ಡಾ.ಬಸವರಾಜ ಕೊಡಗುಂಟಿ ಅವರಿಗೆ ಜಯಶಾಂತ ಸಾಹಿತ್ಯ ಸಿರಿ ಪ್ರಶಸ್ತಿ ಗೆ ಆಯ್ಕೆ
e-ಸುದ್ದಿ, ವಿಜಾಪುರ
ಮಸ್ಕಿಯವರಾದ ಡಾ. ಬಸವರಾಜ ಕೊಡಗುಂಟಿ, ಕನ್ನಡ ಪ್ರಾಧ್ಯಾಪಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ ಕಲಬುರಗಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಜಗದಾರಾಧ್ಯ ಶ್ರೀ ಜಯಶಾಂತಲಿಂಗೇಶ್ವರ ಬ್ರಹನ್ಮಠ ಜಾಲಹಳ್ಳಿ- ವಿಜಯಪುರ ದಿಂದ ಕೊಡಮಾಡುವ 2021 ರ “ಜಯಶಾಂತ ಸಾಹಿತ್ಯ ಸಿರಿ ” ಪ್ರಶಸ್ತಿಗೆ ಆಯ್ಕೆ ಮಾಡಿರುವದಾಗಿ ಮನು ಪತ್ತಾರ ಆಯ್ಕೆ ಸಮತಿ ಸದಸ್ಯರು ತಿಳಿಸಿದ್ದಾರೆ.
ಫೆಬ್ರುವರಿಯ 27 ರಂದು ವಿಜಯಪುರ ದ ಶ್ರೀಮಠದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ “ಜಯಶಾಂತ ಸಾಹಿತ್ಯ ಸಿರಿ” ಪ್ರಶಸ್ತಿಯನ್ನು ಹಾಗೂ ಶ್ರೀಮಠದ ಗೌರವದ ಶ್ರೀರಕ್ಷೆಯನ್ನು ಪ್ರಧಾನ ಮಾಡಲಿದ್ದಾರೆ.