ಮಾತು ಜ್ಯೋತಿರ್ಲಿಂಗ (01)
ಮಾತೇ ಮುತ್ತು” ಮಾತೇ ಮೃತ್ಯು”
ಮಾತಿನಿಂದಲೇ ಸನ್ಮಾನ” ಮಾತಿನಿಂದಲೇ ಅವಮಾನ”
ನುಡಿವ ಪ್ರತಿ ಶಬ್ಧಗಳ ಕುರಿತು ಅಣ್ಣ ಬಸವಣ್ಣನವರ ವಚನವೂ ಇದೆ
ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು ?
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲ ಸಂಗಮದೇವನೆಂತೊಲಿವನಯ್ಯ,,?
ಎನ್ನುತ್ತಾರೆ ಬಸವಣ್ಣನವರು
ಹೌದು ಬಂಧುಗಳೆ
ನುಡಿ ಮುತ್ತಿನ ಹಾರದಂತೆಯೇ
ಇರಬೇಕೆಂದು ಏಕೆ ಹೇಳ್ತಾರೆ
ಹೌದು” ಮುತ್ತಿನ ಹಾರವನ್ನೇ ಏಕೆ ಉದಾಹರಣೆಯಾಗಿ ತೆಗೆದುಕೊಂಡರು,,? ಬಸವಣ್ಣನವರು. ಇಲ್ಲಿದೆ ಉತ್ತರ
“ನುಡಿದರೆ ಮುತ್ತಿನ ಹಾರದಂತಿರಬೇಕು”
ಮುತ್ತಿನ ಹಾರ ಹೇಗಿರುತ್ತದೆ
ಒಂದಕ್ಕೊಂದು ಹತ್ತಿರವಾಗಿ ಕೂಡಿರುತ್ತವೆ ಮುತ್ತುಗಳು
ಅದರಂತೆಯೇ ನಡೆ ನುಡಿಗಳು ಒಂದಾಗಿರಬೇಕು ನುಡಿಯೆಂಬ ಮುತ್ತಿಗೆ ನಡೆಯೆಂಬ ದಾರ ಕೂಡಿದರೆ ಸಂಗನ ಕೊರಳಿಗೆ ಮುತ್ತಿನ ಹಾರವಾಗುತ್ತದೆ.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು”
ಮಾಣಿಕ್ಯದ ದೀಪ್ತಿಗೆ
ಮಾಣಿಕ್ಯದ ಬೆಳಕಿಗೆ ಯಾವುದೇ ತೈಲ ಬೇಕಾಗಿಲ್ಲ ಯಾರೂ ಹಚ್ಚಬೇಕಿಲ್ಲ
ಅದೊಂದು ಸ್ವಯಂ ಪ್ರಕಾಶಿತವಾದ ವಸ್ತು
ಅದರಂತೆಯೇ
ನಮ್ಮ ಮಾತು ಕೂಡ ಸ್ವಯಂ ಪ್ರಕಾಶಿತವಾಗಿರಬೇಕು ಅಂತರಂಗದಿಂದ ಬರುವ ಅರಿವು ಸ್ವಯಂ ಪ್ರಕಾಶಿತ ಜ್ಞಾನದಿಂದ ಕೂಡಿರಬೇಕು
ಮೊದಲನೆಯದಾಗಿ ಮನಸ್ಸಿನಿಂದ ಬಂದಿರಬೇಕು
ಮತ್ತೊಬ್ಬರ ಮಾತು ಕಿವಿಯಲ್ಲಿ ಹಾಕಿಕೊಂಡು ಅದನ್ನೇ ನುಡಿಯಬಾರದು.
