ಗ್ರಹಣ
ಹೃದಯದಲ್ಲಿ ಹೃದಯವರಿಯದ
ಧ್ವನಿಯೊಂದು ಅಂಕುರಿಸಿ,
ಮನದಿಂದ ಜಗವನರಿಯುವ
ಭಾವವೊಂದು ಪಲ್ಲವಿಸಲು..,
ಅಶ್ರು ತುಂಬಿದ ನಯನಂಗಳೊಂದೆಡೆ,
ಕಂಬನಿಯನ್ನರಿಯದ ಕಂಗಳೊಂದೆಡೆ,
ಕರಳಿನ ಕಿರುಚಾಟವೊಂದೆಡೆ,
ಕಿರುಚಾಟವನರಿಯದ ಮನವೊಂದೆಡೆ..,
ತಮಂಧದ ಸೆರೆಯಾಳುಗಳೊಂದೆಡೆ,
ಸೆರೆಗೆ ಸಿಲುಕದ ದೀಪಗಳೊಂದೆಡೆ,
ಮರೆಯಾಗದ ಮಿಥ್ಯಗಳೊಂದೆಡೆ,
ಅರಿಯಲಾಗದ ಸತ್ಯಗಳೊಂದೆಡೆ..,
ಅಸಮಾನತೆಯ ಗ್ರಹಣ ಬಿಟ್ಟು,
ಬೆಳಕ ಚೆಲ್ಲಲಿ ಈ ರವಿಯಿಂದು,
ಸೃಷ್ಟಿಯ ಕಣಕಣಗಳಲ್ಲಿ,
ಹೃದಯದ ಕೋಣೆ ಕೋಣೆಗಳಲ್ಲಿ…
–ಲಕ್ಷ್ಮೀ ಮಾನಸ