್ಳುವ ಈ ಪ್ರೀತಿಗೆ ಜಗತ್ತನ್ನೇ ಮೈಮರೆಸುವ ಶಕ್ತಿ ಇದೆ …
ಈ ಪ್ರೀತಿಗಾಗಿ ಯುದ್ಧಗಳೇ ನಡೆದಿವೆ. ಪ್ರೀತಿ ವ್ಯಾಮೋಹದಿಂದ ಜಿಗುಪ್ಸೆ ಹೊಂದಿರುವವನು ಮಾತ್ರ ಯೋಗಿಯಾಗಿ ಬದುಕುತ್ತಿದ್ದಾನೆ.
ಆದರೆ ಈ ಪ್ರಕೃತಿಯಲ್ಲಿ ಇಲ್ಲದಿದ್ದರೆ ಎಲ್ಲವೂ ನಾಶವಾಗುತ್ತದೆ. ಗಂಡು ಹೆಣ್ಣಿನ ಪ್ರೀತಿ ಪ್ರೇಮ ಪವಿತ್ರವಾದದ್ದು
ಎರಡು ಜೀವಿಗಳಲ್ಲಿ ಹುಟ್ಟಿ ಕೊಳ್ಳುವ ಈ ಪ್ರೀತಿ ಎಂದೂ ಅಮರ… ಬದುಕಿರುವವರೆಗೂ ಉಳಿಸಿಕೊಂಡು ಹೋದರೆ ಸಾಥ೯ಕ ಬಾಳು ನಮ್ಮದಾಗುತ್ತದೆ. ಪ್ರೇಮಿಗಳ ದಿನಕ್ಕೊಂದು ಅಥ೯ ಸಿಗುತ್ತದೆ..
ಎಲ್ಲರಿಗೂ ಶುಭವಾಗಲಿ…


*ಗೀತಾ ಜಿ ಎಸ್, ಶಿವಮೊಗ್ಗ*

Don`t copy text!