ತನ್ನ ನುಡಿ ಅಂತಃಕರಣದಿಂದ ಬರಬೇಕು ಮಾಣಿಕ್ಯದ ದೀಪ್ತಿಯಂತೆ ಸ್ವಯಂ ಪ್ರಕಾಶವಾಗಿ…
“ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು”
ಸ್ಫಟಿಕ ಎಷ್ಟು ಪಾರದರ್ಶಕವಾದದ್ದು (Transparent)
ಉದಾಹರಣೆಗೆ ಗಾಜಿನ Glassನಂತೆ
ಆ ಕಡೆಯಿಂದ ನೋಡಿದರೆ ಈ ಕಡೆಯವರೂ ಕಾಣುತ್ತಾರೆ
ಈ ಕಡೆಯಿಂದ ನೋಡಿದರೆ ಆ ಕಡೆಯಾವರೂ ಕಾಣುತ್ತಾರೆ
ಹಾಗೆಯೇ ನಡೆ ನುಡಿಯಲ್ಲಿ ಪಾರದರ್ಶಕತೆ ಇರಬೇಕು
ನಡೆಗೆ ತಕ್ಕ ನುಡಿ”ನುಡಿಗೆ ತಕ್ಕ ನಡೆ” ನಡೆ ನುಡಿಯಲ್ಲಿ Transparency ಇರಬೇಕು
ಆಗ ನುಡಿ ಸ್ಫಟಿಕದ ಶಲಾಕೆಯಂತಾಗುತ್ತಾದೆ.
“ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’
ಲಿಂಗ” ಎಂದರೆ ಅಂತಃಕರಣ
ಲಿಂಗ” ಎಂದರೆ ಆತ್ಮಸಾಕ್ಷಿ
ಲಿಂಗ” ಎಂದರೆ ಸಮಾಜ ಜಗತ್ತು
ಇಲ್ಲಿ ನುಡಿಯುವ ಮಾತಿನಿಂದ
ಉರಿವ ಬೆಂಕಿಗೆ ತುಪ್ಪ ಸುರಿದಂತಾಗಬಾರದು.
ನೋದ ಜೀವದ ಅಂತಃಕರಣ ಮನಸ್ಸು ಕರಗುವಂತಿರಬೇಕೇ ಹೊರತು ಕೊರಗುವಂತಿರಬಾರದು.
ನಮ್ಮ ಮಾತಿನಿಂದ ಮತ್ತೊಬ್ಬರ ಮನಸ್ಸು ಅರಳಬೇಕೇ ವಿನಃ ಕೆರಳಬಾರದು.
ನಿನ್ನ ಮಾತಿನಿಂದ ನಿನಗೂ ಒಳಿತಾಗಬೇಕು.
ಸಮಾಜಕ್ಕೂ ಒಳಿತಾಗಬೇಕು.
ಮಾತಿನಿಂದಲೇ ಸನ್ಮಾನ”
ಅದೇ ಮಾತಿನಿಂದಲೇ ಅವಮಾನ.
ಒಳ್ಳೆ ಮಾತೇ ಮುತ್ತು”
ಕೆಟ್ಟ ಮಾತಿನಿಂದಲೇ ಮೃತ್ಯು”
ಅದಕ್ಕಾಗಿ “ಲಿಂಗ” ಎಂದರೆ ಆತ್ಮಪ್ರಜ್ಞೆ ಜಗತ್ತು ಮೆಚ್ಚಿ ಅಹುದಹುದೆನಬೇಕು.
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲ ಸಂಗಮದೇವನೆಂತೊಲಿವನಯ್ಯ,,?
ನುಡಿದಂತೆ ನಡೆಯಿಲ್ಲದಿದ್ದರೆ
ಅದಕ್ಕೆ ಬೆಲೆಯಿಲ್ಲ.
ನುಡಿದಂತೆ ನಡೆಯದಿದ್ದರೆ ನಿನ್ನ ಆತ್ಮಸಾಕ್ಷಿಯಾದ ಲಿಂಗವು ಮೆಚ್ಚುವುದಿಲ್ಲ
ಸಮಾಜವು ಮೆಚ್ಚುವುದಿಲ್ಲ.
ಇನ್ನು ಕಡೆಯದಾಗಿ ಭಗವಂತನೂ ಒಲಿಯುವುದಿಲ್ಲ ಕೈಯಿಡಿವುದಿಲ್ಲ…
ಅದಕ್ಕೆ ಶರಣರು “ಮಾತು ಜ್ಯೋತಿರ್ಲಿಂಗ” ಎಂದಿದ್ದಾರೆ…
✍🏻ಲೇಖನ–ಲೋಕೇಶ್ ಎನ್ ಮಾನ್ವಿ.
*”ಮಾತು ಜ್ಯೋತಿರ್ಲಿಂಗ”(01)*
ಮುಂದುವರೆಯುವುದು….