e-ಸುದ್ದಿ, ಮಸ್ಕಿ
ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಲ್ಲಿ ಮಂಜೂರಾದ ಮನೆಗಳ ಬ್ಲಾಕ್ ತೆರವುಗೊಳಿಸಿ ಹಾಗೂ 2020-21ನೇ ಸಾಲಿನ ಆಶ್ರಯ ಯೋಜನೆಯಲ್ಲಿ 1000 ಮನೆಗಳನ್ನು ಮಂಜೂರು ಮಾಡುವಂತೆ ವಸತಿ ಸಚಿವ ವಿ.ಸೋಮಣ್ಣನವರಿಗೆ ಪುರಸಭೆ ಅಧ್ಯಕ್ಷೆ ವೀಜಯಲಕ್ಷ್ಮಿ ಪಾಟೀಲ್ ಈ ಹಿಂದೆ ಪತ್ರ ಬರೆದು ಮನವಿ ಮಾಡಿದ್ದರು.
ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಅರ್ಹ ಪಲಾನುಭವಿಗಳಿಗೆ ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಮಂಜೂರು ಆಗಿರುವ 120 ವಸತಿ ಮನೆಗಳು ಬ್ಲಾಕ್ ಆಗಿದ್ದು, ಅನ್‍ಬ್ಲಾಕ್ ಮಾಡಿ ಪಲಾನಾಭುವಿಗಳಿಗೆ ಅನೂಕೂಲ ಮಾಡಿಬೇಕು ಹಾಗೂ 2020-21ನೇ ಸಾಲಿನ ಆಶ್ರಯ ಯೋಜನೆಯಲ್ಲಿ 1000 ಮನೆಗಳನ್ನು ಗುರಿ ನಿಗಧಿಪಡಿಸಿ ಮಂಜೂರು ಮಾಡುವಂತೆ ಸಚಿವರಿಗೆ ಪತ್ರ ಬರೆದು ಕೊರಿದ್ದರು.
ಪತ್ರಕ್ಕೆ ಸ್ಪಂದಿಸಿದ ವಸತಿ ಸಚಿವ ಸೋಮಣ್ಣನವರು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಸತಿ ನಿಗಮದ ಅಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿ ಭರವಸೆ ನೀಡಿದ್ದಾರೆ ಎಂದು ಪುರಸಭೆ ಅಧ್ಯಕ್ಷೆ ವೀಜಯಲಕ್ಷ್ಮಿ ಬಸನಗೌಡ ಪೊಲೀಸ್ ಪಾಟೀಲ್ ಪತ್ರಿಕೆಗೆ ಬುಧವಾರ ತಿಳಿಸಿದ್ದಾರೆ.